ಕಳೆದ ಕೆಲ ಸಮಯದಿಂದ ಬಾಲಿವುಡ್ ನಟ ಆದಿತ್ಯಾ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ ಡೇಟಿಂಗ್ನಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಸಂದರ್ಶನವೊಂದರಲ್ಲಿ ನಟಿಯ ತಂದೆ ಚಂಕಿ ಪಾಂಡೆ (Chunky Panday) ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಗಳ ಡೇಟಿಂಗ್ ಬಗ್ಗೆ ಮಾತನಾಡಿದ ಹಿರಿಯ ನಟ, ಮನರಂಜನಾ ಉದ್ಯಮದಲ್ಲಿ ಡೇಟಿಂಗ್ ವದಂತಿಗಳು ಅನಿವಾರ್ಯ ಅಂಶ ಎಂಬಂತಾಗಿದೆ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಟ- ನಟಿಯರ ಜೀವನದಲ್ಲಿ ಊಹಾಪೋಹಗಳು ಸಂಭವಿಸುತ್ತಸೇ ಇರುತ್ತವೆ ಎಂದು ತಿಳಿಸಿದ್ದಾರೆ.
ಆದಿತ್ಯಾ ಅನನ್ಯಾ ಕೆಮಿಸ್ಟ್ರಿ ಬಗ್ಗೆ ಪ್ರಶ್ನೆ ಎದುರಾದಾಗ, ಎಲ್ಲ ಸಹನಟರೊಂದಿಗೆ ತನ್ನ ಮಗಳ ಕೆಮಿಸ್ಟ್ರಿ ಚೆನ್ನಾಗಿಯೇ ವರ್ಕ್ ಆಗುತ್ತದೆ ಎಂದು ತಿಳಿಸಿದರು. 'ಸ್ಟೂಡೆಂಟ್ ಆಪ್ ದಿ ಇಯರ್ 2' ನಲ್ಲಿ ಟೈಗರ್ ಶ್ರಾಫ್, 'ಪತಿ ಪತ್ನಿ ಔರ್ ವೋ' ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಅವರಂತಹ ಹೆಸರುಗಳನ್ನು ಉಲ್ಲೇಖಿಸಿ ಸಹನಟರೊಂದಿಗೆ ಮಗಳ ಕೆಮಿಸ್ಟ್ರಿ ಚೆನ್ನಾಗಿಯೇ ವರ್ಕ್ ಔಟ್ ಆಗುತ್ತದೆ ಎಂದು ಹೇಳಿದರು. ಆ ನಟರೆಲ್ಲರೂ ಮಗಳೊಂದಿಗೆ ಅದ್ಭುತವಾಗೇ ಕಾಣುತ್ತಾರೆ. ಸಹ ನಟರನ್ನು ಪ್ರಶಂಸಿಸುವ ವಿಚಾರವಾಗಿ, ಚಿತ್ರರಂಗದಲ್ಲಿ ಉತ್ತಮ ಪ್ರಯಾಣ ನಡೆಸುತ್ತಿರುವ ವಿಚಾರವಾಗಿ ಮಾತನಾಡಿ ಪುತ್ರಿಯನ್ನು ಶ್ಲಾಘಿಸಿದರು.
ಮಗಳ ಬಾಯ್ ಫ್ರೆಂಡ್ಸ್ ಅನ್ನು ರಿಜೆಕ್ಟ್ ಮಾಡುವ ಅಗತ್ಯವಿಲ್ಲ. ಅವರೇ ತಮ್ಮ ಬಾಳಸಂಗಾತಿಯನ್ನು ಆಯ್ದುಕೊಳ್ಳುತ್ತಾರೆ ಎಂದು ಹಾಸ್ಯಚಟಾಕಿ ಹಾರಿಸಿದರು. ಅಲ್ಲದೇ ತಮ್ಮ ಮಕ್ಕಳಿಗೆ (ಅನನ್ಯಾ ಮತ್ತು ರೈಸಾ) ಸಲಹೆ ನೀಡಿರುವ ವಿಚಾರವನ್ನೂ ಬಹಿರಂಗಪಡಿಸಿದರು. ನಿಮ್ಮ ಬಾಳ ಸಂಗಾತಿಯಾಗುವವರು ತನಗಿಂತ ಉತ್ತಮವಾಗಿರಬೇಕೆಂದು ಚಂಕಿ ಪಾಂಡೆ ಅವರು ತಮ್ಮ ಮಕ್ಕಳಿಗೆ ಸಲಹೆ ನೀಡಿದ್ದಾರೆ.