ಕರ್ನಾಟಕ

karnataka

ETV Bharat / entertainment

ಚಿಕ್ಕಮಗಳೂರಿನಲ್ಲಿ ಅಪಘಾತ ಪ್ರಕರಣ.. ಹಾಗೆ ಅನ್ನಬಾರದಿತ್ತು, ಅದಕ್ಕೆ ಕ್ಷಮೆ ಕೇಳ್ತೇನಿ ಎಂದ ನಟ ಚಂದ್ರಪ್ರಭ - etv bharat kannada

‘‘ಬೈಕ್​ ಸವಾರ ಕುಡಿದಿದ್ದ ಎಂದು ಹೇಳಿದ್ದೆ. ಆದರೆ, ಆತ ಕುಡಿದಿರಲಿಲ್ಲ" ಎಂದು ಚಿಕ್ಕಮಗಳೂರು ಅಪಘಾತ ​ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯ ನಟ ಚಂದ್ರಪ್ರಭ ಕ್ಷಮೆಯಾಚಿಸಿದ್ದಾರೆ.

Comedy Actor Chandraprabha statement on chikmagalur accident case
ಹಿಟ್​ ಆಂಡ್​ ರನ್ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಹಾಸ್ಯ ನಟ ಚಂದ್ರಪ್ರಭ​

By ETV Bharat Karnataka Team

Published : Sep 8, 2023, 5:31 PM IST

ಹಿಟ್​ ಆಂಡ್​ ರನ್ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಹಾಸ್ಯ ನಟ ಚಂದ್ರಪ್ರಭ​

ಚಿಕ್ಕಮಗಳೂರು: ಕನ್ನಡದ ಕಾಮಿಡಿ ಶೋ ಮೂಲಕ ಜನಪ್ರಿಯತೆ ಪಡೆದಿರುವ ಹಾಸ್ಯ ನಟ ಚಂದ್ರಪ್ರಭ ಅವರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಿದ್ದಾರೆ. ಇತ್ತೀಚೆಗೆ ಅವರು ಚಲಿಸುತ್ತಿದ್ದ ಕಾರು ಚಿಕ್ಕಮಗಳೂರು ಬಳಿ ಮಾಲತೇಶ್​ ಎಂಬ ಬೈಕ್​ ಸವಾರನಿಗೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ತಮ್ಮದು ಯಾವುದೇ ತಪ್ಪು ಇಲ್ಲ. ಬೈಕ್​ ಸವಾರ ಮದ್ಯಪಾನ ಮಾಡಿದ್ದ ಎಂದು ಚಂದ್ರಪ್ರಭ ಈ ಮೊದಲು ಹೇಳಿಕೆ ನೀಡಿದ್ದರು. ಇದೀಗ ತಮ್ಮ ಹೇಳಿಕೆ ಬದಲಿಸಿರುವ ಅವರು, ಅಪಘಾತಕ್ಕೆ ಒಳಗಾದ ವ್ಯಕ್ತಿ ಕುಡಿದಿದ್ದ ಎಂದು ತಪ್ಪಾಗಿ ಭಾವಿಸಿ ಹೇಳಿದ್ದೆ, ಆದರೆ ಅವರು ಕುಡಿದಿರಲಿಲ್ಲ. ಆ ಬಗ್ಗೆ ತಾವು ಕ್ಷಮೆ ಕೇಳುವುದಾಗಿ ಹೇಳಿದ್ದಾರೆ.

ಚಂದ್ರಪ್ರಭ ಹೇಳಿದ್ದೇನು?: ಇಂದು ಚಿಕ್ಕಮಗಳೂರಿನ ಸಂಚಾರಿ ಪೊಲೀಸ್​ ಠಾಣೆಗೆ ವಿಚಾರಣೆಗೆ ಆಗಮಿಸಿದ್ದ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಚಂದ್ರಪ್ರಭ, ತಾವು ನೀಡಿದ್ದ ಮೊದಲಿನ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ. ಬೈಕ್​ ಸವಾರ ಕುಡಿದಿದ್ದ ಎಂದು ಹೇಳಿದ್ದೆ. ಆದರೆ ಆತ ನಿಜವಾಗಿಯೂ ಕುಡಿದಿರಲಿಲ್ಲ, ಆ ಬಗ್ಗೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು: ಕಾರಿನಡಿ ಸಿಲುಕಿದ ಬೈಕ್ ಎಳೆದೊಯ್ದ ಚಾಲಕ- ವಿಡಿಯೋ

"ಅಪಘಾತವಾದ ಯುವಕನ ಯೋಗಕ್ಷೇಮವನ್ನು ನಾನು ವಿಚಾರಿಸಬೇಕಿತ್ತು. ಆದರೆ ನಾನು ವಿಚಾರಿಸಲಿಲ್ಲ. ನನ್ನನ್ನು ಕ್ಷಮಿಸಿ. ನಾನು ಬಡವ, ಅವರು ಕೂಡ ಬಡವರು. ನಾನು ಕೂಡ ತಂದೆ ಕಳೆದುಕೊಂಡು 11 ವರ್ಷದಿಂದ ನೋವಿನಲ್ಲಿದ್ದೇನೆ. ನನಗೆ ಎಲ್ಲವೂ ಅರ್ಥವಾಗುತ್ತದೆ. ಅವರ ಕಷ್ಟಕ್ಕೆ ನಾನು ಖಂಡಿತ ನೆರವಾಗುತ್ತೇನೆ. ನನ್ನ ಕೈಯಲ್ಲಾದ ಸಹಾಯ ಮಾಡುತ್ತೇನೆ. ಮಾಲತೇಶ್​ ಅವರ ಆಸ್ಪತ್ರೆ ಖರ್ಚು ನನ್ನ ಕೈಲಾದಷ್ಟು ಭರಿಸುತ್ತೇನೆ. ನಾನು ಮಾಡಿದ್ದು ತಪ್ಪು. ಗಾಯಾಳು ಮಾಲ್ತೇಶ್​ ಮದ್ಯಪಾನ ಮಾಡಿರಲಿಲ್ಲ. ಈ ವಿಚಾರವಾಗಿ ನಾನು ಕಾನೂನು ಕ್ರಮಕ್ಕೆ ಬದ್ಧನಾಗಿದ್ದೇನೆ" ಎಂದು ಹೇಳಿಕೆ ನೀಡಿದ್ದಾರೆ.

ಘಟನೆ ಹಿನ್ನೆಲೆ:ಸೆಪ್ಟೆಂಬರ್​ ​ 4ರಂದು ಮಧ್ಯರಾತ್ರಿ ಚಿಕ್ಕಮಗಳೂರು ನಗರದ ಕೆಎಸ್​ಆರ್​ಟಿ ಬಸ್​ ನಿಲ್ದಾಣದ ಮುಂಭಾಗದಲ್ಲಿ ಬೈಕ್​ ಸವಾರನಿಗೆ ನಟ ಚಂದ್ರಪ್ರಭ ಸಂಚರಿಸುತ್ತಿದ್ದ ಕಾರು ಡಿಕ್ಕಿಯಾಗಿತ್ತು. ಅಪಘಾತವಾದ ತಕ್ಷಣ ಅವರು ಕಾರು ನಿಲ್ಲಿಸದೇ ಹೋಗಿದ್ದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ್ದ ಚಂದ್ರಪ್ರಭ, "ಆತ ಕುಡಿದು ಬೈಕ್​ ಓಡಿಸುತ್ತಿದ್ದ. ಅವನನ್ನು ನಾನೇ ಆಸ್ಪತ್ರೆಗೆ ಸೇರಿಸಿ ಬಂದೆ. ಈ ಪ್ರಕರಣದಲ್ಲಿ ನನ್ನದೇನು ತಪ್ಪಿಲ್ಲ" ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್: ತಂದೆ ಮಗ ಸಾವು, ಅಳಿಯನ ಸ್ಥಿತಿ ಗಂಭೀರ..ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ABOUT THE AUTHOR

...view details