ಇಂದೋರ್(ಮಧ್ಯಪ್ರದೇಶ):ಮ್ಯಾಗಜೀನ್ಗಾಗಿ ವಿವಸ್ತ್ರ ಫೋಟೋಶೂಟ್ ಮಾಡಿಸಿಕೊಂಡು ವಿವಾದಕ್ಕೀಡಾದ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಮಧ್ಯಪ್ರದೇಶದ ಇಂದೋರ್ನ ಎನ್ಜಿಒ ಸಂಸ್ಥೆಯೊಂದು "ದಾನ" ಮಾಡಲು ವಸ್ತ್ರಗಳ ಸಂಗ್ರಹಣೆ ಅಭಿಯಾನವನ್ನು ಆಯೋಜಿಸಿದೆ.
ನೇಕಿ ಕಿ ದೀವಾರ್ ಎಂಬ ಸರ್ಕಾರೇತರ ಸಂಸ್ಥೆ ನಟನ ನಗ್ನ ಫೋಟೋವನ್ನು ಅಂಟಿಸಿರುವ ಬಾಕ್ಸ್ ಅನ್ನು ಸಂಸ್ಥೆ ಕಚೇರಿಯ ಮುಂದೆ ಮತ್ತು ಅಲ್ಲಲ್ಲಿ ಸಾರ್ವಜನಿಕ ಸ್ಥಳಗಳಲ್ಲಿಟ್ಟು, ಸಾರ್ವಜನಿಕರಿಂದ ಬಟ್ಟೆ ಸಂಗ್ರಹಿಸುತ್ತಿದೆ. ಜನರು ಬಾಕ್ಸ್ಗಳಿಗೆ ತಮ್ಮಲ್ಲಿನ ಬಟ್ಟೆಗಳನ್ನು ತಂದು ಹಾಕುತ್ತಿದ್ದು, ಅದನ್ನು ಸಂಸ್ಥೆಯ ಸಿಬ್ಬಂದಿ ಒಟ್ಟುಗೂಡಿಸುತ್ತಿದ್ದಾರೆ.