ಕರ್ನಾಟಕ

karnataka

ETV Bharat / entertainment

ಹೆಸರಿಡದ ಚಿತ್ರಕ್ಕೆ ಜೋಡಿಯಾದ ಚಂದನವನದ ಬ್ಯೂಟಿಫುಲ್​ ಕಪಲ್​ ಚಂದನ್​ ಶೆಟ್ಟಿ-ನಿವೇದಿತಾ ಗೌಡ - ಈಟಿವಿ ಭಾರತ ಕನ್ನಡ

ಪುನೀತ್​ ಶ್ರೀನಿವಾಸ್ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Chandan Shetty and niveditha gowda movie
ಹೆಸರಿಡದ ಚಿತ್ರಕ್ಕೆ ಜೋಡಿಯಾದ ಚಂದನವನದ ಬ್ಯೂಟಿಫುಲ್​ ಕಪಲ್​ ಚಂದನ್​ ಶೆಟ್ಟಿ-ನಿವೇದಿತಾ ಗೌಡ

By ETV Bharat Karnataka Team

Published : Dec 11, 2023, 12:45 PM IST

ರಿಯಲ್​ ಲೈಫ್​ ಜೋಡಿಗಳು ಸಿನಿಮಾದಲ್ಲೂ ಜೊತೆಯಾಗಿ ನಟಿಸೋದು ಹೊಸತೇನಲ್ಲ. ಇದೀಗ ಆ ಸಾಲಿನಲ್ಲಿ ಬಿಗ್​ ಬಾಸ್​ ವಿಜೇತ, ರ‍್ಯಾಪರ್ ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ದಂಪತಿ ಸೇರಿದ್ದಾರೆ. ಮೊದಲ ಬಾರಿಗೆ ಬೆಳ್ಳಿ ತೆರೆಯ ಮೇಲೂ ಜೋಡಿಯಾಗಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಈವರೆಗೆ ಚಂದನ್​ ಶೆಟ್ಟಿ ಅವರ ಆಲ್ಬಂ ಸಾಂಗ್​ಗಳಲ್ಲಿ ನಿವೇದಿತಾ ಗೌಡ ಗೆಸ್ಟ್​ ಅಫೀರಿಯೆನ್ಸ್​ ಆಗಿರುತ್ತಿದ್ದರು. ಇದೀಗ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಸೈಕೋ ಥ್ರಿಲ್ಲರ್​ ಕಥಾಹಂದರ ಹೊಂದಿರುವ ಚಿತ್ರಕ್ಕೆ ಜೋಡಿಯಾಗಲಿದ್ದಾರೆ.

ಪುನೀತ್​ ಶ್ರೀನಿವಾಸ್​ ಕಥೆ, ಚಿತ್ರಕಥೆ ಬರೆದು, ಆ್ಯಕ್ಷನ್ ಕಟ್​ ಹೇಳಿರುವ ಈ ಸಿನಿಮಾಗೆ ಸದ್ಯ ಶೀರ್ಷಿಕೆ ಫೈನಲ್​ ಆಗಿಲ್ಲ. ಕನ್ನಡ ಚಿತ್ರರಂಗದ ಸ್ಟಾರ್​ ನಟರಾದ ಉಪೇಂದ್ರ, ಸುದೀಪ್​ಗೆ ಆ್ಯಕ್ಷನ್​ ಕಟ್​ ಹೇಳಿರುವ ನಂದ ಕಿಶೋರ್​ ಅವರ ಬಳಿ ಸಹ ನಿರ್ದೇಶಕನಾಗಿ ಪುನೀತ್​ ಶ್ರೀನಿವಾಸ್​ ಕೆಲಸ ಮಾಡುತ್ತಿದ್ದರು. ಸುಮಾರು 12 ವರ್ಷಗಳ ಕಾಲ ಅವರ ನಿರ್ದೇಶನ ನೋಡಿ ಪ್ರೇರಿತರಾಗಿ ಇದೇ ಮೊದಲ ಬಾರಿಗೆ ಪುನೀತ್​ ಡೈರೆಕ್ಟರ್​ ಟೋಪಿ ತೊಟ್ಟಿದ್ದಾರೆ.

ಹೆಸರಿಡದ ಚಿತ್ರಕ್ಕೆ ಜೋಡಿಯಾದ ಚಂದನವನದ ಬ್ಯೂಟಿಫುಲ್​ ಕಪಲ್​ ಚಂದನ್​ ಶೆಟ್ಟಿ-ನಿವೇದಿತಾ ಗೌಡ

ಇನ್ನೂ ಹೆಸರಿಡದ ಈ ಚಿತ್ರಕ್ಕೆ ಶ್ರೀ ಚೌಡೇಶ್ವರಿ ಸಿನಿ ಕ್ರಿಯೇಶನ್ಸ್​ ಮೂಲಕ ಎಲ್​. ಮೋಹನ್​ ಕುಮಾರ್​ ಅವರು ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಎಂ ಎಸ್​ ತ್ಯಾಗರಾಜ್​ ಅವರ ಸಂಗೀತ ಸಂಯೋಜನೆ, ಕರುಣಾಕರ್​ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಶುರುವಾಗಲಿದೆ. ಬಹುತೇಕ ಬೆಂಗಳೂರು ಸುತ್ತಮುತ್ತ ಶೂಟಿಂಗ್​ ಮಾಡುವ ಯೋಜನೆ ಚಿತ್ರತಂಡಕ್ಕಿದೆ. ಸದ್ಯದಲ್ಲೇ ಚಿತ್ರದ ಶೀರ್ಷಿಕೆ ಹಾಗೂ ಮುಹೂರ್ತದ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ನಿರ್ದೇಶಕ ಪುನೀತ್​ ತಿಳಿಸಿದ್ದಾರೆ.

'ಸೂತ್ರಧಾರಿ'ಯಾದ ಚಂದನ್​ ಶೆಟ್ಟಿ: ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಒಂದಲ್ಲ ಒಂದು ವಿಚಾರವಾಗಿ ಟಾಕ್​ ಆಗುತ್ತಿರುವ ಚಿತ್ರ ಎಂದರೆ ಅದು 'ಸೂತ್ರಧಾರಿ'. ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾವಿದು. ಈ ಚಿತ್ರವನ್ನು ಕಿರಣ್​ ಕುಮಾರ್​ ನಿರ್ದೇಶನ ಮಾಡಿದ್ದಾರೆ. ಚಂದನ್ ಶೆಟ್ಟಿ ಜೋಡಿಯಾಗಿ ಅಪೂರ್ವ ನಟಿಸಿದ್ದಾರೆ‌. ಜೊತೆಗೆ ಸಂಜನಾ ಆನಂದ್ ಸ್ಪೆಷಲ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ನಟರಾದ ಪ್ರಶಾಂತ್​ ನಟನ, ಗಿರೀಶ್​, ಗಣೇಶ್​, ನಾರಾಯಣ್​ ಮುಂತಾದವರು ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹಾಗೂ ಪೋಸ್ಟರ್​ಗಳು ಹೆಚ್ಚು ಸದ್ದು ಮಾಡುತ್ತಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.

ಇದನ್ನೂ ಓದಿ:ಚಂದನ್ ಶೆಟ್ಟಿ ಹೊಸಹೆಜ್ಜೆ 'ನಾದಯೋಗಿ': ನಿಮ್​ ವಿಡಿಯೋ ಇಲ್ಲಿ​ ಬರಬೇಕೇ? ಹೀಗೆ ಮಾಡಿ

ABOUT THE AUTHOR

...view details