ಕರ್ನಾಟಕ

karnataka

ETV Bharat / entertainment

Coz I Luv U: ಗಾಯಕರಿಲ್ಲ! ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ತಯಾರಾಯ್ತು ಆಲ್ಬಂ ಸಾಂಗ್​! - ಕಾಜ್ ಐ ಲವ್​ ಯೂ

ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) ಅಥವಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಂಡು ಆಲ್ಬಂ ಸಾಂಗ್ ಒಂದು ರೆಡಿಯಾಗಿದೆ.

Coz I Luv U album song team
COZ I LUV U ಆಲ್ಬಂ ಸಾಂಗ್​ ತಂಡ

By

Published : Jun 28, 2023, 5:08 PM IST

ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಮತ್ತು ಕಲಾತ್ಮಕ ಸಿನಿಮಾಗಳ‌ ಮಧ್ಯೆ ಆಲ್ಬಂ ಸಾಂಗ್​​ಗಳು ಹಿಟ್ ಆಗುವ ಮೂಲಕ ಸಿನಿಮಾ ಪ್ರೇಮಿಗಳನ್ನು ರಂಜಿಸುತ್ತಿವೆ. ಗಾಯಕರಿಲ್ಲದೇ COZ I LUV U ಶೀರ್ಷಿಕೆಯ ಆಲ್ಬಂ ಸಾಂಗ್ ಒಂದನ್ನು ನಿರ್ಮಾಣ ಮಾಡಲಾಗಿದೆ. ನಿರ್ದೇಶಕ ಡಾ.ಎಸ್. ಮಹೇಶ್ ಬಾಬು ಹೊಸತನಕ್ಕೆ ನಾಂದಿ ಹಾಡಿದ್ದಾರೆ.

ತಂತ್ರಜ್ಞಾನ ಮುಂದುವರೆದಂತೆ ಅನೇಕ ಹೊಸ ಪ್ರಯೋಗಗಳಿಗೆ ದಾರಿ ಮಾಡಿಕೊಡುತ್ತಿದೆ. ಅಂತಹ ವಿನೂತನ ಪ್ರಯತ್ನದಲ್ಲಿ "COZ I LUV U" ಆಲ್ಬಂ ಹಾಡು ನಿರ್ಮಾಣ ಮಾಡಲಾಗಿದೆ. ಇತ್ತೀಚೆಗೆ ಈ ಹಾಡಿನ ಪ್ರದರ್ಶನದ ಜೊತೆಗೆ ಇದರ ಸ್ಪೆಷಾಲಿಟಿ ಬಗ್ಗೆ ನಿರ್ದೇಶಕ ಮಹೇಶ್ ಬಾಬು ಹಾಗು ತಂಡ ಹಂಚಿಕೊಂಡಿದೆ.

COZ I LUV U ಆಲ್ಬಂ ಸಾಂಗ್​ ತಂಡ

COZ I LUV U ಆಲ್ಬಂನ ನಿರ್ದೇಶಕ ಎಸ್. ಮಹೇಶ್ ಬಾಬು ಮಾತನಾಡಿ, ನಾನು ಮೂಲತಃ ಊಟಿಯವನು. ಬೆಂಗಳೂರಿಗೆ ಬಂದು ಮೂರು ವರ್ಷಗಳಾಯಿತು. ನನಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿಕೊಂಡು ಹೊಸ ಪ್ರಯತ್ನ ಮಾಡಬೇಕೆಂದೆನಿಸಿತು. ಅದರ ಮೊದಲ ಹೆಜ್ಜೆಯಾಗಿ ಈ ಆಲ್ಬಂ ಸಾಂಗ್ ಅನ್ನು ಮಾಡಿದ್ದೇನೆ. ಇದರ ವಿಶೇಷತೆ ಏನೆಂದರೆ ಈ ಹಾಡನ್ನು ಯಾವ ಗಾಯಕ ಗಾಯಕಿಯೂ ಹಾಡಿಲ್ಲ. ಸಾಹಿತ್ಯವನ್ನು ಸಾಫ್ಟ್​ವೇರ್​ಗೆ ಫೀಡ್​ ಮಾಡಿ, ಗಂಡು ಮತ್ತು ಹೆಣ್ಣಿನ ದನಿಯನ್ನು ಹೊಂದಿಸಿದ್ದೇನೆ. ನನಗೆ ತಿಳಿದ ಹಾಗೆ ಪ್ರಪಂಚದಲ್ಲೇ ಇದನ್ನು ಮೊದಲ ಪ್ರಯೋಗ ಎನ್ನಬಹುದು.

ನನಗೆ ಈ ಕುರಿತು ರಿಸರ್ಚ್ ಮಾಡಲು 6 ತಿಂಗಳು ಹಿಡಿಯಿತು. ನಾನೇ ಹಾಡು ಬರೆದು, ಸಂಗೀತ ನೀಡಿ, AI ಟೆಕ್ನಾಲಜಿ ಬಳಸಿ ನಿರ್ಮಾಣ ಮಾಡುವುದರ ಜೊತೆಗೆ ನಿರ್ದೇಶನ ಮಾಡಿದ್ದೇನೆ. ಇಂಗ್ಲಿಷ್ ಭಾಷೆಯಲ್ಲಿ ಈ ಹಾಡು ಮೂಡಿಬಂದಿದೆ. ಇಂಗ್ಲಿಷ್​​ನಲ್ಲಿ ಮಾಡಲು ಕಾರಣವೇನೆಂದರೆ, ಈ ಹೊಸ ತಂತ್ರಜ್ಞಾನ ವಿಶ್ವವ್ಯಾಪಿಯಾಗಬೇಕೆಂಬುದು. ಹಾಡಿನಲ್ಲಿ ಇರಾನ್ ಕಲಾವಿದೆ ಐರಾ ಫರಿದ್, ರೇವಂತ್ ರಾಮಕುಮಾರ್, ಯೋಗೇಶ್ ಮಲ್ಲಿಕಾರ್ಜುನ ಹಾಗೂ ಲೀನಾ ಕುಮಾರನ್ ಅಭಿನಯಿಸಿದ್ದಾರೆ ಎಂದರು.

ಇದನ್ನೂ ಓದಿ:72 Hoorain Trailer: ಉಗ್ರವಾದ ಕುರಿತ ಸಿನಿಮಾ ಟ್ರೇಲರ್​ಗೆ ಸಿಗದ ಸಿಬಿಎಫ್​ಸಿ ಸಮ್ಮತಿ!

ಈ ತಂತ್ರಜ್ಞಾನವನ್ನು ಯಾವ ಭಾಷೆಯಲ್ಲಿ ಬೇಕಾದರೂ ಬಳಸಿಕೊಳ್ಳಬಹುದು. ಮುಂದೆ ಕನ್ನಡ ರಾಜ್ಯೋತ್ಸವದ ಸಮಯಕ್ಕೆ ಇದೇ ತಂತ್ರಜ್ಞಾನದಿಂದ ಕನ್ನಡ ಹಾಡೊಂದನ್ನು ಮಾಡುವ ಯೋಜನೆ ಇದೆ. ಆಲ್ಬಂ ಹಾಡು ಮಾಡುವುದಕ್ಕೂ ಮುನ್ನ ಕೋವಿಡ್​​ ಕಾಲದಲ್ಲಿ "ಪ್ರಾಪ್ತಿ" ಎಂಬ ಕನ್ನಡ ಸಿನಿಮಾ ಮಾಡಿದ್ದೇನೆ. ಅದು ಕೂಡ ತೆರೆಗೆ ಬರಲು ಸಿದ್ಧವಿದೆ. ಆದರೆ ಆ ಸಿನಿಮಾದಲ್ಲಿ ನಾನು ಈ ಹೊಸ ತಂತ್ರಜ್ಞಾನ ಬಳಸಿಲ್ಲ. ಈ ನೂತನ ತಂತ್ರಜ್ಞಾನದಿಂದ ಗಾಯಕರಿಗೆ ಏನೂ ತೊಂದರೆಯಾಗುವುದಿಲ್ಲ.‌ ಆಸಕ್ತಿವುಳ್ಳವರು ತಮ್ಮ ಸಿನಿಮಾದ ಒಂದು ಹಾಡಿಗೆ ಈ ತಂತ್ರಜ್ಞಾನ ‌ಬಳಸಿಕೊಳ್ಳಬಹುದು. ಈಗಾಗಲೇ ನಮ್ಮ ಯೂಟ್ಯೂಬ್ ಚಾನಲ್​ನಲ್ಲಿ ಈ ಹಾಡು ಹಾಗೂ ಹಾಡಿನ ಮೇಕಿಂಗ್ ಬಿಡುಗಡೆ ಮಾಡಿದ್ದೇವೆ‌. ಆರೂವರೆ ನಿಮಿಷಗಳ ಈ ಹಾಡು ಗಿನ್ನಿಸ್ ರೆಕಾರ್ಡ್ ಆಗುವ ಸಾಧ್ಯತೆ ಕೂಡ ಇದೆ‌. ನಮ್ಮ ಈ ಹೊಸ ಪ್ರಯತ್ನಕ್ಕೆ ಗೆಲುವು ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಹಾಸ್ಟೆಲ್ ಹುಡುಗರ ತಂಡಕ್ಕೆ ದೂದ್ ಪೇಡಾ ದಿಗಂತ್ ಸಾಥ್​

ABOUT THE AUTHOR

...view details