ಇತ್ತೀಚೆಗೆ ಬಿಡುಗಡೆಯಾದ 'ಚಮಕ್' ಸಿನಿಮಾದ ನಿರ್ದೇಶಕ ರೋಹಿತ್ ಜುಗರಾಜ್ ತಮ್ಮ ವೈಯಕ್ತಿಕ, ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪಂಜಾಬ್ ಸಿನಿಮಾ ಕ್ಷೇತ್ರದ ಜನಪ್ರಿಯನಿರ್ದೇಶಕ ತಮಗೆ ಬೆದರಿಕೆಗಳು ಬರುತ್ತಿವೆ ಎಂದು ತಿಳಿಸಿದ್ದಾರೆ. ನಿರ್ದೇಶಕನ ಹೇಳಿಕೆಗೆ ಚಿತ್ರರಂಗದವರೂ ಸೇರಿದಂತೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಬರುತ್ತಿರುವ ಬೆದರಿಕೆಗಳ ಹಿಂದಿನ ಕಾರಣವನ್ನೂ ಸಹ ನಿರ್ದೇಶಕರು ವಿವರಿಸಿದ್ದಾರೆ. ಪಂಜಾಬಿ ಉದ್ಯಮದ ಕರಾಳ ಮುಖವನ್ನು ತೋರಿಸಿದ್ದಕ್ಕಾಗಿ ತನಗೆ ನಿರಂತರವಾಗಿ ಬೆದರಿಕೆಗಳು ಬರುತ್ತಿವೆ ಎಂಬುದಾಗಿ ಗಾಯಕ ತಿಳಿಸಿದ್ದಾರೆ. 'ಚಮಕ್' ಸರಣಿಯು ಪಂಜಾಬಿ ಸಂಗೀತ ಉದ್ಯಮ ಮತ್ತು ಕ್ಷೇತ್ರದೊಳಗಿನ ಘಟನೆಗಳ ಮೇಲೆ ಬೆಳಕು ಚೆಲ್ಲುತ್ತದೆ.
'ಬೆದರಿಕೆ ಕರೆಗಳು ಬರುತ್ತಿದ್ದರೂ, ನಿರ್ಭೀತವಾಗಿ ಕಥೆ ಹೇಳುವ ನನ್ನ ಕೆಲಸದ ಬದ್ಧತೆ ಅಚಲವಾಗಿ ಉಳಿದುಕೊಂಡಿದೆ. ನಾನು ಸತ್ಯದ ಶಕ್ತಿಯನ್ನು ಬಹಳ ನಂಬುತ್ತೇನೆ. ನಮ್ಮ ಕಥೆಯನ್ನು ಹತ್ತಿಕ್ಕಲು ಬಯಸುವ ನಕಾರಾತ್ಮಕ ಶಕ್ತಿಗ ಹೆದರದೆ ಕೆಲಸ ಮುಂದುವರಿಸುತ್ತೇನೆ. ಅಂತಹ ಯಾವುದೇ ಬೆದರಿಕೆಗಳಿಗೆ ಹೆದರುವುದಿಲ್ಲ. ನಿರ್ಭೀತಿಯಿಂದ ಕಥೆ ಹೇಳುವ ನಿರ್ದೇಶಕ ನಾನು' ಎಂದು ಹೇಳಿದ್ದಾರೆ.