ಕರ್ನಾಟಕ

karnataka

ETV Bharat / entertainment

ತ್ರಿವಿಕ್ರಮನಿಗೆ ಮನಸೋತ ಸಿನಿಮಾ ಪ್ರೇಕ್ಷಕರು.. ವಿಕ್ರಮ್​ಗೆ 'ಭರವಸೆಯ ನಟ' ಎಂದ ಅಭಿಮಾನಿಗಳು - ತ್ರಿವಿಕ್ರಮ ರಿವ್ಯೂವ್

ರಾಜ್ಯಾದ್ಯಂತ ತೆರೆ ಕಂಡಿರುವ ತ್ರಿವಿಕ್ರಮ ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Cinema audiences compliments on Trivikrama film
ತ್ರಿವಿಕ್ರಮನಿಗೆ ಮನಸೋತ ಸಿನಿಮಾ ಪ್ರೇಕ್ಷಕರು

By

Published : Jun 24, 2022, 1:16 PM IST

ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ಎಂದೇ ಕರೆಸಿಕೊಳ್ಳುವ ರವಿಚಂದ್ರನ್​​ ಅವರ ಎರಡನೇ ಮಗ ವಿಕ್ರಮ್ ರವಿಚಂದ್ರನ್ ಅವರು ತ್ರಿವಿಕ್ರಮ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ್ದಾರೆ. ರಾಜ್ಯಾದ್ಯಂತ ತೆರೆ ಕಂಡಿರುವ ತ್ರಿವಿಕ್ರಮ ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಮಾಗಡಿ ರಸ್ತೆಯ ವಿಕ್ಟರಿ ಚಿತ್ರಮಂದಿರದಲ್ಲಿ ನಿನ್ನೆ ರಾತ್ರಿ ಸ್ಪೆಷಲ್ ಪ್ರಿಮಿಯರ್ ಶೋ ಅನ್ನು ಹಮ್ಮಿಕೊಳ್ಳಲಾಯಿತ್ತು. ತ್ರಿವಿಕ್ರಮ ಸಿನಿಮಾ ನೋಡಿದ ಅಭಿಮಾನಿಗಳು, ವಿಕ್ಕಿ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಕ್ಕಾ ಫ್ಯಾಮಿಲಿ ಎಂಟರ್​ಟೈನ್​ಮೆಂಟ್ ಕಥೆ ಆಧರಿಸಿರೋ ತ್ರಿವಿಕ್ರಮನಿಗೆ ಸಿನಿಮಾ ಪ್ರಿಯರು ಮನ ಸೋತಿದ್ದಾರೆ. ವಿಕ್ರಮ್ ರವಿಚಂದ್ರನ್ ಕನ್ನಡದ ಭರವಸೆಯ ನಟನಾಗಿ ಮಿಂಚು ಹರಿಸಲಿದ್ದಾರೆ ಅನ್ನೋದು ಸಿನಿಮಾ ನೋಡಿದವರ ಮಾತು.

ಸಿನಿಮಾ ಬಗ್ಗೆ ಅಭಿಮಾನಿಗಳ ಅಭಿಪ್ರಾಯ

ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಕಥೆ ಆಧರಿಸಿರೋ ತ್ರಿವಿಕ್ರಮ ಸಿನಿಮಾದಲ್ಲಿ, ವಿಕ್ರಮ್ ರವಿಚಂದ್ರನ್, ಆಕಾಂಕ್ಷಾ ಶರ್ಮಾ ಅಲ್ಲದೇ ಹಿರಿಯ ನಟಿ ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ. ಸಹನಾ ಮೂರ್ತಿ ತ್ರಿವಿಕ್ರಮನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಪ್ಲೀಸ್ ಮಮ್ಮಿ, ಹನಿ ಬನಿ ಫೀಲ್ ಮೈ ಲವ್ ಹಾಗೂ ಶಕುಂತಲಾ ಶೇಕ್ ಯುವರ್ ಬಾಡಿ ಪ್ಲೀಸ್ ಹಾಡುಗಳು ಪ್ರೇಕ್ಷಕರಿಗೆ ಇಷ್ಟವಾಗಿವೆ. ಸಂತೋಷ್ ರೈ ಪತಾಜೆ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ ಪ್ರಕಾಶ್ ಸಂಕಲನವಿದೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿ ತಯಾರಾಗಿರುವ ಈ ಚಿತ್ರಕ್ಕೆ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ.

ಸಿನಿಮಾ ಬಗ್ಗೆ ಚಿತ್ರತಂಡದಿಂದ ಮಾಹಿತಿ

ಇದನ್ನೂ ಓದಿ:ಮಲೆನಾಡಿನಲ್ಲಿ ಚಿತ್ರೀಕರಣಗೊಂಡಿರುವ ರೊಮ್ಯಾಂಟಿಕ್ ಮರ್ಡರ್ ಮಿಸ್ಟ್ರಿ 'ವಿಂಡೋಸೀಟ್ '

ABOUT THE AUTHOR

...view details