ಕರ್ನಾಟಕ

karnataka

ETV Bharat / entertainment

'Chef ಚಿದಂಬರ' ಮಾತಿನ‌‌‌ ಮನೆಯಲ್ಲಿ ಅನಿರುದ್ಧ್ ಜತ್ಕರ್: ಡಬ್ಬಿಂಗ್ ಕೆಲಸ ಚುರುಕು - Chef Chidambara movie

Chef Chidambara Dubbing Work: ಅನಿರುದ್ಧ್ ಜತ್ಕರ್ ನಟನೆಯ 'Chef ಚಿದಂಬರ' ಸಿನಿಮಾದ ಡಬ್ಬಿಂಗ್ ಕೆಲಸ ಬಿರುಸಿನಿಂದ ಸಾಗಿದೆ.

Chef Chidambara dubbing work
Chef ಚಿದಂಬರ ಡಬ್ಬಿಂಗ್ ಕೆಲಸ

By ETV Bharat Karnataka Team

Published : Oct 31, 2023, 11:07 AM IST

ಕನ್ನಡ ಚಿತ್ರರಂಗದ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ತಮ್ಮದೇ ವಿಭಿನ್ನ ಅಭಿನಯದಿಂದ ಕನ್ನಡಿಗರ ಮನಗೆದ್ದಿರುವ ನಟ ಅನಿರುದ್ಧ್ ಜತ್ಕರ್. ಇದೀಗ 'Chef ಚಿದಂಬರ' ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿರುವುದು ನಿಮಗೆ ಗೊತ್ತಿರುವ ವಿಚಾರವೇ. ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಚಿತ್ರತಂಡ ಡಬ್ಬಿಂಗ್​ ಕೆಲಸದಲ್ಲಿ ಬ್ಯುಸಿಯಾಗಿದೆ. ಪ್ರಸ್ತುತ ಲೂಪ್ ಸ್ಟುಡಿಯೋದಲ್ಲಿ ಚಿತ್ರಕ್ಕೆ ಮಾತಿನ ಜೋಡಣೆ - ಡಬ್ಬಿಂಗ್ ಕೆಲಸ ನಡೆಯುತ್ತಿದೆ. ನಾಯಕ ನಟ ಅನಿರುದ್ಧ್ ಜತ್ಕರ್ ತಮ್ಮ ಪಾತ್ರಕ್ಕೆ ದನಿ ನೀಡುತ್ತಿದ್ದಾರೆ.

ಶೆಫ್ ಪಾತ್ರದಲ್ಲಿ ನಟ ಅನಿರುದ್ಧ್ ಜತ್ಕರ್: ಡಾರ್ಕ್ ಕಾಮಿಡಿ ಜಾನರ್​ನ ಈ ಚಿತ್ರದಲ್ಲಿ ಅನಿರುದ್ಧ್ ಶೆಫ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಬಳಿಕ ಅಭಿನಯಿಸಿದ್ದಾರೆ. ಜತ್ಕರ್​ಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್‌ ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್‌, ಶಿವಮಣಿ ಸೇರಿದಂತೆ ಮುಂತಾದವರು ತಾರಾಬಳಗದಲ್ಲಿದ್ದಾರೆ.

ರಾಘು ಚಿತ್ರ ಖ್ಯಾತಿಯ ನಿರ್ದೇಶಕ ಎಂ. ಆನಂದರಾಜ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ. ಎನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲ ಅವರ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ವಿಜೇತ್ ಚಂದ್ರ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದರೆ, ವಿಕ್ರಾಂತ್ ರೋಣ ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಐದು ವರ್ಷಗಳ ನಂತರ ಅನಿರುದ್ಧ್ ಜನತ್ಕರ್ ಸಿನಿಮಾ ಮಾಡುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಶೀಘ್ರದಲ್ಲೇ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

ಇದನ್ನೂ ಓದಿ:ರೆಡ್ ಡ್ರೆಸ್ ತೊಟ್ಟು ಕೊಲ್ಲುವ ನೋಟ ಬೀರಿದ ರಾಕುಲ್ ಪ್ರೀತ್ ಸಿಂಗ್: ಬಹುಭಾಷಾ ನಟಿಯ ಫೋಟೋಗಳಿವು!

ಇದೇ ಅಕ್ಟೋಬರ್​​ ಎರಡನೇ ವಾರ 'Chef ಚಿದಂಬರ' ಶೂಟಿಂಗ್​ ಪೂರ್ಣಗೊಂಡಿದೆ. ಆ ಸಂದರ್ಭ ಚಿತ್ರತಂಡ ಒಂದಿಷ್ಟು ಮಾಹಿತಿ ಹಂಚಿಕೊಂಡಿತ್ತು. ಅಂದು ಮಾತನಾಡಿದ್ದ ನಾಯಕ ನಟ ಅನಿರುದ್ಧ್ ಜತ್ಕರ್, ನನಗೆ ಅಡುಗೆ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ನಾನೆಂದಿಗೂ ಅಡುಗೆ ಮನೆ ಕಡೆ ಹೋದವನಲ್ಲ. ಇದೇ ಮೊದಲ ಬಾರಿ ಶೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದಕ್ಕೆ ಸಾಕಷ್ಟು ತರಬೇತಿ ಕೂಡ ಪಡೆದಿದ್ದೆ. ಸಂಪೂರ್ಣ ಚಿತ್ರತಂಡ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ನಮ್ಮ ಚಿತ್ರ ಪ್ರೇಕ್ಷಕರಿಗೆ ಹಿಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಶಾರುಖ್​​ ಖಾನ್ ಜನ್ಮದಿನದಂದು ಡಂಕಿ ಟೀಸರ್​ ರಿಲೀಸ್​​​: ಮುಂಬೈನಲ್ಲಿ ಅಭಿಮಾನಿಗಳಿಗಾಗಿ ಖಾನ್ ಬರ್ತ್​​ಡೇ ಪಾರ್ಟಿ!

ABOUT THE AUTHOR

...view details