ಹೈದರಾಬಾದ್:ಸಿನಿಮಾನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಶೇಖರ್ ಆರ್ಟ್ಸ್ ಕ್ರಿಯೇಷನ್ ಮಾಲೀಕ ಕೊಪ್ಪದ ಶೇಖರ್ ರಾಜು ಎಂಬುವವರು ವರ್ಮಾ ವಿರುದ್ಧ ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ.
ರಾಂಗೋಪಾಲ್ ವರ್ಮಾ ನಿರ್ದೇಶನದ ಸಿನಿಮಾ 'ಆಶಾ ಎನ್‌ಕೌಂಟರ್' 2019ರಲ್ಲಿ ಹೈದರಾಬಾದ್‌ನ ಉಪನಗರದಲ್ಲಿ ನಡೆದ ಕೊಲೆಯ ನೈಜ ಕಥೆ ಆಧರಿಸಿದೆ. ಕೊಲೆ ಆರೋಪಿಗಳ ಎನ್‌ಕೌಂಟರ್ ಹಿನ್ನೆಲೆಯಲ್ಲಿ ಈ ಚಿತ್ರದ ಕಥೆಯಿದೆ. ಈ ಸಿನಿಮಾ ನಿರ್ಮಾಣಕ್ಕೆಂದು ವರ್ಮಾ ನನ್ನಿಂದ ಹಣ ಪಡೆದು ವಂಚಿಸಿದ್ದಾರೆ ಎಂದು ಶೇಖರ್ ರಾಜು ಆರೋಪಿಸಿದ್ದಾರೆ.