ಕೋಟಿಗೊಬ್ಬ 3 ಸಿನಿಮಾ ಬಳಿಕ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ. ಸದ್ಯ ಪೋಸ್ಟರ್ ಹಾಗು ಟೀಸರ್ ನಿಂದಲೇ ಸೌಥ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಸಿನಿಮಾ. ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಸ್ಟೈಲಿಷ್ ಲುಕ್ ಜೊತೆಗೆ ಸೂಪರ್ ಕಾಪ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ ವಿಕ್ರಾಂತ್ ರೋಣ ಸಿನಿಮಾಗೆ, ದಕ್ಷಿಣ ಭಾರತದ ಸ್ಟಾರ್ ನಟರು ಸಾಥ್ ನೀಡುತ್ತಿದ್ದಾರೆ.
ಹೌದು, ಯುಗಾದಿ ಹಬ್ಬಕ್ಕೆ ದಿ ಡೆವಿಲ್ಸ್ ಅರೈವಲ್ ಹೆಸರಿನಲ್ಲಿ ಚಿತ್ರತಂಡ ಟೀಸರ್ ಬಿಡುಗಡೆ ಮಾಡುತ್ತಿದೆ. ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಹಾಗು ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್, ತಮಿಳಿನಲ್ಲಿ ಸಿಂಬು ವಿಕ್ರಾಂತ್ ರೋಣ ಚಿತ್ರದ ಟೀಸರ್ನ್ನ ಅನಾವರಣ ಮಾಡಲಿದ್ದಾರೆ. ದಿ ಡೆವಿಲ್ಸ್ ಅರೈವಲ್ ಹೆಸರಿನಲ್ಲಿ ವಿಕ್ರಾಂತ್ ರೋಣ ಟೀಸರ್, ಏಪ್ರಿಲ್ 2 ರಂದು ಬೆಳಗ್ಗೆ 9.55ಕ್ಕೆ ಯೂಟ್ಯೂಬ್ನಲ್ಲಿ ಬಿಡುಗಡೆ ಆಗುತ್ತಿದೆ. ಈ ಟೀಸರ್ ಸುದೀಪ್ ಬಗ್ಗೆ ಆಗಿರುತ್ತಾ? ಅಥವಾ ಸುದೀಪ್ ಅಲ್ಲದೇ ಇಡೀ ಬೇರೆ ಸ್ಟಾರ್ಸ್ ಗಳ ಲುಕ್ ಆಗಿರುತ್ತಾ? ಹಾಗೇ ದಿ ಡೆವಿಲ್ಸ್ ಯಾರು ಆಗಿರುತ್ತಾರೆ ಎಂಬ ಕುತೂಹಲ ಮೂಡಿಸಿದೆ.