ಕರ್ನಾಟಕ

karnataka

ETV Bharat / entertainment

ಬ್ಯಾಡ್ ಮ್ಯಾನರ್ಸ್ ಚಿತ್ರ ನೋಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಷೇಕ್ ಬಗ್ಗೆ ಹೇಳಿದ್ದೇನು ? - Producer KM Sudhir

ಅಭಿಷೇಕ್​ನಲ್ಲಿ ರಿಯಲ್​ ಅಂಬರೀಷ್ ಶೇಡ್​ಗಳನ್ನು ನೋಡಬಹುದು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

ಅಭಿಷೇಕ್ ಜತೆ ಚಾಲೆಂಜಿಂಗ್ ಸ್ಟಾರ್ ದರ್ಶನ್
ಅಭಿಷೇಕ್ ಜತೆ ಚಾಲೆಂಜಿಂಗ್ ಸ್ಟಾರ್ ದರ್ಶನ್

By ETV Bharat Karnataka Team

Published : Nov 20, 2023, 6:36 PM IST

ಅಭಿಷೇಕ್ ಜತೆ ಚಾಲೆಂಜಿಂಗ್ ಸ್ಟಾರ್ ದರ್ಶನ್

ದುನಿಯಾ ಸೂರಿ ನಿರ್ದೇಶನದ ಹಾಗೂ ಅಭಿಷೇಕ್ ಅಂಬರೀಶ್ ಕಾಂಬೋದಲ್ಲಿ ಬರ್ತಾ ಇರೋ ಮಾಸ್ ಎಂಟರ್​ ಟೈನ್ ಮೆಂಟ್ ಸಿನಿಮಾ ಬ್ಯಾಡ್ ಮ್ಯಾನರ್ಸ್. ಸದ್ಯ ಟ್ರೈಲರ್ ಹಾಗೂ ಹಾಡುಗಳಿಂದ ಸ್ಯಾಂಡಲ್ ವುಡ್​ನಲ್ಲಿ ಟಾಕ್ ಆಗುತ್ತಿರುವ ಬ್ಯಾಡ್ ಮ್ಯಾನರ್ಸ್ ಚಿತ್ರದ ಬಿಡುಗಡೆಗೆ ಇನ್ನು ನಾಲ್ಕು ದಿನ ಬಾಕಿ ಇದೆ. ಅಷ್ಟರಲ್ಲಿ ನಟ ದರ್ಶನ್, ನಟಿ ಸುಮಲತಾ ಅಂಬರೀಷ್ ಸಿನಿಮಾ ರಿಲೀಸ್​ಗೂ ಮುಂಚೆ ಅಭಿಷೇಕ್ ಅಂಬರೀಷ್ ನಟನೆಯ ಬ್ಯಾಡ್ ಮ್ಯಾನರ್ಸ್ ಸಿನಿಮಾವನ್ನ ನೋಡಿ ಮೆಚ್ಚಿಕೊಂಡಿದ್ದಾರೆ.

ಬ್ಯಾಡ್ ಮ್ಯಾನರ್ಸ್ ಚಿತ್ರ ನೋಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಕೆಲವು ದಿನಗಳ ಹಿಂದೆ ಬ್ಯಾಡ್ ಮ್ಯಾನರ್ಸ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ದರ್ಶನ್, ಈಗ ತಮ್ಮನ ಸಿನಿಮಾಗೆ ಫಿದಾ ಆಗಿದ್ದಾರೆ. ಹೌದು ದರ್ಶನ್ ಅವರು ಸುಮಲತಾ ಅಂಬರೀಷ್ ಜೊತೆಗೆ ಬ್ಯಾಡ್ ಮ್ಯಾನರ್ಸ್ ಚಿತ್ರ ನೋಡಿ ಅಭಿಷೇಕ್​ನಲ್ಲಿ ರಿಯಲ್ ಅಂಬರೀಷ್ ಶೇಡ್​ಗಳನ್ನ ನೋಡಬಹುದು ಅಂತಾ ಬೆನ್ನು ತಟ್ಟಿದ್ದಾರೆ.

ಅಷ್ಟೆ ಅಲ್ಲ ಅಭಿ ಬೆನ್ನಿಗೆ ನಿಮ್ಮ ಪ್ರೀತಿಯ ದಾಸ ಎಂದು ಬರೆದು 5ಕ್ಕೆ 5 ಸ್ಟಾರ್​ಗಳನ್ನ ಬರೆದಿದ್ದಾರೆ. ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್​ ಅನ್ನು ನೋಡ್ತೀರಿ. ಮೊದಲನೇ ಸಿನಿಮಾಕ್ಕಿಂತ ಎರಡನೇ ಸಿನಿಮಾದಲ್ಲಿ ಅಭಿ ಅವರದ್ದು ತುಂಬಾ ಇಂಪ್ರ್ಯೂ​ಮೆಂಟ್​ ಇದೆ. ಸಿನಿಮಾ ಬೇರೆ ಲೆವೆಲ್​ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ದಕ್ಕಲಿದೆ ಎಂದು ದರ್ಶನ್ ಭವಿಷ್ಯ ನುಡಿದಿದ್ದಾರೆ.

ನಿರ್ದೇಶಕ ದುನಿಯಾ ಸೂರಿ ಹಾಗೂ ಅಭಿಷೇಕ್ ಅಂಬರೀಶ್ ಕಾಂಬಿನೇಷನ್‌ನಲ್ಲಿ ಬರ್ತಿರೋ ಬ್ಯಾಡ್ ಮ್ಯಾನರ್ಸ್‌ ಸಿನಿಮಾ ಬಹಳ ನಿರೀಕ್ಷೆ ಹುಟ್ಟು ಹಾಕಿದ್ದು, ಸುಕ್ಕಾ ಸೂರಿ ರಾ ಆಕ್ಷನ್ ಥ್ರಿಲ್ಲರ್ ನೋಡೊಕೆ ಒಂದು ವರ್ಗದ ಪ್ರೇಕ್ಷಕರಂತೂ ತುದಿಗಾಲಲ್ಲಿ ನಿಂತಿದ್ದಾರೆ. 3 ವರ್ಷಗಳ ಬಳಿಕ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಅಭಿ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚುತ್ತಿದ್ದು, ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಅಭಿಷೇಕ್ ಬೆನ್ನಿಗೆ ಬರೆಯುತ್ತಿರುವ ಅಂಬರೀಶ್

ಈ ಚಿತ್ರಕ್ಕೆ ನಿರ್ಮಾಪಕ ಕೆ ಎಂ ಸುಧೀರ್ ಬಂಡವಾಳ ಹೂಡಿದ್ದು, ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದು, ಶೇಖರ್ ಎಸ್ ಈ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿದ್ದಾರೆ. ದೀಪು ಎಸ್ ಕುಮಾರ್ ಸಂಕಲನವಿದೆ. ಸದ್ಯ ಟ್ರೈಲರ್​ನಿಂದಲೇ ಸದ್ದು ಮಾಡುತ್ತಿರುವ ಬ್ಯಾಡ್ ಮ್ಯಾನರ್ಸ್ ಚಿತ್ರ ಇದೇ ತಿಂಗಳು 24 ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ :5 ವರ್ಷದ ಪುಟಾಣಿಯಿಂದ ಅನಾವರಣಗೊಂಡಿತು 'ಮಾಯಾನಗರಿ'ಯ 'ಲಚ್ಚಿ ಲಚ್ಚಿ' ಹಾಡು

ABOUT THE AUTHOR

...view details