ಕರ್ನಾಟಕ

karnataka

ETV Bharat / entertainment

ವೈರಲ್​ ವಿಡಿಯೋ: ನಿರೂಪಕಿಗೆ ಹಾರ ಹಾಕಿದ ಕೂಲ್​ ಸುರೇಶ್​​ - ತಮಿಳು ನಟನ ವಿರುದ್ಧ ಆಕ್ರೋಶ - ನಿರೂಪಕಿಗೆ ಹಾರ ಹಾಕಿದ ಕೂಲ್​ ಸುರೇಶ್

Cool Suresh viral video: ಸರಕ್ಕು ಆಡಿಯೋ ಲಾಂಚ್​ ಈವೆಂಟ್​ನಲ್ಲಿ, ತಮಿಳು ನಟ ಕೂಲ್​ ಸುರೇಶ್ ಇದ್ದಕ್ಕಿದ್ದಂತೆ ನಿರೂಪಕಿಗೆ ಹಾರ ಹಾಕಿ ಸುದ್ದಿಯಾಗಿದ್ದಾರೆ. ​​

Tamil actor Cool Suresh
ತಮಿಳು ನಟ ಕೂಲ್​ ಸುರೇಶ್

By ETV Bharat Karnataka Team

Published : Sep 20, 2023, 4:49 PM IST

ಸಿನಿಮಾ ಈವೆಂಟ್​ಗಳಲ್ಲಿ ವಿಚಿತ್ರ ವರ್ತನೆ ಮೂಲಕ ಸುದ್ದಿಯಾಗುವ ತಮಿಳು ನಟ ಕೂಲ್​ ಸುರೇಶ್ (Cool Suresh)​ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತಮಿಳು ನಟನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ತೀವ್ರ ಖಂಡನೆ ವ್ಯಕ್ತವಾಗಿದೆ.

ನಿರೂಪಕಿಗೆ ಬಲವಂತವಾಗಿ ಹೂವಿನ ಹಾರ ಹಾಕಿದ ನಟ:ಇತ್ತೀಚೆಗೆ ಸರಕ್ಕು ಸಿನಿಮಾದ ಆಡಿಯೋ ಲಾಂಚ್ ಈವೆಂಟ್​ನಲ್ಲಿ ತಮಿಳು ನಟ ಕೂಲ್​ ಸುರೇಶ್ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ನಟ ಮಾತನಾಡುತ್ತಿದ್ದ ವೇಳೆ ವೇದಿಕೆಯಲ್ಲಿದ್ದ ನಿರೂಪಕಿಗೆ ಬಲವಂತವಾಗಿ ಹೂವಿನ ಹಾರ ಹಾಕಿ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಈ ಬಗ್ಗೆ ನೆಟ್ಟಿಗರಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ವೈರಲ್​ ವಿಡಿಯೋದಲ್ಲೇನಿದೆ?ಸರಕ್ಕು ಸಿನಿಮಾದ ಆಡಿಯೋ ಲಾಂಚ್ ಈವೆಂಟ್​ನಲ್ಲಿ ಮಾತನಾಡುತ್ತಿದ್ದ ವೇಳೆ, ಕೂಲ್​ ಸುರೇಶ್​ ಅವರು ಪಕ್ಕದಲ್ಲೇ ನಿಂತಿದ್ದ ನಿರೂಪಕಿಗೆ ಹಾರ ಹಾಕಿ ಎಲ್ಲರನ್ನೂ ಅಚ್ಚರಿಗೊಳಿಸಿದರು. ಇದನ್ನು ತಮ್ಮ ಮೆಚ್ಚುಗೆ ಎಂದು ನಟ ಸಮಜಾಯಿಷಿ ಕೊಟ್ಟರು. ಆದ್ರೆ ಅನಿರೀಕ್ಷಿತ ಘಟನೆಯಿಂದ ನಿರೂಪಕಿ ಅಸಮಧಾನಗೊಂಡಿದ್ದಾರೆಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಸಹನಟ ಮನ್ಸೂರ್​ ಅಲಿ ಖಾನ್​ ಕ್ಷಮೆಯಾಚನೆ:ನಂತರ ಸಹನಟ ಮನ್ಸೂರ್​ ಅಲಿ ಖಾನ್​ ವೇದಿಕೆಗೆ ಆಗಮಿಸಿ, ನಟ ಕೂಲ್​ ಸುರೇಶ್ ಅವರ ವರ್ತನೆಗೆ ಕ್ಷಮೆಯಾಚಿಸಿದ್ದಾರೆ. ಕೂಲ್​ ಸುರೇಶ್​ ಮಾಡಿದ್ದು ತಪ್ಪು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಕೂಲ್​ ಸುರೇಶ್​ ಕೂಡ ತಮ್ಮ ವರ್ತನೆಗೆ ಕ್ಷಮೆಯಾಚಿಸಿದ್ದಾರೆ. ಅದಾಗ್ಯೂ ಘಟನೆ ಆನ್​ಲೈನ್​ನಲ್ಲಿ ಚರ್ಚೆಯ ವಿಷಯವಾಗಿದೆ. ನಟ ಕೂಲ್​ ಸುರೇಶ್ ಅವರನ್ನು ಟೀಕಿಸಲಾಗಿದೆ. ಹಲವರು ಈ ಘಟನೆಯನ್ನು ಕಿರುಕುಳ ಎಂದು ಕರೆದಿದ್ದಾರೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣರನ್ನು ನಿರ್ಲಕ್ಷಿಸಿದ್ರಾ ಶ್ರದ್ಧಾ ಕಪೂರ್​? ವಿಡಿಯೋ ನೋಡಿ ನೆಟ್ಟಿಗರು ಹೀಗಂದ್ರು!

ನೆಟ್ಟಿಗರಿಂದ ಟೀಕೆ: ಸಾಮಾಜಿಕ ಜಾಲತಾಣ ಬಳಕೆದಾರರು ಕೇವಲ ಕೂಲ್​ ಸುರೇಶ್​ ವಿರುದ್ಧ ಟೀಕಿಸಿಲ್ಲ. ನಟನ ವರ್ತನೆಯನ್ನು ಬೆಂಬಲಿಸಿದವರಿಗೆ, ಚಪ್ಪಾಳೆ ತಟ್ಟಿದವರ ವಿರುದ್ಧವೂ ಅಸಮಧಾನ ಹೊರಹಾಕಿದ್ದಾರೆ. ನಟನ ಈ ವರ್ತನೆ ನಿಂದನೀಯ ಎಂದ ತಿಳಿಸಿದರು. ಅಲ್ಲದೇ, ಚಲನಚಿತ್ರ ನಿರ್ಮಾಪಕರು ಪ್ರಮೋಶನಲ್​ ಈವೆಂಟ್​, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೂಲ್​ ಸುರೇಶ್ ಅವರನ್ನು ನೇಮಿಸಿಕೊಳ್ಳುವ ವಿಚಾರವಾಗಿ ಮರುಪರಿಶೀಲಿಸಬೇಕಿದೆ ಎಂದು ಕೂಡ ನೆಟ್ಟಿಗರು ತಿಳಿಸಿದ್ದಾರೆ.

ಇದನ್ನೂ ಓದಿ:ಅಕ್ಕಿನೇನಿ ನಾಗೇಶ್ವರ್​ ರಾವ್ ಪಂಚಲೋಹ ಪ್ರತಿಮೆ ಉದ್ಘಾಟನೆ.. ಅಕ್ಕಿನೇನಿ ಕಟುಂಬ ಸೇರಿ ಟಾಲಿವುಡ್​ ಸೆಲೆಬ್ರಿಟಿಗಳು ಭಾಗಿ

ಕೂಲ್​ ಸುರೇಶ್ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ರಿಲೀಸ್​ ಟೈಮಲ್ಲಿ ಚಲನಚಿತ್ರ ನಿರ್ಮಾಪಕರು ಪ್ರೇಕ್ಷಕರ ಗಮನ ಸೆಳೆಯಲು ಇವರನ್ನು ನೇಮಿಸಿಕೊಳ್ಳೋದುಂಟು. ಪ್ರಮೋಶನಲ್​​ ಈವೆಂಟ್, ಸಾವರ್ಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸದ್ದು ಮಾಡುತ್ತಾರೆ. ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸೋದುಂಟು ಎಂಬುದು ಹಲವರ ಅಭಿಪ್ರಾಯ. ಅದರಂತೆ ಇದೀಗ ಸರಕ್ಕು ಸಿನಿಮಾ ಈವೆಂಟ್​ನಲ್ಲಿ ತಮ್ಮ ವರ್ತನೆಯಿಂದಾಗಿ ಟೀಕೆಗೊಳಗಾಗಿದ್ದಾರೆ. ​​

ABOUT THE AUTHOR

...view details