'ನಟಸಾರ್ವಭೌಮ', 'ಬೆಲ್ ಬಾಟಮ್', 'ರಾಬರ್ಟ್', 'ರೈಡರ್' ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿರುವ 'ಭೂಷಣ್' ಈಗ ಸಿನಿಮಾ ನಾಯಕ ನಟನಾಗುತ್ತಿದ್ದಾರೆ. 'ರಾಜ ರಾಣಿ ರೋರರ್ ರಾಕೆಟ್' ಚಿತ್ರದ ಮೂಲಕ ಅವರು ನಾಯಕರಾಗಿ ಪದೋನ್ನತಿ ಪಡೆದಿದ್ದು ಚಿತ್ರದ ಚಿತ್ರೀಕರಣ ಭಾಗಶಃ ಪೂರ್ಣಗೊಂಡಿದೆ. ಕ್ಯಾಚಿ ಟೈಟಲ್ ಮತ್ತು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ ಸೆಪ್ಟೆಂಬರ್ನಲ್ಲಿ ತೆರೆ ಕಾಣಲಿದೆ. ಕೆಂಪೇಗೌಡ ಮಾಗಡಿ ನಿರ್ದೇಶನ ಮಾಡಿದ್ದರೆ, ನಾಗರಾಜ್ ವಿ ಅಜ್ಜಂಪುರ ನಿರ್ಮಾಣ ಮಾಡಿದ್ದಾರೆ.
ಹುಲಿಯೂರು ದುರ್ಗದಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ. ಭೂಷಣ್ಗೆ ನಾಯಕಿಯಾಗಿ ಮಾನ್ಯ ಅಭಿನಯಿಸಿದ್ದಾರೆ. ರಣಧೀರ್, ಸಂತೋಷ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಹಿರಿಯ ನೃತ್ಯ ನಿರ್ದೇಶಕ ಮೂಗೂರು ಸುಂದರಂ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮುಂದಿನ ತಿಂಗಳು ಚಿತ್ರ ತೆರೆಗೆ ಬರುತ್ತಿದ್ದು, ಚಿತ್ರತಂಡ ವಿನೂತನ ಪ್ರಚಾರಕ್ಕೆ ಮುಂದಾಗಿದೆ.
ರಾಜ ರಾಣಿ ರೋರರ್ ರಾಕೆಟ್ ಚಿತ್ರದ ಪೋಸ್ಟರ್ ಇತ್ತೀಚೆಗೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕಾರ್ಯಕ್ಕೆ ಚಾಲನೆ ನೀಡಲಾಯಿತು. ಚಿತ್ರದ ಪಾಸ್(ಟಿಕೆಟ್) ಗಳನ್ನು ಈಗಲೇ ನೃತ್ಯಗಾರರಿಗೆ ವಿತರಿಸಲಾಗುತ್ತಿದೆ. ಆ ಕಾರ್ಯಕ್ಕೆ ಕೆಜಿಎಫ್ ಖ್ಯಾತಿಯ ನೃತ್ಯ ನಿರ್ದೇಶಕ ಮೋಹನ್, Dance Karnataka Dance ಖ್ಯಾತಿಯ ರುದ್ರ ಹಾಗೂ ಮತ್ತಿತರ ನೃತ್ಯಗಾರರು ನಾಯಕ ಭೂಷಣ್ಗೆ ಸಾಥ್ ನೀಡಿದರು.
ರಾಜ ರಾಣಿ ರೋರರ್ ರಾಕೆಟ್ ಚಿತ್ರ ತಂಡ ಸಂಚಿತ್ ಹೆಗಡೆ ಹಾಡಿರುವ ಚಿತ್ರದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದ್ದು, ಒಂದು ಮಿಲಿಯನ್ಗೂ ಅಧಿಕ ವೀಕ್ಷಣೆಯಾಗಿದೆ. ಪ್ರಭು ಎಸ್.ಆರ್. ಸಂಗೀತ ನೀಡಿದ್ದಾರೆ. ಸದ್ಯ ನೃತ್ಯ ನಿರ್ದೇಶಕನಾಗಿ ಸಕ್ಸಸ್ ಕಂಡಿರುವ ಭೂಷಣ್, ನಾಯಕ ನಟನಾಗಿ ಸಿನಿಮಾ ಪ್ರೇಕ್ಷಕರ ಮನಸ್ಸು ಕದಿಯುತ್ತಾರಾ ಅನ್ನೋದು ಸಿನಿಮಾ ತೆರೆಗೆ ಬಂದ ಮೇಲೆ ಗೊತ್ತಾಗಲಿದೆ.
ರಾಜ ರಾಣಿ ರೋರರ್ ರಾಕೆಟ್ ಚಿತ್ರ ತಂಡ ಇದನ್ನೂ ಓದಿ:ನಿರ್ದೇಶಕ ಶಶಾಂಕ್ ನಿರ್ದೇಶನದ ಸಿನೆಮಾದಲ್ಲಿ ನಾನು ಅಭಿನಯಿಸಬೇಕಿತ್ತು ಎಂದ ಕರುನಾಡ ಚಕ್ರವರ್ತಿ