ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ 'ಚಂದ್ರಮುಖಿ' ಚಿತ್ರದ ಸೀಕ್ವೆಲ್ ಬರುತ್ತಿದೆ. ತಮಿಳು ಮತ್ತು ತೆಲುಗಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿದ್ದರೆ, ಕನ್ನಡದ 'ಆಪ್ತಮಿತ್ರ' ಚಿತ್ರದಲ್ಲಿ ಸಾಹಸಸಿಂಹ ದಿ.ಡಾ.ವಿಷ್ಣುವರ್ಧನ ಮಾಡಿದ್ದರು. ಇದೀಗ 'ಚಂದ್ರಮುಖಿ-2' ಚಿತ್ರದಲ್ಲಿ ರಜನಿಕಾಂತ್ ಬದಲಿಗೆ ರಾಘವ್ ಲಾರೆನ್ಸ್ ಮಾಡುತ್ತಿದ್ದಾರೆ. ಶುಕ್ರವಾರದಿಂದ ಮೈಸೂರಿನಲ್ಲಿ ಚಿತ್ರದ ಶೂಟಿಂಗ್ ಕೂಡ ಆರಂಭವಾಗಿದೆ.
ಹೌದು, ಈ ಬಗ್ಗೆ ಖುದ್ದು ನಟ ರಾಘವ್ ಲಾರೆನ್ಸ್ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ, ಚಿತ್ರದ ಶೂಟಿಂಗ್ ಆರಂಭಕ್ಕೂ ಮುನ್ನ ರಜನಿಕಾಂತ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿರುವ ಬಗ್ಗೆ ಲಾರೆನ್ಸ್ ಟ್ವಿಟರ್ ಮೂಲಕ ಬಹಿರಂಗ ಪಡಿಸಿದ್ದಾರೆ.