ಕನ್ನಡದ ಹೆಸರಾಂತ ಉದ್ಯಮಿ ವಿಜಯ ಸಂಕೇಶ್ವರ್ ಅವರ ಜೀವನಾಧಾರಿತ ಸಿನಿಮಾ 'ವಿಜಯಾನಂದ'. ಈ ಸಿನಿಮಾದ ಅಫೀಶಿಯಲ್ ಟ್ರೈಲರ್ ಅನ್ನು ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಗೊಳಿಸಲಾಗಿದೆ.
ಕನ್ನಡ ಟ್ರೈಲರ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿ, ವಿಜಯ ಸಂಕೇಶ್ವರ್ ಅವರಿಗೆ ಯಶಸ್ಸಿನ ಹಸಿವಿದೆ. ಏನಾದರೂ ಹೊಸದನ್ನು ಮಾಡುತ್ತಲೇ ಇರುತ್ತಾರೆ. ವಯಸ್ಸಿನ ಹಂಗು ಅವರಿಗಿಲ್ಲ. ಅವರ ಜೀವನಾಧಾರಿತ ಚಿತ್ರ ಮೆಗಾ ಹಿಟ್ ಆಗಲಿದೆ ಎಂದರು.
ವಿಜಯ ಸಂಕೇಶ್ವರ್ ಅಡ್ವೆಂಚರ್ ಮನೋಭಾವದವರು. ಇಡೀ ಜಗತ್ತು ಎಲ್ಲಿ ಹೋಗಬೇಡ ಅನ್ನುತ್ತದೋ ಅಲ್ಲಿಗೆ ಹೋಗ್ತಾರೆ. ಯಾವುದನ್ನು ಮಾಡಬೇಡ ಅನ್ನುತ್ತಾರೋ ಅದನ್ನೇ ಮಾಡ್ತಾರೆ. ಅವರು ನೋ ಎನ್ನುವುದನ್ನು ಸ್ಪಷ್ಟವಾಗಿ ಹೇಳ್ತಾರೆ. ನೋ ಅಂತ ಹೇಳಲು ಎಲ್ಲರಿಗೂ ಆಗುವುದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.