ಕರ್ನಾಟಕ

karnataka

ETV Bharat / entertainment

'ಚಂದ್ರಮುಖಿ 2' ಬಿಡುಗಡೆ: ಕಂಗನಾ ರಣಾವತ್​ ನಟನೆಗೆ ಮನಸೋತ ಸೌತ್​ ಪ್ರೇಕ್ಷಕರು - ಈಟಿವಿ ಭಾರತ ಕನ್ನಡ

ಇಂದು 'ಚಂದ್ರಮುಖಿ 2' ತೆರೆ ಕಂಡಿದೆ. ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Chandramukhi 2 twitter review
'ಚಂದ್ರಮುಖಿ 2' ಬಿಡುಗಡೆ: ಸಿನಿಮಾ ವೀಕ್ಷಿಸಿದ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿತ್ತು...

By ETV Bharat Karnataka Team

Published : Sep 28, 2023, 3:40 PM IST

2023ರ ಬಹುನಿರೀಕ್ಷಿತ ಚಿತ್ರ 'ಚಂದ್ರಮುಖಿ 2' ಇಂದು ತೆರೆ ಕಂಡಿದೆ. ಖ್ಯಾತ ನಿರ್ದೇಶಕ, ನಟ ಹಾಗೂ ಸ್ಟಾರ್​ ಕೊರಿಯೋಗ್ರಾಫರ್​ ರಾಘವ ಲಾರೆನ್ಸ್​ ಮತ್ತು ಬಾಲಿವುಡ್​ ನಟಿ ಕಂಗನಾ ರಣಾವತ್​ ನಟನೆಗೆ ಪ್ರೇಕ್ಷಕರು ಫುಲ್​ ಮಾರ್ಕ್ಸ್​ ಕೊಟ್ಟಿದ್ದಾರೆ. ಹಿರಿಯ ನಿರ್ದೇಶಕ ಪಿ. ವಾಸು ನಿರ್ದೇಶನದಲ್ಲಿ ಮೂಡಿಬಂದ ಈ ಹಾರರ್​ ಕಾಮಿಡಿ ಸಿನಿಮಾಗೆ ಉತ್ತಮ ಬೆಂಬಲ​ಸಿಕ್ಕಿದೆ. ಈಗಾಗಲೇ ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಪ್ರೇಕ್ಷಕರು ಹೇಳಿದ್ದೇನು?:ಫಸ್ಟ್​ ಶೋ ನೋಡಿದ ಕೆಲವರು ಸಿನಿಮಾ ಡೀಸೆಂಟ್​ ಆಗಿದೆ ಎಂದಿದ್ದಾರೆ. ಹಾರರ್​ ದೃಶ್ಯಗಳು ಹಾಗೂ ದ್ವಿತಿಯಾರ್ಧ ತುಂಬಾ ಚೆನ್ನಾಗಿದೆ. ಅದರಲ್ಲೂ ನಟಿ ಕಂಗನಾ ರಣಾವತ್​ ಅಭಿನಯ ಅದ್ಭುತವಾಗಿದೆ ಎಂದು ನೆಟ್ಟಿಗರು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ. ಸಿನಿಮಾ ನೋಡಿದ ಮತ್ತೊಬ್ಬರು ಮೊದಲಾರ್ಧ ತುಂಬಾ ಮನರಂಜನೆಯಿಂದ ಕೂಡಿತ್ತು. ಹಾಸ್ಯ ನಟ ವಡಿವೇಲು ಅವರ ಹಾಸ್ಯ ನಗು ತರಿಸಿತು ಎಂದಿದ್ದಾರೆ.

ಅದರಲ್ಲೂ ಚಿತ್ರದಲ್ಲಿ ರಾಘವ ಲಾರೆನ್ಸ್​ ಪಾತ್ರಕ್ಕಿಂತ ಹೆಚ್ಚಾಗಿ ಬಾಲಿವುಡ್​ ಬೆಡಗಿ ಕಂಗನಾ ರಣಾವತ್​ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಅವರ ಸ್ಕ್ರೀನ್​ ಪ್ರೆಸೆನ್ಸ್​ ತುಂಬಾ ಚೆನ್ನಾಗಿದೆ. ಅವರ ನಟನೆ ಸಿನಿಮಾಗೆ ಪ್ಲಸ್​ ಪಾಯಿಂಟ್​ ಎನ್ನಲಾಗಿದೆ. ಅದೂ ಅಲ್ಲದೇ ಈ ಸಿನಿಮಾ ಮೂಲಕ ಕಂಗನಾ ಸೌತ್​ ಇಂಡಸ್ಟ್ರಿಗೆ ಗ್ರ್ಯಾಂಡ್​ ರೀ ಎಂಟ್ರಿ ಕೊಟ್ಟಿದ್ದಾರೆ ಎಂಬುದು ಪ್ರೇಕ್ಷಕರ ಅಭಿಪ್ರಾಯ.

ಚಂದ್ರಮುಖಿ 2 ಕಥೆಯೇನು?: ಚಂದ್ರಮುಖಿ 2 ವರ್ತಮಾನ ಮತ್ತು ಭೂತಕಾಲದ ಸನ್ನಿವೇಶಗಳ ಕಥಾ ಹಂದರ ಹೊಂದಿದೆ. ಕುಟುಂಬವೊಂದು ಅರಮನೆಯೊಳಗೆ ಪ್ರವೇಶಿಸುತ್ತದೆ. ಅಲ್ಲಿ ಚಂದ್ರಮುಖಿಯ ಆತ್ಮ ನೆಲೆಸಿದೆ. ಚಂದ್ರಮುಖಿ ರಾಜ ವೆಟ್ಟಿಯಾನ್‌ನ ಮೆಚ್ಚಿನ ನರ್ತಕಿ. ಸಿನಿಮಾಗೂ ಮುಂಚೆ ಬಿಡುಗಡೆಯಾಗಿರುವ ಟ್ರೇಲರ್​ನಲ್ಲಿ ಇಂಥ ಕುತೂಹಲಕಾರಿ ಅಂಶಗಳನ್ನು ನೀವು ಕಾಣಬಹುದು.

ಸೇಡು ತೀರಿಸಿಕೊಳ್ಳುವ ಚಂದ್ರಮುಖಿಯ ಆತ್ಮದಿಂದ ಮುಂದೇನಾಗುತ್ತದೆ ಎಂಬುದೇ ಚಿತ್ರದ ತಿರುಳು. ನಿರ್ದೇಶಕ ಪಿ.ವಾಸು ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾ ಭೂಲ್ ಭುಲೈಯ್ಯಾ ಚಿತ್ರವನ್ನು ನೆನಪಿಸುವಂತಿದೆ. ಆದಾಗ್ಯೂ, ಹಳೇ ಸಿನಿಮಾಗಳಿಗಿಂತ ಹೆಚ್ಚು ವಿಶೇಷತೆಗಳನ್ನು ಚಂದ್ರಮುಖಿ 2 ಒಳಗೊಂಡಿದೆ.

ಐದು ಭಾಷೆಗಳಲ್ಲಿ ಬಿಡುಗಡೆ: 2005 ರಲ್ಲಿ ಚಂದ್ರಮುಖಿ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ ಪ್ರೇಕ್ಷರನ್ನು ಸೆಳೆಯುವಲ್ಲಿಯೂ ಸಫಲವಾಗಿತ್ತು. ಬಾಕ್ಸ್​ ಆಫೀಸ್​ ಸಂಖ್ಯೆ ಕೂಡ ಉತ್ತಮವಾಗಿತ್ತು. ದಕ್ಷಿಣ ಭಾರತ ಸಿನಿಮಾ ವಲಯದ ಸೂಪರ್‌​ಸ್ಟಾರ್​ ರಜನಿಕಾಂತ್​ ಮತ್ತು ಜ್ಯೋತಿಕಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಸಿನಿಮಾ ಸೂಪರ್​ ಹಿಟ್ ಆಗಿತ್ತು. ಮೊದಲ ಭಾಗ ತೆರೆಕಂಡು 18 ವರ್ಷಗಳ ಬಿಡುವಿನ​ ಬಳಿಕ ಇದೀಗ ಚಂದ್ರಮುಖಿ 2 ಬಂದಿದೆ. ಇಂದು ಕನ್ನಡ, ತೆಲುಗು, ತಮಿಳು, ಹಿಂದಿ, ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿದೆ.

ಚಿತ್ರತಂಡ ಹೀಗಿದೆ.. ರಾಘವ​ ಲಾರೆನ್ಸ್​​, ಕಂಗನಾ ರಣಾವತ್​ ಅಲ್ಲದೇ ಹಾಸ್ಯ ವಡಿವೇಲು, ಲಕ್ಷ್ಮೀ ಮೆನನ್​, ಮಹಿಮಾ ನಂಬಿಯಾರ್​, ರಾಧಿಕಾ ಶರತ್​ ಕುಮಾರ್​, ಸುರೇಶ್​ ಮೆನನ್​ ಸೇರಿದಂತೆ ದೊಡ್ಡ ತಾರಾಬಳಗವಿದೆ. ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆಯ ಒಡೆಯ ಸುಭಾಷ್​ ಕರಣ್​ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದಾರೆ. ಆಸ್ಕರ್​ ಪ್ರಶಸ್ತಿ ವಿಜೇತ ಎಂಎಂ ಕೀರವಾಣಿ ಸಂಗೀತ ನಿರ್ದೇಶನ, ಆರ್​.ಡಿ ರಾಜಶೇಖರ್​ ಛಾಯಾಗ್ರಹಣ, ಅಂಥೋನಿ ಸಂಕಲನ ಚಿತ್ರಕ್ಕಿದೆ. ಹಲವು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪಿ. ವಾಸು ಅವರ 65ನೇ ಚಿತ್ರವಿದು.

ಇದನ್ನೂ ಓದಿ:'ಚಂದ್ರಮುಖಿ 2' ನನ್ನ ಕರಿಯರ್​ನ ಬೆಸ್ಟ್ ಸಿನಿಮಾವೆಂದ ಬಾಲಿವುಡ್ ಕ್ವೀನ್ ಕಂಗನಾ ರಣಾವತ್

ABOUT THE AUTHOR

...view details