ಕರ್ನಾಟಕ

karnataka

ETV Bharat / entertainment

ಚೇತನ್ ಭಗತ್- ಉರ್ಫಿ ಜಾವೇದ್ ವಾಗ್ಯುದ್ಧ: ಸಾಮಾಜಿಕ ಜಾಲತಾಣದಲ್ಲಿ ಟೀಕಾ ಪ್ರಹಾರ - Urfi Javed statements went viral on social media

ಖ್ಯಾತ ಬರಹಗಾರ ಚೇತನ್ ಭಗತ್ ಮತ್ತು ಸೋಷಿಯಲ್ ಮೀಡಿಯಾ​ ಸೆನ್ಸೇಷನ್ ಉರ್ಫಿ ಜಾವೇದ್ ನಡುವೆ ವಾಕ್ಸಮರ ನಡೆದಿದೆ. ಇಬ್ಬರು ಒಬ್ಬರಿಗೊಬ್ಬರು ಟೀಕೆ ಮಾಡಿಕೊಂಡಿದ್ದಾರೆ.

Chetan Bhagat and Urfi Javed statements went viral on social media
Chetan Bhagat and Urfi Javed statements went viral on social media

By

Published : Nov 28, 2022, 4:38 PM IST

ಮುಂಬೈ (ಮಹಾರಾಷ್ಟ್ರ): ಲೇಖಕ ಚೇತನ್ ಭಗತ್ ಮತ್ತು ತಾರೆ ಉರ್ಫಿ ಜಾವೇದ್ ನಡುವೆ ವಾಗ್ಯುದ್ಧ ನಡೆದಿದೆ. ಇಬ್ಬರ ನಡುವಿನ ಹೇಳಿಕೆಗಳು ಸುದ್ದಿಯಾಗಿ ಸದ್ದು ಮಾಡುತ್ತಿವೆ. 'ಯುವ ಸಮುದಾಯ ತುಳಿಯುತ್ತಿರುವ ತಪ್ಪು ಹಾದಿಗಳ ಕುರಿತು ಮಾತನಾಡಿದ್ದೇನೆ. ಅದನ್ನು ಉರ್ಫಿ ಜಾವೇದ್ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ' ಎಂದು ಚೇತನ್ ಭಗತ್ ಟ್ವೀಟ್​ ಮಾಡಿದ್ದಾರೆ.

'ನಾನು ಹುಡುಗರಿಗೆ ಫಿಟ್‌ನೆಸ್ ಮತ್ತು ವೃತ್ತಿಜೀವನದತ್ತ ಗಮನಹರಿಸುವಂತೆ ತಿಳುವಳಿಕೆ ನೀಡಿದ್ದೇನೆ. ಇನ್‌ಸ್ಟಾಗ್ರಾಮ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್​ ನೋಡುತ್ತಾ ವಿನಾ ಕಾರಣ ನಿಮ್ಮ ಸಮಯ ವ್ಯರ್ಥ ಮಾಡದಂತೆಯೂ ಅವರಿಗೆ ಮನವರಿಕೆ ಮಾಡಿದ್ದೇನೆ. ಇದನ್ನು ಅವರು ತಪ್ಪಾಗಿ ತಿಳಿದುಕೊಂಡಿದ್ದಾರೆ' ಅನ್ನೋದು ಚೇತನ್ ಅಭಿಪ್ರಾಯ.

ಮೀಟೂ ಅಭಿಯಾನದ ಸಮಯದಲ್ಲಿ ವೈರಲ್ ಆಗಿದ್ದ ಕೆಲವು ವಾಟ್ಸಾಪ್ ಚಾಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಚೇತನ್ ಭಗತ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಉರ್ಫಿ, 'ಹುಡುಗರೇ, ಮೀಟೂ ಪ್ರಕರಣದಲ್ಲಿ ಎಷ್ಟು ಮಹಿಳೆಯರು ಅವರ ಮೇಲೆ ಆರೋಪ ಮಾಡಿದ್ದಾರೆ ಅನ್ನೋದನ್ನು ನಾವು ಮರೆಯಬಾರದು. ಭಗತ್ ಅವರಂತಹ ಪುರುಷರು ಮಾತ್ರ ಮಹಿಳೆಯರನ್ನು ದೂಷಿಸುವುದು. ಆದರೆ, ಯಾವುದು ಸರಿ, ಯಾವುದು ತಪ್ಪು ಅನ್ನೋದು ನಮಗೆ ಗೊತ್ತಿದೆ. ನನ್ನ ಬಗ್ಗೆ ಹಾಗೂ ನಾನು ಧರಿಸುವ ಬಟ್ಟೆ ಬಗ್ಗೆ ಕಾಮೆಂಟ್​ ಮಾಡುವ ಅಗತ್ಯವಿಲ್ಲ' ಎಂದು ಹೇಳಿದ್ದಾರೆ. ಇದೇ ಹೇಳಿಕೆಗೆ ಚೇತನ್ ಭಗತ್ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಇತ್ತೀಚೆಗೆ ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಚೇತನ್ ಭಗತ್, 'ಉರ್ಫಿ ಜಾವೇದ್ ಹೆಸರನ್ನು ಪ್ರಸ್ತಾಪಿಸುತ್ತಾ ಕೆಲವು ಹೇಳಿಕೆ ನೀಡಿದ್ದರು. ಈ ದಿನಗಳಲ್ಲಿ ಯುವಜನರು ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ವಿನಾ ಕಾರಣ ನಟಿಯರ ಫೋಟೋಗಳನ್ನು ನೋಡುತ್ತಾ ಲೈಕ್​​​ ಮಾಡುತ್ತ, ಕಮೆಂಟ್​​ ಮಾಡುತ್ತ ಅವರ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಒಂದೆಡೆ ಯುವಕರ ಪಡೆ ದೇಶವನ್ನು ಕಾಯುತ್ತಿದ್ದರೆ, ಇನ್ನೊಂದೆಡೆ ಉರ್ಫಿ ಜಾವೇದ್ ಅವರ ಫೋಟೋ ಮತ್ತು ರೀಲ್ಸ್​​ಗಳನ್ನು ನೋಡುತ್ತಾ ಕಾಲ ಕಳೆಯುತ್ತಿದ್ದಾರೆ. ಉರ್ಫಿ ಜಾವೇದ್ ಯಾರೆಂದು ಎಲ್ಲರಿಗೂ ಗೊತ್ತು. ಆದರೂ ಅವರ ಫೋಟೋಗಳನ್ನು ನೋಡುತ್ತಾರೆ'.

'ನೋಡಿ ಏನು ಮಾಡುತ್ತೀರಿ? ಅವರ ಫೋಟೋಗಳನ್ನು ನೋಡುತ್ತಾ ಲೈಕ್ಸ್​ ಮತ್ತು ಕಾಮೆಂಟ್​ ಮಾಡುತ್ತಿದ್ದರೆ ನಿಮಗೇನು ಸಿಗುತ್ತದೆ? ಯಾವುದಾದರೊಂದು ಪರೀಕ್ಷೆ ಅಥವಾ ಸಂದರ್ಶನಕ್ಕೆ ಹೋದಾಗ ಉರ್ಫಿ ಅವರ ಎಲ್ಲಾ ಬಟ್ಟೆಗಳ ಬಗ್ಗೆ ನಮಗೆ ಗೊತ್ತು ಎಂದು ಹೇಳುತ್ತೀರಾ' ಎಂದು ಪ್ರಶ್ನಿಸಿದ್ದಾರೆ.

ಚೇತನ್‌ ಈ ಹೇಳಿಕೆಯ ಬಳಿಕ ಉರ್ಫಿ, ಅನಾವಶ್ಯಕವಾಗಿ ತನ್ನ ಹೆಸರು ಎಳೆದು ತರಲಾಗಿದೆ. ಅವನಂತಹ ಪುರುಷರು ತಮ್ಮ ಸ್ವಂತ ನ್ಯೂನತೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಮಹಿಳೆಯರನ್ನು ದೂಷಿಸುವುದೇ ಬಿಟ್ಟಿಲ್ಲ. ಅತ್ಯಾಚಾರ ಸಂಸ್ಕೃತಿಯನ್ನು ಪ್ರಚಾರ ಮಾಡುವುದನ್ನು ಮೊದಲು ನಿಲ್ಲಿಸಿ. ಪುರುಷರ ಈ ವರ್ತನೆಗೆ ಮಹಿಳೆಯರ ಬಟ್ಟೆಗಳನ್ನು ದೂಷಿಸುವುದೆಷ್ಟು ಸರಿ? ಎಂದಿದ್ದಾರೆ.

ಇದನ್ನೂ ಓದಿ:ಮೆಟ್ರೋ ರೈಲು ಪ್ರಯಾಣದ ಖುಷಿ ಅನುಭವಿಸಿದ ರೆಬಲ್ ಸ್ಟಾರ್ ಸುಪುತ್ರ

ABOUT THE AUTHOR

...view details