ಕರ್ನಾಟಕ

karnataka

ETV Bharat / entertainment

ಬಿಡುಗಡೆಗೆ ಸಜ್ಜಾದ ಚುಪ್ ರಿವೆಂಜ್ ಆಫ್ ದಿ ಆರ್ಟಿಸ್ಟ್ ಸಿನಿಮಾ - ನಟ ಅಮಿತಾಭ್ ಬಚ್ಚನ್

'ಚುಪ್ ರಿವೆಂಜ್ ಆಫ್ ದಿ ಆರ್ಟಿಸ್ಟ್' ರೋಮ್ಯಾಂಟಿಕ್ ಥ್ರಿಲ್ಲರ್ ಮೂವಿ ಸೆಪ್ಟೆಂಬರ್ 23ರಂದು ಬಿಡುಗಡೆಯಾಗಲಿದೆ.

Chup Revenge of the Artist, Directed by R Balki to hit screens on September 23
ಬಿಡುಗಡೆಗೆ ಸಜ್ಜಾದ ಚುಪ್ ರಿವೆಂಜ್ ಆಫ್ ದಿ ಆರ್ಟಿಸ್ಟ್ ಸಿನಿಮಾ

By

Published : Aug 25, 2022, 7:26 PM IST

ಆರ್ ಬಾಲ್ಕಿ ಕಥೆ ಬರೆದು ನಿರ್ದೇಶಿಸಿರುವ "ಚುಪ್: ರಿವೆಂಜ್ ಆಫ್ ದಿ ಆರ್ಟಿಸ್ಟ್" ರೋಮ್ಯಾಂಟಿಕ್ ಥ್ರಿಲ್ಲರ್ ಸೆಪ್ಟೆಂಬರ್ 23ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ. ಚಿತ್ರದಲ್ಲಿ ದುಲ್ಕರ್ ಸಲ್ಮಾನ್, ಶ್ರೇಯಾ ಧನ್ವಂತರಿ, ಸನ್ನಿ ಡಿಯೋಲ್ ಮತ್ತು ಪೂಜಾ ಭಟ್ ನಟಿಸಿದ್ದಾರೆ.

ಆರ್ ಬಾಲ್ಕಿ ಅವರಿಗೆ ಇದು ವಿಶೇಷ ಚಿತ್ರ. ಸಹಯೋಗಿ, ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ. ಚಲನಚಿತ್ರದ ಗೀತೆಯನ್ನು ರಚಿಸುವ ಮೂಲಕ ಅಮಿತಾಭ್ ಬಚ್ಚನ್ ಇದೇ ಮೊದಲ ಬಾರಿಗೆ ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದ್ದಾರೆಂದು ಆರ್ ಬಾಲ್ಕಿ ತಿಳಿಸಿದ್ದಾರೆ.

ನಟ ಅಮಿತಾಭ್ ಬಚ್ಚನ್ ಅವರು ಸಂಗೀತ ಸಂಯೋಜಕರಾಗಿ ಕೆಲಸ ಮಾಡಿರುವುದು, ಈ ಚಿತ್ರಕ್ಕೆ ಅವರು ಕೊಟ್ಟ ಗೌರವ ಮತ್ತು ಭಾವನೆಗಳನ್ನು ವ್ಯಕ್ತಪಡಿಸಿರುವ ರೀತಿಯಿದು. ಈ ಸಂಯೋಜನೆ ಚಿತ್ರಕ್ಕೆ ಅವರು ಕೊಟ್ಟ ಉಡುಗೊರೆ. ಅಮಿತಾಭ್ ಬಚ್ಚನ್ ಅವರನ್ನು ಮೀರಿಸುವ ಕಲಾವಿದರಿರಬಹುದು ಎಂದು ನಾನು ಭಾವಿಸುವುದಿಲ್ಲ. ಚುಪ್ ಚಿತ್ರಕ್ಕೆ ಅವರ ಸ್ಪರ್ಶವಿದೆ ಎಂದು ಆರ್ ಬಾಲ್ಕಿ ತಿಳಿಸಿದ್ದಾರೆ.

ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬಾಲ್ಕಿ ಜೊತೆಗೆ ವಿಮರ್ಶಕ, ಬರಹಗಾರ ರಾಜಾ ಸೇನ್ ಮತ್ತು ರಿಷಿ ವೀರಮಾನಿ ಸಹ ಬರೆದಿದ್ದಾರೆ. ವಿಶಾಲ್ ಸಿನ್ಹಾ ಛಾಯಾಗ್ರಹಣದ ನಿರ್ದೇಶಕರಾಗಿ ಮನ್ನಣೆ ಪಡೆದಿದ್ದಾರೆ. ಚಿತ್ರವನ್ನು ರಾಕೇಶ್ ಜುಂಜುನ್ವಾಲಾ ನಿರ್ಮಿಸಿದ್ದಾರೆ.

ಅನಿಲ್ ನಾಯ್ಡು, ಡಾ. ಜಯಂತಿಲಾಲ್ ಗಡ (PEN ಸ್ಟುಡಿಯೋಸ್) ಮತ್ತು ಗೌರಿ ಶಿಂಧೆ ಗಡ ಚುಪ್ ಸಿನಿಮಾವನ್ನು ಪ್ರಸ್ತುತಪಡಿಸಲಿದ್ದಾರೆ. ಎಸ್ ಡಿ ಬರ್ಮನ್, ಅಮಿತ್ ತ್ರಿವೇದಿ, ಸ್ನೇಹಾ ಖಾನ್ವಾಲ್ಕರ್ ಮತ್ತು ಅಮನ್ ಪಂತ್ ಸಂಗೀತ ನಿರ್ದೇಶಕರು. ಸಾಹಿರ್ ಲುಧಿಯಾನ್ವಿ, ಕೈಫಿ ಅಜ್ಮಿ ಮತ್ತು ಸ್ವಾನಂದ್ ಕಿರ್ಕಿರೆ ಅವರ ಸಾಹಿತ್ಯವಿದೆ. ಪ್ರಣಬ್ ಕಪಾಡಿಯಾ ಮತ್ತು ಅನಿರುದ್ಧ್ ಶರ್ಮಾ ಚಿತ್ರದ ಸಹ-ನಿರ್ಮಾಪಕರು.

ಇದನ್ನೂ ಓದಿ:ಸೆ.23ಕ್ಕೆ ಅವತಾರ್ ಮರು ಬಿಡುಗಡೆ.. ಡಿ.16ಕ್ಕೆ ಅವತಾರ್ 2 ರಿಲೀಸ್

ABOUT THE AUTHOR

...view details