2019ರಲ್ಲಿ ಪ್ರಾರಂಭವಾದ ಚಿತ್ತಾರವೂ 10 ವರ್ಷ ಪೂರೈಸಿ, ದಶಕದ ಸಂಭ್ರಮ ಆಚರಿಸಿತ್ತು. ಸಿನಿ ವೃತ್ತಿಯಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ಅವರನ್ನು ಗೌರವಿಸಲೆಂದೇ 'ಚಿತ್ತಾರ ಸ್ಟಾರ್ ಅವಾರ್ಡ್' ಕಾರ್ಯಕ್ರಮವನ್ನು 2019ರಿಂದಲೇ ಆಯೋಜಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷಗಳಲ್ಲಿ ಬಿಡುಗಡೆಯಾದ ಸಿನಿಮಾಗಳನ್ನು ಪಟ್ಟಿ ಮಾಡಿ, ಪ್ರತಿ ವರ್ಗಕ್ಕೂ, ಪ್ರತಿ ವರ್ಷವೂ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಮತ್ತು ಗೌರವಿಸುವ ಯೋಜನೆ ಸ್ಟಾರ್ ಚಿತ್ತಾರದ್ದು.
ಕೋವಿಡ್ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಗೆ ಕಷ್ಟವಾಗಿದ್ದ ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಪ್ರೋತ್ಸಾಹಿಸುವ ಸಲುವಾಗಿ ಯಶಸ್ಸಿನ ಹೆಜ್ಜೆ ಇಟ್ಟಿತ್ತು. ಈ ವೇಳೆ, ಚಿತ್ರರಂಗಕ್ಕೆ ಹಾಗೂ ಸಿನಿರಸಿಕರಿಗೆ ಒಂದು ಪ್ರೋತ್ಸಾಹ ಮತ್ತು ಹುಮ್ಮಸ್ಸನ್ನು ನೀಡುವ ಉದ್ದೇಶದಿಂದ ಚಿತ್ತಾರ ಸ್ಟಾರ್ ಅವಾರ್ಡ್ 2022 ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವರ್ಷ ಚಿತ್ತಾರವು ತನ್ನ ಹದಿನಾಲ್ಕನೇ ವಾರ್ಷಿಕೋತ್ಸವವನ್ನು 'ಚಿತ್ತಾರ ಸ್ಟಾರ್ ಅವಾರ್ಡ್ 2023'ರ ಮೂಲಕ ಅದ್ದೂರಿಯಾಗಿ ನಡೆಸಿದೆ. ಚಿತ್ತಾರದ ಈ ಕಾರ್ಯಕ್ರಮಕ್ಕೆ ಚಂದನವನದ ಎಲ್ಲಾ ತಾರೆಯರ ಆಗಮನ ಮತ್ತಷ್ಟು ಮೆರುಗು ತಂದಿತ್ತು.
ಸ್ಟಾರ್ಗಳಿಂದ ಹಿಡಿದು ತಂತ್ರಜ್ಞರು ಸೇರಿದಂತೆ ಚಂದನವನ ತೋಟ ಚಿತ್ತಾರ ಅಂಗಳದಲ್ಲಿ ಗಮನ ಸೆಳೆಯಿತು. ಚಿತ್ತಾರದ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲಿಗೆ ಈ ಕಾರ್ಯಕ್ರಮ ಸಾಕ್ಷಿಯಾಯಿತು. ಪ್ರಶಸ್ತಿ ಆಯ್ಕೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗಿದ್ದು, ಹಿರಿಯ ನಿರ್ದೇಶಕರಾದ ಸುನೀಲ್ ಕುಮಾರ್ ದೇಸಾಯಿ, ಹಿರಿಯ ನಟರಾದ ಸುಂದರ್ ರಾಜ್, ಬಹುಭಾಷಾ ನಟಿಯಾದ ಭಾವನಾ ರಾವ್, ಸಿನಿಮಾ ಸಂಪರ್ಕಧಿಕಾರಿಯಾದ ಸುಧೀಂದ್ರ ವೆಂಕಟೇಶ್ ಹಾಗೂ ಚಿತ್ತಾರ ಪತ್ರಿಕೆಯ ತಂಡದವರು ಪ್ರಶಸ್ತಿ ಆಯ್ಕೆ ಮಾಡಿದ್ದಾರೆ.
ಇನ್ನೂ ವೋಟಿಂಗ್ಗೆಂದೇ ವಿಶೇಷ ವೆಬ್ಸೈಟ್ ಪ್ರಾರಂಭಿಸಲಾಗಿದ್ದು, ಆ ಮೂಲಕ ಪ್ರೇಕ್ಷಕರು ತಮ್ಮಿಷ್ಟದ ಚಿತ್ರ, ನಟ/ನಟಿ, ತಂತ್ರಜ್ಞರಿಗೆ ಆನ್ಲೈನ್ ಮೂಲಕ ವೋಟ್ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಇನ್ನು ಬಿತ್ತಿಪತ್ರಗಳ ಮೂಲಕವೂ ಕರ್ನಾಟಕದಾದ್ಯಂತ ಶಾಲಾ- ಕಾಲೇಜು ಮತ್ತು ಪ್ರಮುಖ ಸ್ಥಳಗಳಲ್ಲಿ ವೋಟಿಂಗ್ ವ್ಯವಸ್ಥೆ ಮಾಡಿ, ಅದನ್ನೂ ಆಯ್ಕೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು.