ಕರ್ನಾಟಕ

karnataka

ETV Bharat / entertainment

ಬಾಲಿವುಡ್ ಸ್ನೇಹಿತರಿಗಾಗಿ ತಪ್ಪೊಪ್ಪಿಗೆ ಪೋಸ್ಟ್​ ಹಾಕಿದ ನಟಿ ಕಂಗನಾ - Check out Kangana Ranauts confession on Diwali

ನಟಿ ಕಂಗನಾ ರಣಾವತ್ ದೀಪಾವಳಿ ಸಮಯದಲ್ಲಿ ತಮ್ಮ ಬಾಲಿವುಡ್ ಸ್ನೇಹಿತರಿಗಾಗಿ 'ತಪ್ಪೊಪ್ಪಿಗೆ' ಪೋಸ್ಟ್​ ವೊಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಮಾಡಿದ್ದಾರೆ.

Check out Kangana Ranaut's confession on Diwali
ತಪ್ಪೊಪ್ಪಿಗೆಯ ಪೋಸ್ಟ್​ ಹಾಕಿದ ನಟಿ ಕಂಗನಾ

By

Published : Oct 24, 2022, 1:14 PM IST

ಮುಂಬೈ: ನಟಿ ಕಂಗನಾ ರಣಾವತ್ ದೀಪಾವಳಿಯ ದಿನ ಇನ್​ಸ್ಟಾಗ್ರಾಮ್​​ನಲ್ಲಿ ಬಾಲಿವುಡ್ ಸ್ನೇಹಿತರಿಗಾಗಿ ತಪ್ಪೊಪ್ಪಿಗೆಯ (ಕನ್​ಫೆಶನ್​) ಪೋಸ್ಟ್ ಮಾಡಿದ್ದಾರೆ. ಇನ್ನೇನು ಈ ವರ್ಷ ಮುಗಿಯುತ್ತಿದೆ. ಯಾರಿಗಾದರೂ ನಾನು ಈ ವರ್ಷ ನೋವುಂಟು ಮಾಡಿದರೆ, ನೀವು ಇದಕ್ಕೆ ಅರ್ಹರಾಗಿದ್ದೀರಿ ಎಂದು ಪೋಸ್ಟ್​ ಮಾಡಿದ್ದಾರೆ.

ತಪ್ಪೊಪ್ಪಿಗೆಯ ಪೋಸ್ಟ್​ ಹಾಕಿದ ನಟಿ ಕಂಗನಾ

ಈ ಹಿಂದೆ ನಟಿ ಚೋಟಿ ದೀಪಾವಳಿಯ ಸಂದರ್ಭದಲ್ಲಿ ಹೊಸದಾಗಿ ನವೀಕರಿಸಿದ ದೇವಾಲಯದ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ನಟಿ ಕ್ರೀಮ್​​-ಬೀಜ್ ಸೂಟ್ ಧರಿಸಿದ್ದರು ಮತ್ತು ದೇವಾಲಯದಲ್ಲಿ ಅರ್ಚಕರ ಪಕ್ಕದಲ್ಲಿ ಕುಳಿತಿರುವುದನ್ನು ಕಾಣಬಹುದು. ಅವರ ಮುಂದೆ ಗಣೇಶನ ವಿಗ್ರಹ ಇತ್ತು. ವಿಗ್ರಹದ ಹಿಂದೆ ದೊಡ್ಡದಾದ ಚೌಕಟ್ಟಿನ ಪಿಚ್ವಾಯ್ ಪೇಂಟಿಂಗ್ ಇತ್ತು. ಈ ಪೋಸ್ಟ್ ಅನ್ನು ಹಂಚಿಕೊಂಡ ಅವರು, "ಈ ಹಬ್ಬದ ಸಮಯದಲ್ಲಿ ಮನೆಯಲ್ಲಿ ದೇವಾಲಯವನ್ನು ನವೀಕರಿಸಲಾಗಿದೆ" ಎಂದು ಬರೆದುಕೊಂಡಿದ್ದರು.

ತಪ್ಪೊಪ್ಪಿಗೆಯ ಪೋಸ್ಟ್​ ಹಾಕಿದ ನಟಿ ಕಂಗನಾ

ಕಂಗನಾ ಅವರ ಮುಂಬರುವ ಯೋಜನೆಗಳ ಬಗ್ಗೆ ಹೇಳುವುದಾದರೆ ಅವರು, 'ಟಿಕು ವೆಡ್ಸ್ ಶೇರು' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಕಂಗನಾ ಅವರ ನಿರ್ಮಾಣ ಸಂಸ್ಥೆ ಮಣಿಕರ್ಣಿಕಾ ಫಿಲ್ಮ್ಸ್ ನಿರ್ಮಿಸಿದ ಮೊದಲ ಸಿನಿಮಾವಾಗಿದೆ. ಸಾಯಿ ಕಬೀರ್ ನಿರ್ದೇಶನದ ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಮತ್ತು ಅವನೀತ್ ಕೌರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವಿಶೇಷವಾಗಿ ಪ್ರೀಮಿಯರ್ ಮಾಡಲು ಸಿದ್ಧವಾಗಿದೆ. ತಯಾರಕರಿಂದ ಅಧಿಕೃತ ಬಿಡುಗಡೆ ದಿನಾಂಕ ಇನ್ನೂ ಕಾಯುತ್ತಿದೆ.

ಇದನ್ನೂ ಓದಿ:'ವಾವ್ ರಿಷಬ್ ಶೆಟ್ಟಿ, ಹ್ಯಾಟ್ಸ್ ಆಫ್​! ಸಿನಿಮಾ ಅಂದ್ರೆ ಕಾಂತಾರ': ಕಂಗನಾ ಗುಣಗಾನ


ABOUT THE AUTHOR

...view details