ಪಣಜಿ(ಗೋವಾ):ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು ಪಂಜಿಮ್ನ ಮಿರಾಮರ್ ಬೀಚ್ನಲ್ಲಿಂದು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದು, ಬಾಲಿವುಡ್ ನಟರಾದ ಜಾಕಿ ಶ್ರಾಫ್ ಮತ್ತು ಕರಣ್ ಕುಂದ್ರಾ ಕೈ ಜೋಡಿಸಿದರು.
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಪ್ರಮೋದ್ ಸಾವಂತ್, ಬೀಚ್ ತೀರವನ್ನು ಸ್ವಚ್ಛವಾಗಿಡುವ ಕೆಲಸ ಮಾಡುತ್ತಿದ್ದೇವೆ. ಸ್ವಚ್ಛ ಬೀಚ್ ಅನ್ನು ನಾವು ಮುಂದಿನ ಪೀಳಿಗೆಗೂ ಒಪ್ಪಿಸಬೇಕು ಎಂದು ಹೇಳಿದರು.
ಗೋವಾ ಬೀಚ್ನಲ್ಲಿ ಸ್ವಚ್ಛತಾ ಅಭಿಯಾನ; ಜಾಕಿ ಶ್ರಾಫ್, ಕರಣ್ ಕುಂದ್ರಾ ಭಾಗಿ "ಬೀಚ್ ಶುಚಿಗೊಳಿಸಲು ಸಾಕಷ್ಟು ಜನ ಬಂದಿದ್ದು ಖುಷಿಯಾಗಿದೆ. ಅಲ್ಲದೇ ನಾವು ಗೋವಾಕ್ಕೆ ಆಗಾಗ ಶೂಟಿಂಗ್ಗೆಂದು ಬರುತ್ತಿರುತ್ತೇವೆ. ಇಲ್ಲಿನ ಸೌಂದರ್ಯವನ್ನು ಕಾಪಾಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ" ಎಂದು ನಟ ಕರಣ್ ಕುಂದ್ರಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಟ ಜಾಕಿ ಶ್ರಾಫ್ ಮಾತನಾಡಿ, "ಇದು ನಿಮ್ಮ ಭೂಮಿ ತಾಯಿ. ಹಾಗಿದ್ದ ಮೇಲೆ ಈ ತಾಯಿಯನ್ನು ಗೌರವಿಸಬೇಕು. ನಿಮ್ಮ ಹೃದಯವನ್ನು ಸ್ವಚ್ಛವಾಗಿರಿಸಿಕೊಳ್ಳಿ. ಜೊತೆಗೆ ನಿಮ್ಮ ಸುತ್ತಮುತ್ತಲ ಪ್ರದೇಶವನ್ನೂ ಸ್ವಚ್ಛವಾಗಿಡಿ" ಎಂದು ಹೇಳಿದರು.
ಇದನ್ನೂ ಓದಿ:ಮೆಟ್ರೋ ರೈಲು ಪ್ರಯಾಣದ ಖುಷಿ ಅನುಭವಿಸಿದ ರೆಬಲ್ ಸ್ಟಾರ್ ಸುಪುತ್ರ