ರಾಘವ್ ಲಾರೆನ್ಸ್ ಹಾಗೂ ಕಂಗನಾ ರಣಾವತ್ ಅಭಿನಯದ 'ಚಂದ್ರಮುಖಿ 2' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಗಣೇಶ್ ಚತುರ್ಥಿಗೆ ಬೆಳ್ಳಿತೆರೆಗೆ ಎಂಟ್ರಿ ಕೊಡ್ತಿರುವ ಈ ಚಿತ್ರದ ಟ್ರೇಲರ್, ಟೀಸರ್ ಭಾರಿ ಸದ್ದು ಮಾಡುತ್ತಿದೆ. ಹಿರಿಯ ನಿರ್ದೇಶಕ ಪಿ.ವಾಸು ನಿರ್ದೇಶನದಲ್ಲಿ ಮೂಡಿ ಬಂದಿರುವ ಚಂದ್ರಮುಖಿ 2 ಸಿನಿಮಾದ ಆಡಿಯೋ ಲಾಂಚ್ ಇವೆಂಟ್ ಇತ್ತೀಚೆಗೆ ಚೆನ್ನೈನಲ್ಲಿ ಅದ್ಧೂರಿಯಾಗಿ ನೆರವೇರಿದ್ದು, ಇಡೀ ಚಿತ್ರತಂಡವೇ ಹಾಜರಿತ್ತು.
ನಾಯಕ ನಟ ರಾಘವ್ ಲಾರೆನ್ಸ್ ಮಾತನಾಡಿ, ಹಲವು ಕುತೂಹಲಕಾರಿ ಅಂಶಗಳನ್ನು ಹಂಚಿಕೊಂಡರು. "ದೊಡ್ಡ ಸ್ಟಾರ್‌ಗಳ ಜೊತೆ ಸಿನಿಮಾ ಮಾಡುವ ಸುಭಾಸ್ಕ್ ಕರಣ್ ಅವರು ನನ್ನ ಜೊತೆ ಸಿನಿಮಾ ಮಾಡ್ತಾರಾ ಎಂದು ಆಶ್ಚರ್ಯ ಪಡ್ತಿದ್ದೆ. ಆದರೆ, 'ಚಂದ್ರಮುಖಿ 2' ಅಂತಹ ದೊಡ್ಡ ಸಿನಿಮಾ ಮಾಡಿದ್ರು. ಅವರ ಬ್ಯಾನರ್‌ನ ಭಾಗವಾಗಿರುವುದಕ್ಕೆ ಹೆಮ್ಮೆ ಪಡುತ್ತೇವೆ. ನಮ್ಮ ನಿರ್ದೇಶಕ ವಾಸು ಸರ್ ಅವರಿಗೆ ನಾಲ್ಕು ದಶಕಗಳ ಅನುಭವವಿದೆ.ನಾನು ಸೈಡ್ ಡ್ಯಾನ್ಸರ್ ಆಗಿ ಕೆಲಸ ಮಾಡಿದ ಕಾಲದಿಂದಲೂ ಅವರು ನಿರ್ದೇಶಕರಾಗಿ ಉತ್ತಮ ಚಿತ್ರಗಳನ್ನು ಮಾಡಿದ್ದಾರೆ" ಎಂದರು.
ಕಂಗನಾ ರಣಾವತ್ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದಾಗ ನನಗೆ ಆಶ್ಚರ್ಯವಾಯಿತು. ಕೀರವಾಣಿ ಅವರ ಬಗ್ಗೆ ಮಾತನಾಡಲು ಪದಗಳು ಸಾಕಾಗುವುದಿಲ್ಲ, ಅವರು ಎಂದಿಗೂ ಕೆಲಸದ ಬಗ್ಗೆ ಟೆನ್ಶನ್ ತೆಗೆದುಕೊಳ್ಳುವುದಿಲ್ಲ, ತಮ್ಮ ಕೆಲಸವನ್ನು ಆನಂದಿಸುತ್ತಾರೆ. ಅದಕ್ಕಾಗಿಯೇ ಅವರು ನಮ್ಮ ಚಿತ್ರಕ್ಕೆ ಉತ್ತಮ ಸಂಗೀತ ನೀಡಿದ್ದಾರೆ. ಛಾಯಾಗ್ರಾಹಕ ರಾಜಶೇಖರ್, ಕಲಾ ನಿರ್ದೇಶಕ ತೊಟ್ಟ ಥರಣಿ ಗಾರು, ಸಂಕಲನಕಾರ ಆಂಟನಿ ಸೇರಿದಂತೆ ಇಡೀ ಚಿತ್ರತಂಡದ ಸಹಕಾರದಿಂದ 'ಚಂದ್ರಮುಖಿ 2' ನಂತಹ ಅದ್ಭುತ ಚಿತ್ರವನ್ನು ಮಾಡಲಾಗಿದೆ. ಖಂಡಿತ ಈ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ ಎಂದು ಹೇಳಿದರು.