ತಪ್ಪೇ ಮಾಡದೇ 'ಡ್ರಗ್ಸ್' ಪ್ರಕರಣದಲ್ಲಿ ಸಿಲುಕಿ ಶಾರ್ಜಾ (ಯುಎಇ)ದ ಜೈಲಿನಲ್ಲಿದ್ದ ನಟಿ ಕ್ರಿಸನ್ನ್ ಪೆರೇರಾ ( Chrisann Pereira) ಬಿಡುಗಡೆ ಆಗಿದ್ದಾರೆ ಎಂದು ಅವರ ಕುಟುಂಬ ಸಾಮಾಜಿಕ ಮಾಧ್ಯಮದಲ್ಲಿ ಬುಧವಾರ ತಡರಾತ್ರಿ ತಿಳಿಸಿದೆ. ನಟಿಯ ಕುಟುಂಬವು ಖುಷಿಯಿಂದ ನೃತ್ಯ ಮಾಡುವ ಮತ್ತು ಭಾವುಕರಾಗಿ ನಟಿ ಅಳುತ್ತಿರುವ ವಿಡಿಯೋವನ್ನು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ವಿಡಿಯೋ ಕಾಲ್ ಮೂಲಕ ನಟಿ ಕುಟುಂಬಸ್ಥರೊಂದಿಗೆ ಮಾತನಾಡುತ್ತಿರುವುದು ಈ ವಿಡಿಯೋದಲ್ಲಿ ಕಾಣಬಹದು. ಎಲ್ಲರೂ ಆದಷ್ಟು ಬೇಗ ಹಿಂತಿರುಗುವಂತೆ ನಟಿಯಲ್ಲಿ ಮನವಿ ಮಾಡಿಕೊಂಡರು. 27ರ ಹರೆಯದ ಕ್ರಿಸನ್ನ್ ಪೆರೇರಾ ಕಳೆದ ತಿಂಗಳು 'ಡ್ರಗ್ಸ್ ಪ್ಲಾಂಟ್' ಪ್ರಕರಣದಲ್ಲಿ ಸಿಲುಕಿದ್ದರು. ಆರೋಪಿಗಳು ನಟಿಯನ್ನು ಈ ಪ್ರಕರಣದಲ್ಲಿ ಸಿಲುಕುವಂತೆ ಮಾಡಿದ್ದರು. ಮುಂಬೈನ ಇಬ್ಬರು ಆರೋಪಿಗಳು ಸಿಕ್ಕಿಬಿದ್ದು, ತಮ್ಮ ಸಂಚು ಒಪ್ಪಿಕೊಂಡಿದ್ದಾರೆ. ಹಾಗಾಗಿ ಈ ಪ್ರಕರಣದಲ್ಲಿ ನಟಿ ದೋಷಮುಕ್ತರಾಗಿ ಹೊರ ಬಂದಿದ್ದಾರೆ.
ಆರೋಪಿಗಳಿಬ್ಬರು ಟ್ರೋಫಿಯಲ್ಲಿ ಡ್ರಗ್ಸ್ ಅಡಗಿಸಿಟ್ಟಿದ್ದು, ಶಾರ್ಜಾದಲ್ಲಿ ಸ್ಥಳೀಯ ಪೊಲೀಸರು ನಟಿ ಕ್ರಿಸನ್ನ್ ಪೆರೇರಾ ಅವರನ್ನು ಬಂಧಿಸಿದ್ದರು. ಅವರು ಏಪ್ರಿಲ್ 1ರಿಂದ ಜೈಲಿನಲ್ಲಿದ್ದರು. ಮಂಗಳವಾರದಂದು ಮುಂಬೈನಲ್ಲಿರುವ ಆಕೆಯ ಕುಟುಂಬವು ಕ್ರಿಸನ್ನ್ ಪೆರೇರಾ ನಿರಪರಾಧಿ ಎಂದು ಮಾಹಿತಿ ಹಂಚಿಕೊಂಡಿತ್ತು. ಮತ್ತು ಮಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಸಹಾಯಕ್ಕಾಗಿ ಪಿಎಂ ಮತ್ತು ಮಿನಿಸ್ಟರಿ ಆಫ್ ಎಕ್ಸ್ಟ್ರನಲ್ ಆಫೀಸ್ಗೆ ಮನವಿ ಮಾಡಲು ಯೋಜಿಸಿದ್ದರು.
ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್, ಪ್ರಮುಖ ಆರೋಪಿ ಆ್ಯಂಥೋನಿ ಪೌಲ್ (35) ಮತ್ತು ಆತನ ಸಹಚರ ರಾಜೇಶ್ ಬೊಭಾಟೆ (34) ಅಲಿಯಾಸ್ ರವಿ ಅನ್ನು ಬಂಧಿಸಿದ್ದಾರೆ. ಪೆರೇರಾ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳಲು ನಟಿ ಮತ್ತು ಅವರೊಟ್ಟಿಗೆ ದುಬೈಗೆ ಹೊರಟವರ ಬ್ಯಾಗ್ನಲ್ಲಿ ನಾವೇ ಡ್ರಗ್ಸ್ ಅಡಗಿಸಿಟ್ಟೆವು ಎಂಬುದನ್ನು ಬಾಯ್ಬಿಟ್ಟಿದ್ದಾರೆ. ಕ್ರಿಸನ್ನ್ ಪೆರೇರಾ ಸೇರಿದಂತೆ ಇಬ್ಬರು ಈ ವಿಷಯ ತಿಳಿಯದೇ ಸಂಚಿನ ಬಲೆಗೆ ಬಿದ್ದರು. ಇದೀಗ ಮೂವರು ಶಾರ್ಜಾದಲ್ಲಿ ಪ್ರಕರಣದದಿಂದ ಹೊರಬರುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ:ಹಾಲಿವುಡ್ನಲ್ಲಿ ಅವಕಾಶ ಕೊಡಿಸುತ್ತೇವೆಂದು ಹೇಳಿ ನಟಿಗೆ ವಂಚನೆ ಆರೋಪ: ಇಬ್ಬರು ಅರೆಸ್ಟ್!
ಪೆರೇರಾ ಕುಟುಂಬದ ವಿರುದ್ಧ, ವಿಶೇಷವಾಗಿ ಪ್ರಮೀಳಾ (ಕ್ರಿಸನ್ನ್ ತಾಯಿ) ವಿರುದ್ಧ ಹಳೇ ದ್ವೇಷ ಸಾಧಿಸಲು ಹೀಗೆ ಮಾಡಲಾಗಿದೆ ಎಂಬ ವಿಚಾರವನ್ನು ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆ. ನಟಿ ಕ್ರಿಸನ್ನ್ ಪೆರೇರಾ ಅವರಿಗೆ ಹಾಲಿವುಡ್ನಲ್ಲಿ ಅವಕಾಶ, ತಾಯಿ ಪ್ರಮೀಳಾ ಪೆರೇರಾ ಅವರಿಗೆ ಹೈದರಾಬಾದ್ನಲ್ಲಿ ಆಸ್ತಿ ವಿಚಾರವಾಗಿ ಮಾತನಾಡಿ ಆರೋಪಿಗಳು ತಮ್ಮತ್ತ ಸೆಳೆದುಕೊಂಡಿದ್ದರು. ಅವಕಾಶಕ್ಕಾಗಿ ನಟಿ ಕ್ರಿಸನ್ನ್ ಪೆರೇರಾ ದುಬೈಗೆ ಹಾರಿದ್ದರೆ, ತಾಯಿ ಹೈದರಾಬಾದ್ಗೆ ಆಗಮಿಸಿದ್ದರು. ಇದೆಲ್ಲವೂ ಆರೋಪಿಗಳ ಪೂರ್ವ ನಿಯೋಜಿತ. ಇದೀಗ ಕ್ರಿಸನ್ನ್ ಪೆರೇರಾ ಅವರು ಡ್ರಗ್ಸ್ ಪ್ರಕರಣದಿಂದ ಹೊರಬಂದಿದ್ದಾರೆ. ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ:ಕನಸುಗಾರ ರವಿಚಂದ್ರನ್ ಸುಪುತ್ರನ ಸಿನಿಮಾ ಶೀರ್ಷಿಕೆ ಅನಾವರಣ: ಕ್ಯಾಚಿ ಟೈಟಲ್ನೊಂದಿಗೆ ಬಂದ ವಿಕ್ರಮ್