ಕರ್ನಾಟಕ

karnataka

ETV Bharat / entertainment

'ಚಕ್ಡಾ ಎಕ್ಸ್‌ಪ್ರೆಸ್‌'ನಲ್ಲಿ ಅನುಷ್ಕಾ ಶರ್ಮಾ: ಅಂತಿಮ ಹಂತದಲ್ಲಿದೆ ಜೂಲನ್ ಬಯೋಪಿಕ್‌ - ಟೀಂ ಇಂಡಿಯಾ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಮುಂದಿನ ಚಿತ್ರ ಚಕ್ಡಾ ಎಕ್ಸ್‌ಪ್ರೆಸ್‌ನ ಕೊನೆಯ ಭಾಗದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ವಿಶ್ವದ ಅತಿ ವೇಗದ ಮಹಿಳಾ ಬೌಲರ್ ಜೂಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Jhulan Goswami and Anushka Sharma
ಜೂಲನ್ ಗೋಸ್ವಾಮಿ ಮತ್ತು ಅನುಷ್ಕಾ ಶರ್ಮಾ

By

Published : Nov 8, 2022, 11:27 AM IST

ಮುಂಬೈ: ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಮುಂದಿನ ಚಿತ್ರ ಚಕ್ಡಾ ಎಕ್ಸ್‌ಪ್ರೆಸ್‌ನ ಕೊನೆಯ ಭಾಗದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಕೋಲ್ಕತ್ತಾದಲ್ಲಿ ಶೂಟಿಂಗ್ ಮುಗಿಸಿದ್ದು, ಇದೀಗ ಮುಂಬೈನಲ್ಲಿ ಚಿತ್ರೀಕರಣದಲ್ಲಿದ್ದಾರೆ. ಕೆಲ ತಿಂಗಳಿನಿಂದ ತಡೆರಹಿತ ಚಿತ್ರೀಕರಣ ನಡೆಸುತ್ತಿದ್ದಾರೆ. ಚಿತ್ರಕ್ಕಾಗಿ ಕಠಿಣ ರೀತಿಯಲ್ಲಿ ಅನುಷ್ಕಾ ತಯಾರಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರೋಸಿತ್ ರಾಯ್ ನಿರ್ದೇಶಿಸಿದ 'ಚಕ್ಡಾ ಎಕ್ಸ್‌ಪ್ರೆಸ್' ಭಾರತೀಯ ಮಹಿಳಾ ಕ್ರಿಕೆಟ್ ದಂತಕಥೆ ಜೂಲನ್ ಗೋಸ್ವಾಮಿ ಅವರ ಜೀವನ ಆಧರಿಸಿದ ಕ್ರೀಡಾ ಬಯೋಪಿಕ್ ಆಗಿದೆ. ಇದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರತ್ಯೇಕವಾಗಿ ಸ್ಟ್ರೀಮ್ ಆಗಲಿದೆ. ಅನುಷ್ಕಾ ಮೊದಲ ಬಾರಿಗೆ ವಿಶ್ವದ ಅತಿ ವೇಗದ ಮಹಿಳಾ ಬೌಲರ್ ಜೂಲನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

"ಶೂಟಿಂಗ್‌ ಅನುಭವ ಜೀವಿತಾವಧಿಯಲ್ಲಿ ಸದಾ ನೆನಪಿನಲ್ಲಿ ಉಳಿಯುವಂತಿದೆ. ಜೂಲನ್ ಭಾರತ ಹಾಗೂ ಪಶ್ಚಿಮ ಬಂಗಾಳದ ಐಕಾನ್ ಆಗಿದ್ದಾರೆ. ಹಾಗಾಗಿ ಕೊಲ್ಕತ್ತಾದ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆದಿದೆ. ಅವರ ಜೀವನ ಪರಂಪರೆ ಇಲ್ಲೇ ಪ್ರಾರಂಭವಾದ್ದರಿಂದ ಅವರಿಗೆ ಸಲ್ಲಿಸುವ ಸೂಕ್ತವಾದ ಗೌರವ ಇದಾಗಿದೆ." ಎಂದು ಅನುಷ್ಕಾ ಖುಷಿ ಹಂಚಿಕೊಂಡರು. ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿಲ್ಲ

ಇದನ್ನೂ ಓದಿ:ಟೀಂ ಇಂಡಿಯಾದ ಜೆರ್ಸಿ ಧರಿಸಿ ಕ್ರಿಕೆಟ್​ ಮೈದಾನಕ್ಕಿಳಿದ ಅನುಷ್ಕಾ ಶರ್ಮಾ

ABOUT THE AUTHOR

...view details