ಕರ್ನಾಟಕ

karnataka

ETV Bharat / entertainment

ಸ್ನೇಹಿತ ಶಿವಾನಂದ ಕೊಟ್ಟ ಮಾತು ಉಳಿಸಿಕೊಂಡು ನನ್ನನ್ನು ಹೀರೋ ಮಾಡಿದ್ದಾರೆ: ಸಚಿನ್ ಧನ್​​ಪಾಲ್ - champion movie producer shivananda

ಶಿವಾನಂದ ಎಸ್ ನೀಲಣ್ಣನವರು 14 ವರ್ಷಗಳ ಹಿಂದೆ ಕೊಟ್ಟ ಮಾತನ್ನು ಉಳಿಸಿಕೊಂಡು ಇಂದು ಸ್ನೇಹಿತ ಸಚಿನ್ ಧನ್​​ಪಾಲ್ ಅವರನ್ನು ಚಾಂಪಿಯನ್ ಸಿನಿಮಾ ಮೂಲಕ ಹೀರೋ ಮಾಡಿದ್ದಾರೆ.

champion movie team
ಚಾಂಪಿಯನ್ ಚಿತ್ರತಂಡ

By

Published : Sep 13, 2022, 7:05 PM IST

ನಾನು ಚಿತ್ರದಲ್ಲಿ ನಟಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನನ್ನ ತಂದೆ, ತಮ್ಮ ಎಲ್ಲ ಆರ್ಮಿಯಲ್ಲಿದ್ದಾರೆ. ನಾನು ಸಹ ಪರೀಕ್ಷೆ ಬರೆದಿದ್ದೆ. ಆದರೆ ಸೆಲೆಕ್ಟ್ ಆಗಲಿಲ್ಲ. ಹನ್ನೆರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಕೆಲಸ ಮಾಡುತ್ತಿದ್ದೆ. ಕೆಲವು ವರ್ಷಗಳ ಹಿಂದೆ ನನ್ನ ಸ್ನೇಹಿತ ಶಿವಾನಂದ ನನಗೊಂದು ಮಾತು ಕೊಟ್ಟಿದ್ದ. ಕೊಟ್ಟ ಮಾತಿನಂತೆ ಚಾಂಪಿಯನ್ ಸಿನಿಮಾ ಮೂಲಕ ನನ್ನನ್ನು ಹೀರೋ ಮಾಡಿದ್ದಾರೆ ಎಂದು ಉದಯೋನ್ಮುಖ ನಟ ಸಚಿನ್ ಧನ್​​ಪಾಲ್ ತಿಳಿಸಿದರು.

ಸಚಿನ್ ಧನ್​​ಪಾಲ್, ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿರೋ ಚಾಂಪಿಯನ್ ಚಿತ್ರದ ಟ್ರೈಲರ್ ಅನ್ನು ಇತ್ತೀಚೆಗೆ ಡೈನಾಮಿಕ್ ಸ್ಟಾರ್ ದೇವರಾಜ್ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ, ಮಾತನಾಡಿದ ಸಚಿನ್ ಧನ್​​ಪಾಲ್, ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ನಟಿ ಅದಿತಿ ಪ್ರಭುದೇವ ಸೇರಿದಂತೆ ಎಲ್ಲರ ಅಭಿನಯ ಚೆನ್ನಾಗಿದೆ. ಸನ್ನಿ ಲಿಯೋನ್ ಈ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಟ್ರೈಲರ್ ಬಿಡುಗಡೆ ಮಾಡಿಕೊಟ್ಟ ದೇವರಾಜ್ ಸರ್​ ಅವರಿಗೆ, ಸಮಾರಂಭಕ್ಕೆ ಆಗಮಿಸಿರುವ ಲಹರಿ ವೇಲು ಅವರಿಗೆ ಧನ್ಯವಾದ ಎಂದು ತಿಳಿಸಿದರು.

ಟ್ರೈಲರ್ ಬಿಡುಗಡೆ ಮಾಡಿಕೊಟ್ಟ ನಟ ದೇವರಾಜ್ ಮಾತನಾಡಿ, ನನ್ನ ಮನೆಗೆ ಶಿವಾನಂದ್ ಹಾಗೂ ಸಚಿನ್ ಅವರು ಬಂದಿದ್ದ ವೇಳೆ ನಾನು ನಿರ್ಮಾಪಕ ಹಾಗೂ ಹೀರೋ ಬಂದಿದ್ದಾರೆ ಅಂದುಕೊಂಡಿದ್ದೆ. ಆನಂತರ ಇವರ ಸ್ನೇಹದ ಬಗ್ಗೆ ತಿಳಿದು ಆನಂದವಾಯಿತು. ನಾನು ಕೂಡ ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದು ತಿಳಿಸಿದರು.

ನಟಿ ಅದಿತಿ ಪ್ರಭುದೇವ ಮಾತನಾಡಿ, ನಾನು ಈ ಚಿತ್ರದಲ್ಲಿ ನಟಿಸಲು ಪ್ರಮುಖ ಕಾರಣ ನಿರ್ದೇಶಕ ಶಾಹುರಾಜ್ ಶಿಂಧೆ. ಇಂದು ಅವರಿಲ್ಲದಿರುವುದು ದುಃಖದ ವಿಷಯ. ಉತ್ತರ ಕರ್ನಾಟಕದ ನಿರ್ಮಾಪಕ ಶಿವಾನಂದ್ ಅವರ ಬಗ್ಗೆ ನನಗೆ ಹೆಮ್ಮೆಯಿದೆ. ಸ್ನೇಹಿತನಿಗಾಗಿ ಅವರು ಚಿತ್ರ ನಿರ್ಮಾಣ ಮಾಡಿರುವುದು ನಿಜಕ್ಕೂ ಖುಷಿಯ ವಿಚಾರ. ಮೊದಲ ಚಿತ್ರದಲ್ಲೇ ಸಚಿನ್ ಧನ್​ಪಾಲ್​​ ಚೆನ್ನಾಗಿ ನಟಿಸಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಸಚಿನ್ ಧನ್​ಪಾಲ್​-ಅದಿತಿ ಪ್ರಭುದೇವ ಅಭಿನಯದ ಚಾಂಪಿಯನ್​ ಟ್ರೈಲರ್ ಬಿಡುಗಡೆ

ಕೊನೆಯಲ್ಲಿ ಮಾತನಾಡಿದ ನಿರ್ಮಾಪಕ ಶಿವಾನಂದ ಎಸ್ ನೀಲಣ್ಣನವರು, ನನಗೇನಾದರೂ ತುಂಬಾ ದುಡ್ಡು ಬಂದರೆ ನಿನ್ನನ್ನು ಸಿನಿಮಾ ಹೀರೋ ಮಾಡುತ್ತೇನೆ ಎಂದು ಹದಿನಾಲ್ಕು ವರ್ಷಗಳ ಹಿಂದೆ ಸಚಿನ್ ಧನ್​​ಪಾಲ್​​ಗೆ ಹೇಳಿದ್ದೆ. ಈಗ ಆ ಮಾತು ನಿಜವಾಗಿದೆ. ಸಚಿನ್ ಧನಪಾಲ್ ನಾಯಕನಾಗಿ ನಟಿಸಿರುವ ಚಾಂಪಿಯನ್ ಚಿತ್ರವನ್ನು ನಾನು ನಿರ್ಮಾಣ ಮಾಡಿದ್ದೇನೆ.

2019ರಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಯಿತು. ಕೋವಿಡ್, ಆನಂತರ ನಮ್ಮ ಚಿತ್ರದ ನಿರ್ದೇಶಕ ಶಾಹುರಾಜ್ ಶಿಂಧೆ ಅವರ ಹಠಾತ್ ನಿಧನ, ಈ ರೀತಿಯ ಹಲವು ಅಡೆತಡೆಗಳನ್ನು ದಾಟಿ ಈಗ ಚಿತ್ರ ಬಿಡುಗಡೆ ಹಂತ ತಲುಪಿದೆ‌. ಉತ್ತರ ಕರ್ನಾಟಕದ ನನ್ನ ಸ್ನೇಹಿತರು ತಮ್ಮದೇ ಚಿತ್ರ ಅನ್ನುವ ಹಾಗೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

ನನ್ನ ಹಾಗೂ ಸಚಿನ್ ಕುಟುಂಬದವರು ಸಾಕಷ್ಟು ಜನರು ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆರ್ಮಿಯಲ್ಲಿ ನಮಗೆ ಸಾಕಷ್ಟು ಸ್ನೇಹಿತರಿದ್ದಾರೆಂದು ತಿಳಿಸಿದರು. ಇನ್ನೂ ಈ ಚಿತ್ರ ಅಕ್ಟೋಬರ್ 14ರಂದು ಬಿಡುಗಡೆ ಆಗಲಿದೆ.

ABOUT THE AUTHOR

...view details