ದಾವಣಗೆರೆ: ಕ್ಯಾಸಿನೋ ಆಡಿಸುವ ನೆಪದಲ್ಲಿ ಹಣ ಪಡೆದು ವಂಚನೆ ಮಾಡಿರುವ ಆರೋಪದಡಿ ಹಿರಿಯ ನಟ ದೊಡ್ಡಣ್ಣ ಅವರ ಅಳಿಯ ವೀರೇಂದ್ರ ಅಲಿಯಾಸ್ ಪಪ್ಪಿ ವಿರುದ್ಧ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆಯ ವೆಂಕಟೇಶ್ ಎಂಬ ಯುವಕನಿಗೆ ವಂಚನೆ ಮಾಡಿರುವ ಆರೋಪ ಸಂಬಂಧ ಎಫ್ಐಆರ್ ದಾಖಲಾಗಿದೆ. ಕಿರಣ್, ಚೇತನ್, ಸೂರಜ್ ಕುಟ್ಟಿ, ಚಿತ್ರದುರ್ಗದ ವೀರೇಂದ್ರ ಅಲಿಯಾಸ್ ಪಪ್ಪಿ ವಿರುದ್ಧ ದೂರು ದಾಖಲಾಗಿದೆ. ಕಿರಣ್ ಮತ್ತು ಚೇತನ್ ಎಂಬುವರು ಪೊಲೀಸರ ವಶದಲ್ಲಿದ್ದಾರೆ. ಸೂರಜ್ ಕುಟ್ಟಿ ಮತ್ತು ವೀರೇಂದ್ರ ಪಪ್ಪಿ ತಲೆಮರೆಸಿಕೊಂಡಿದ್ದಾರೆ.