ಕರ್ನಾಟಕ

karnataka

ETV Bharat / entertainment

ಸೂತ್ರಧಾರಿ‌: ಪೊಲೀಸ್ ಅಧಿಕಾರಿಯಾಗಿ ಚಂದನ್​ ಶೆಟ್ಟಿ - ಮೈಕ್​ ಹಿಡಿದ ಕೈಯಲ್ಲೀಗ ಗನ್ - Sootradhari movie

ನಟ ಚಂದನ್ ಶೆಟ್ಟಿ ಮತ್ತು ನಟಿ‌ ಅಪೂರ್ವ ಅಭಿನಯದ ಸೂತ್ರಧಾರಿ‌ ಸಿನಿಮಾದ ಫಸ್ಟ್ ಲುಕ್ ಅನಾವರಣ ಆಗಿದೆ.

Chandan shetty starrer Sootradhari movie First Look release
ಸೂತ್ರಧಾರಿ‌ ಫಸ್ಟ್ ಲುಕ್ ಅನಾವರಣ

By

Published : Oct 8, 2022, 5:30 PM IST

ಕನ್ನಡದ ರ‍್ಯಾಪರ್, ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಎಲ್ಲರ ಕಾಲೆಳಿಯತ್ತೆ ಕಾಲ ಸಿನಿಮಾ ಮೂಲಕ ನಟ ಆಗಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸಿನಿಮಾ ಬಿಡುಗಡೆಗೂ ಮುನ್ನ ಚಂದನ್ ಶೆಟ್ಟಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದು, ಆ ಸಿನಿಮಾದ ಟೈಟಲ್, ಫಸ್ಟ್ ಲುಕ್ ಅನಾವರಣ ಆಗಿದೆ.

ಸೂತ್ರಧಾರಿ‌ ಫಸ್ಟ್ ಲುಕ್ ಅನಾವರಣ

ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಈಗ ಖಾಕಿ ತೊಟ್ಟು ಸೂತ್ರಾಧಾರಿ ಆಗಿದ್ದಾರೆ. ಇದು ಚಂದನ್ ಶೆಟ್ಟಿ ಒಪ್ಪಿಕೊಂಡಿರುವ ಹೊಸ‌ ಚಿತ್ರದ ಟೈಟಲ್. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿರಣ್ ಕುಮಾರ್ ನಿರ್ದೇಶಿಸಲಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಚಿತ್ರ. ಚಂದನ್ ಶೆಟ್ಟಿ ಅಭಿನಯದ ಜೊತೆಗೆ ಸಂಗೀತ ಸಂಯೋಜಿಸಲಿದ್ದಾರೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಚಂದನ್ ಶೆಟ್ಟಿ ಜೋಡಿಯಾಗಿ ಈಗಾಗಲೇ ಕನ್ನಡದಲ್ಲಿ ಭರವಸೆ ಹುಟ್ಟಿಸಿರೋ ನಟಿ‌ ಅಪೂರ್ವ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ತಬಲಾ ನಾಣಿ ಅಭಿನಯ ಮಾಡುತ್ತಿದ್ದಾರೆ‌.

ಸೂತ್ರಧಾರಿ‌ ಚಿತ್ರತಂಡ

ಇನ್ನು ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಸಿನಿಮಾಗಳ ಪ್ರೀ ರಿಲೀಸ್ ಇವೆಂಟ್ ಸೇರಿದಂತೆ ಸಾಕಷ್ಟು ಸಮಾರಂಭಗಳನ್ನು ಮಾಡುತ್ತಿರುವ ನವರಸನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈವರೆಗೂ ದಮಯಂತಿ ಸೇರಿದಂತೆ ನಾಲ್ಕು ಚಿತ್ರಗಳನ್ನು ನವರಸನ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ನಿರ್ಮಾಣದೊಂದಿಗೆ ಕ್ರಿಯೇಟಿವ್ ನಿರ್ದೇಶಕನಾಗಿಯೂ ನವರಸನ್ ಕಾರ್ಯ ನಿರ್ವಹಿಸಲಿದ್ದಾರೆ‌. ಸದ್ಯ ರಿವೀಲ್ ಆಗಿರುವ ಪೋಸ್ಟರ್​ನಲ್ಲಿ ಚಂದನ್ ಶೆಟ್ಟಿ, ಕೈಗೆ ಬೇಡಿ ಜೊತೆಗೆ ಗನ್‌ ಹಿಡಿದಿದ್ದು, ಮುಖ ತುಂಬಾ ರಕ್ತಮಯ ಆಗಿದೆ. ಸದ್ಯ ಟೈಟಲ್, ಪೋಸ್ಟರ್ ಅನಾವರಣ ಆಗಿದ್ದು, ಸೂತ್ರಧಾರಿ‌ ಸಿನಿಮಾ‌ ಇದೇ ತಿಂಗಳಿನಿಂದ ಚಿತ್ರೀಕರಣ ಶುರು ಮಾಡಲಿದೆ.

ಇದನ್ನೂ ಓದಿ:ಕಾಂತಾರ ಸಿನಿಮಾ ಮೆಚ್ಚಿ ಕೊಂಡಾಡಿದ ಅಭಿನಯ ಚಕ್ರವರ್ತಿ

ABOUT THE AUTHOR

...view details