ವಿಶೇಷ ಚೇತನರನ್ನು ಅಪಹಾಸ್ಯ ಮಾಡಿದ ಆರೋಪದ ಮೇಲೆ ಬಾಲಿವುಡ್‌ನ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮತ್ತು ಶಭಾಷ್ ಮಿಥು ಸಿನಿಮಾ ವಿರುದ್ಧ ನವದೆಹಲಿಯ ಕಮಿಷನರ್ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.
ದೂರುದಾರ ಡಾ.ಸತೇಂದ್ರ ಸಿಂಗ್ ಎಂಬುವರು ತಮ್ಮ ದೂರಿನ ಮೇರೆಗೆ ಕಮಿಷನರ್ ನ್ಯಾಯಾಲಯವು ನೀಡಿದ ನೋಟಿಸ್‌ನ ಪ್ರತಿಯನ್ನು ಹಂಚಿಕೊಂಡಿದ್ದಾರೆ. ಆದಾಗ್ಯೂ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಈ ವಿಷಯದ ಬಗ್ಗೆ ಯಾವುದೇ ದೃಢೀಕರಣವನ್ನು ಸ್ವೀಕರಿಸಲಾಗಿಲ್ಲ.
ನೋಟಿಸ್ ಪ್ರಕಾರ, ವಿಕಲಚೇತನರ ನ್ಯಾಯಾಲಯವು ಲಾಲ್ ಸಿಂಗ್ ಚಡ್ಡಾ ಮತ್ತು ಶಭಾಷ್ ಮಿಥು ನಿರ್ದೇಶಕರು, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಈ ವಿಷಯದ ಬಗ್ಗೆ ಪ್ರತಿಕ್ರಿಯೆಗಳನ್ನು ಕೇಳಿದೆ.
ವಿಶೇಷಚೇತನರ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ಮೂಲಕ ಈ ಚಲನ ಚಿತ್ರಗಳು ವಿಕಲಚೇತನರ ಹಕ್ಕುಗಳ ಕಾಯ್ದೆ 2016ರ ನಿಬಂಧನೆಗಳನ್ನು ಉಲ್ಲಂಘಿಸುತ್ತವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ:2 ವರ್ಷಗಳ ನಂತರ ಇಂಡಿಯನ್ 2 ಚಿತ್ರೀಕರಣ ಪುನರಾರಂಭ