ನವದೆಹಲಿ: ಕೇಸರಿ ಬಣ್ಣದ ವಿಚಾರವಾಗಿ ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಬಹು ನಿರೀಕ್ಷಿತ ಪಠಾಣ್ ಚಿತ್ರದಲ್ಲಿ ದೀಪಿಕಾ ಕೇಸರಿ ಬಣ್ಣ ತುಂಡುಡುಗೆ ಧರಿಸಿದ್ದು ದೊಡ್ಡ ಮಟ್ಟದ ವಿವಾದ ಎಬ್ಬಿಸಿತ್ತು. ಇದೀಗ ದೀಪಿಕಾ ಹಾಕಿಕೊಂಡಿರುವ ಕೇಸರಿ ಬಣ್ಣದ ಸ್ಯಾಂಡಲ್‌ಗಳ ಬಗ್ಗೆ ವಿವಾದ ಪ್ರಾರಂಭವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಇದನ್ನೂ ಓದಿ:ಬೇಷರಮ್ ರಂಗ್ ವಿವಾದ: 'ಪಠಾಣ್' ಬಾಯ್ಕಾಟ್ಗೆ ದನಿಗೂಡಿಸಿದ ಸಾಧು ಸಂತರು
ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ ಬೇಷರಮ್ ರಂಗ್ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದು ಸಾಕಷ್ಟು ಕೋಲಾಹಲ ಎಬ್ಬಿಸಿತ್ತು. ಕೇಸರಿ ಬಣ್ಣವು ಹಿಂದೂಗಳು ಪೂಜ್ಯನೀಯ ಬಣ್ಣವಾಗಿದೆ. ಇಂತಹ ಬಣ್ಣದ ಬಿಕಿನಿ ತೊಟ್ಟಿರುವುದು ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದೆ. ಹಿಂದೂಗಳಿಗೆ ಅಪಮಾನ ಮಾಡುವ ಉದ್ದೇಶದಿಂದಲೇ ಚಿತ್ರದಲ್ಲಿ ಕೇಸರಿ ಬಣ್ಣದ ಬಿಕಿನಿ ಬಳಕೆ ಮಾಡಲಾಗಿದೆ ಎಂಬೆಲ್ಲ ಆರೋಪಗಳು ಕೇಳಿ ಬಂದಿತ್ತು. ಅಲ್ಲದೇ, ಪಠಾಣ್ ಚಿತ್ರವನ್ನು ಬಾಯ್ಕಾಟ್ ಮಾಡಬೇಕೆಂಬ ಕೂಗು ಸಹ ಎದ್ದಿತ್ತು. ಇದರ ಬೆನ್ನಲ್ಲೆ ದೀಪಿಕಾ ಧರಿಸಿರುವ ಕೇಸರಿ ಬಣ್ಣದ ಚಪ್ಪಲಿಗಳ ಚಿತ್ರಗಳು ಮುನ್ನಲೆಗೆ ಬಂದಿದ್ದು, ಮತ್ತೆ ಟೀಕೆ - ಟಿಪ್ಪಣಿ ಶುರುವಾಗಿದೆ.
ಏನಿದು ದೀಪಿಕಾ ಚಪ್ಪಲಿ ವಿವಾದ?: ನಟಿ ದೀಪಿಕಾ ಪಡುಕೋಣೆ ನೀಲಿ ಮತ್ತು ಬಿಳಿ ಗೆರೆಗಳ ಪ್ಯಾಂಟ್ ಶೂಟ್ ಧರಿಸಿ ಕೇಸರಿ ಬಣ್ಣದ ಚಪ್ಪಲಿ ಹಾಕಿಕೊಂಡಿರುವ ಹಳೆ ಪೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋವನ್ನು ಶೇರ್ ಮಾಡುವ ಮೂಲಕ ಟ್ರೋಲರ್‌ಗಳು ತಮ್ಮ ಪೇಜ್ಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಪಠಾಣ್ ಚಿತ್ರದಲ್ಲಿನ ಕೇಸರಿ ಬಣ್ಣ ವಿವಾದದ ಬಗ್ಗೆ ದೀಪಿಕಾ ಪಡುಕೋಣೆ ಅವರನ್ನು ಬಹಿಷ್ಕರಿಸುವಂತೆ ಕರೆ ನೀಡುತ್ತಿರುವ ವಿಚಾರವನ್ನೂ ಈ ಫೋಟೋದ ಸುತ್ತ ಎಳೆದು ತರಲಾಗುತ್ತಿದೆ.