ಮುಂಬೈ: 2019ರ ಪತ್ರಕರ್ತನೊಂದಿಗೆ ನಟ ಸಲ್ಮಾನ್ ಖಾನ್ ಅನುಚಿತ ವರ್ತನೆ ತೋರಿದ ಪ್ರಕರಣವನ್ನು ಬಾಂಬೆ ಹೈ ಕೋರ್ಟ್ ರದ್ದುಗೊಳಿಸಿದೆ. ಸೆಲಿಬ್ರಿಟಿ ಎಂಬ ಕಾರಣಕ್ಕೆ ನ್ಯಾಯಾಂಗ ಪ್ರಕ್ರಿಯೆಯ ಮೂಲಕ ಅನಗತ್ಯ ಕಿರುಕುಳ ನೀಡಬಾರದು ಎಂದು ಇದೇ ವೇಳೆ ಕೋರ್ಟ್ ತಿಳಿಸಿದೆ. ನಟ ಸಲ್ಮಾನ್ ಖಾನ್ ಮತ್ತು ಅವರ ಬಾಡಿಗಾರ್ಡ್ ನವಾಜ್ ಶೇಖ್ಗೆ ಕೆಳ ನ್ಯಾಯಲಯ ನೀಡಿದ್ದ ಸಮನ್ಸ್ ಪ್ರಕ್ರಿಯೆಯನ್ನು ಮಾರ್ಚ್ 30ರಂದು ನ್ಯಾಯಮೂರ್ತಿ ಭಾರತಿ ಡಾಂಗ್ರೆ ರದ್ದುಗೊಳಿಸಿದರು. ಈ ಆದೇಶ ಮಂಗಳವಾರ ಲಭಿಸಿದ್ದು, ಇದರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಾರ್ಯವಿಧಾನದ ಆದೇಶ ಅನುಸರಿಸಲು ವಿಫಲವಾಗಿದೆ ಎಂದು ಹೈಕೋರ್ಟ್ ಗಮನಿಸಿದೆ.
ಆರೋಪಿ ಜನಪ್ರಿಯ ನಟ ಎಂಬ ಕಾರಣಕ್ಕೆ ನ್ಯಾಯಾಲಯದ ಪ್ರಕ್ರಿಯೆ ಅಡಿ ಕಿರುಕುಳ ನೀಡಬಾರದು. ದೂರುದಾರರು ಉದ್ದೇಶ ಪೂರ್ವಕವಾಗಿ ಈ ಪ್ರಕರಣವನ್ನು ಬಳಸಿಕೊಂಡಿದ್ದಾರೆ. ನಟ ಎಂಬ ಕಾರಣಕ್ಕೆ ದೂರುದಾರರಿಂದ ಅನಗತ್ಯ ದಬ್ಬಾಳಿಕೆಗೆ ಒಳಗಾಗಬಾರದು. ದೂರಿನಿಂದಾಗಿ ಸಿನಿಮಾ ನಟ ಅವಮಾನಕ್ಕೆ ಒಳಗಾಗಬಹುದು ಎಂದು ಅವರು ಭಾವಿಸಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ. ನಟ ಸಲ್ಮಾನ್ ಖಾನ್ ಮತ್ತು ಶೇಖ್ ದೂರು ಸಲ್ಲಿಕೆಯ ದುರುಪಯೋಗ ಆಗಿದ್ದು, ಅವರಿಗೆ ನ್ಯಾಯ ನೀಡುವ ಉದ್ದೇಶದಿಂದ ಈ ದೋಷಾರೋಪಣೆಯ ಆದೇಶವನ್ನು ರದ್ದುಗೊಳಿಸುವುದು ಸೂಕ್ತ ಎಂದು ನ್ಯಾಯಾಲಯ ಭಾವಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅರ್ಜಿದಾರರ ವಿರುದ್ಧ ಕ್ರಮವನ್ನು ಮುಂದುವರಿಸಿದರೆ ಅದು ಅನ್ಯಾಯವಾಗುತ್ತದೆ. ತನ್ನ ಆರೋಪಗಳನ್ನು ಪರಿಶೀಲಿಸಲು ಮ್ಯಾಜಿಸ್ಟ್ರೇಟ್ ಮೊದಲು ದೂರುದಾರನ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು ಎಂದು ಹೈಕೋರ್ಟ್ ಹೇಳಿದೆ. ಕೆಳ ನ್ಯಾಯಾಲಯವು ಸಮನ್ಸ್ ನೀಡುವಾಗ ಕ್ರಿಮಿನಲ್ ಪ್ರೊಸೀಜರ್ ಕೋಡ್ ಡಿಯಲ್ಲಿ ನಿಗದಿಪಡಿಸಿದ ಕಾರ್ಯವಿಧಾನವನ್ನು ಬದಿಗೊತ್ತಿದೆ ಎಂದು ಇದೇ ವೇಳೆ ಉಲ್ಲೇಖಿಸಿದೆ.