ಕರ್ನಾಟಕ

karnataka

ETV Bharat / entertainment

ಚಾರ್ಲಿ ಸಿನಿಮಾ ನೋಡಿದ ಮೇಲೆ ಪ್ರತಿಯೊಬ್ಬರು ಶ್ವಾನವನ್ನು ಪ್ರೀತಿಸುತ್ತಾರೆ : ರಕ್ಷಿತ್ ಶೆಟ್ಟಿ - simple star rakshit shetty

777 ಚಾರ್ಲಿ ಸಿನಿಮಾದ ಜಪ ಮಾಡುತ್ತಿರುವ ರಕ್ಷಿತ್ ಶೆಟ್ಟಿಗೆ ಇಂದು ಜನ್ಮದಿನದ ಸಂಭ್ರಮ. ತಮ್ಮ 39ನೇ ವಸಂತಕ್ಕೆ ಕಾಲಿಡುತ್ತಿರೋ ರಕ್ಷಿತ್ ಶೆಟ್ಟಿ, ಚಾರ್ಲಿ ಸಿನಿಮಾದ ಕೆಲ ವಿಚಾರಗಳನ್ನು ಈಟಿವಿ ಭಾರತದ ಜತೆ ಹಂಚಿಕೊಂಡಿದ್ದಾರೆ..

chitchat-with-rakshith-shetty-on-charlie-movie
ಚಾರ್ಲಿ ಸಿನಿಮಾ ನೋಡಿದ ಮೇಲೆ ಪ್ರತಿಯೊಬ್ಬರು ಶ್ವಾನವನ್ನು ಪ್ರೀತಿಸುತ್ತಾರೆ : ರಕ್ಷಿತ್ ಶೆಟ್ಟಿ ಚಿಟ್ ಚಾಟ್ !

By

Published : Jun 6, 2022, 6:15 PM IST

ಸಿಂಪಲ್ಲಾಗಿ ಒಂದು ಲವ್ ಸ್ಟೋರಿ, ರಿಕ್ಕಿ, ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ ಹೀಗೆ ವಿಭಿನ್ನ ಸಿನಿಮಾಗಳನ್ನು ಮಾಡಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿರುವ ನಟ ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ. 777 ಚಾರ್ಲಿ ಸಿನಿಮಾದ ಜಪ ಮಾಡುತ್ತಿರುವ ರಕ್ಷಿತ್ ಶೆಟ್ಟಿಗೆ ಇಂದು ಜನ್ಮದಿನದ ಸಂಭ್ರಮ. ತಮ್ಮ 39ನೇ ವಸಂತಕ್ಕೆ ಕಾಲಿಡುತ್ತಿರೋ ರಕ್ಷಿತ್ ಶೆಟ್ಟಿ, ಚಾರ್ಲಿ ಸಿನಿಮಾದ ಕೆಲ ವಿಚಾರಗಳನ್ನು ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.

ಚಾರ್ಲಿ ಸಿನಿಮಾ ಕುರಿತು ರಕ್ಷಿತ್ ಶೆಟ್ಟಿಈಟಿವಿ ಭಾರತ ಜತೆ ಮಾತನಾಡಿರುವುದು..

777 ಚಾರ್ಲಿ ಸಿನಿಮಾ ತಂಡದ ಜೊತೆ ಕೇಕ್ ಕಟ್ ಮಾಡಿ, ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ರಕ್ಷಿತ್ ಶೆಟ್ಟಿ, ಚಾರ್ಲಿ ಸಿನಿಮಾ ಬಗ್ಗೆ ಮಾತನಾಡಿದ್ದು, ಚಾರ್ಲಿ ಸಿನಿಮಾ ಮಾಡೋದು ದೊಡ್ಡ ಸವಾಲಾಗಿತ್ತು‌. ಜೊತೆಗೆ ಶ್ವಾನದ ಜೊತೆಗೆ ಪಾತ್ರ ನಿರ್ವಹಣೆ ಮಾಡುವುದು ಸವಾಲಿನ ಸಂಗತಿಯಾಗಿತ್ತು. ಈ ಪಾತ್ರವನ್ನು ಮತ್ತೆ ಮಾಡೋದು ತುಂಬಾನೇ ಕಷ್ಟ ಎಂದು ಅಭಿಪ್ರಾಯಪಟ್ಟರು.

ನಿರ್ದೇಶಕ ಕಿರಣ್ ರಾಜ್ ಚಾರ್ಲಿ ಸಿನಿಮಾದ ಬಗ್ಗೆ ರಕ್ಷಿತ್ ಶೆಟ್ಟಿಗೆ ಹೇಳಿದ್ದು, ಕಿರಿಕ್ ಪಾರ್ಟಿ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ. ಆಗ ರಕ್ಷಿತ್ ಶೆಟ್ಟಿ ಈ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಬಳಿಕ ಸಿನಿಮಾದ ನಾಯಕನಾಗಿ ನಟಿಸುವ ಬಗ್ಗೆ ನಿರ್ಧಾರ ಕೈಗೊಂಡ ಬಳಿಕ ಕಡಿಮೆ ವೆಚ್ಚದಲ್ಲಿ ನಿರ್ಮಾಣ ಮಾಡಬೇಕಿದ್ದ ಸಿನಿಮಾ ಎಲ್ಲಾ ಭಾಷೆಯಲ್ಲಿಯೂ ಮಾಡುವಂತೆ ಆಯಿತು ಎಂದರು.

ನಾನು ಪರಿಸರ ಪ್ರೇಮಿ. ಪರಿಸರ ಎಂದ ಮೇಲೆ ಅಲ್ಲಿ ಪ್ರಾಣಿ-ಪಕ್ಷಿಗಳು ಎಲ್ಲವೂ ಇರುತ್ತೆ. ನಾನು ಹೇಗೆ ಅಂದರೆ, ಒಂದು ಕಾಡಲ್ಲೇ ಒಬ್ಬನೇ ಇರೋದಿಕ್ಕೆ ಇಷ್ಟಪಡುತ್ತೇನೆ. ಯಾವ ಮಟ್ಟಿಗೆ ಅಂದರೆ, ಅಲ್ಲೇ ಕಥೆ ಬರೆದು, ಸಿನಿಮಾ ಬಿಡುಗಡೆ ಆಗೋವರೆಗೂ ನಾನು ಕಾಡು ಬಿಟ್ಟು ಬರೋಲ್ಲ. ನನಗೆ ಚಿಕ್ಕವಯಸ್ಸಿನಲ್ಲೇ ಶ್ವಾನದ ಬಗ್ಗೆ ಹೆಚ್ಚು ಆಸಕ್ತಿ ಇತ್ತು. ಇನ್ನು ಚಾರ್ಲಿ ಸಿನಿಮಾ ಶೂಟಿಂಗ್ ಮಾಡಬೇಕಾದ್ರೆ, ಶ್ವಾನದ ಬಗ್ಗೆ ಮತ್ತಷ್ಟು ಆಸಕ್ತಿ ಹೆಚ್ಚಾಗಿದೆ ಎಂದರು.

777 ಚಾರ್ಲಿ ಸಿನಿಮಾ, ಫಸ್ಟ್‌ಟೈಮ್ ದೆಹಲಿ, ಮುಂಬಯಿ, ಅಹಮದಾಬಾದ್,‌ಅಮೃತಸರ ಸೇರಿದಂತೆ ಸಾಕಷ್ಟು ಕಡೆ ಪ್ರಿಮಿಯರ್ ಶೋ ಮಾಡಿದೆ. ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸಿನಿಮಾ ಕೊನೆಯಲ್ಲಿ ಎಲ್ಲಾ ಸಿನಿಮಾ ಪ್ರಿಯರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದು ಅವಾರ್ಡ್ ಸಿಕ್ಕ ಸಂತೋಷ ಆಯಿತು ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಈ ಸಿನಿಮಾವನ್ನು ಬೇರೆ ಭಾಷೆಯಲ್ಲಿ ವಿತರಣೆ ಮಾಡುತ್ತಿರುವ ವಿತರಕರು ಈ ಸಿನಿಮಾ ಡಬ್ಬಿಂಗ್ ರೀತಿ ಅನಿಸುತ್ತಿಲ್ಲ.‌ ನಮ್ಮ ಭಾಷೆಯ ಸಿನಿಮಾ ತರಾನೇ ಭಾಸವಾಗುತ್ತದೆ ಎಂದು ಹೇಳಿರುವುದು ಉತ್ತಮ ವಿಮರ್ಶೆ ಎಂದು ರಕ್ಷಿತ್ ಶೆಟ್ಟಿ ಹೇಳಿದರು. ಇನ್ನು ಚಾರ್ಲಿ ಸಿನಿಮಾ ನೋಡಿದ ಮೇಲೆ ಪ್ರತಿಯೊಬ್ಬರು ಶ್ವಾನವನ್ನು ಪ್ರೀತಿಸುತ್ತಾರೆ‌ ಅಂತಾ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಓದಿ :ಸಲ್ಮಾನ್ ಖಾನ್, ಅವರ ತಂದೆಗೆ ಕೊಲೆ ಬೆದರಿಕೆ ಪತ್ರ.. ಹೆಚ್ಚಿನ ಭದ್ರತೆ ನೀಡಿದ ಗೃಹ ಇಲಾಖೆ

ABOUT THE AUTHOR

...view details