ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ. ವಿಶ್ವಕಪ್ 2023ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂಡಿಯನ್ ಕ್ರಿಕೆಟ್ ಟೀಮ್ ರನ್ಗಳ ಮಹಾಪೂರವನ್ನೇ ಹರಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ನೇತೃತ್ವದ ತಂಡ 50 ಓವರ್ಗಳಲ್ಲಿ 397 ರನ್ ಗಳಿಸಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಸಿನಿಮಾ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ತಾರೆಯರ ಫೋಟೋ, ವಿಡಿಯೋಗಳು ಸಖತ್ ಸದ್ದು ಮಾಡುತ್ತಿವೆ.
ಮುಂಬೈನ ಪ್ರಸಿದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ವಿಶ್ವಕಪ್ನ ಮೊದಲ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಹೈವೋಲ್ಟೇಜ್ ಪಂದ್ಯ ಏರ್ಪಟ್ಟಿದೆ. ಪಂದ್ಯದಲ್ಲಿ ಬಾಲಿವುಡ್ ತಾರೆಯರಾದ ಅನುಷ್ಕಾ ಶರ್ಮಾ, ರಣ್ಬೀರ್ ಕಪೂರ್, ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ, ಜಾನ್ ಅಬ್ರಹಾಂ, ವಿಕ್ಕಿ ಕೌಶಲ್, ಶಾಹಿದ್ ಕಪೂರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ.
ಪಂದ್ಯ ಪ್ರಾರಂಭವಾಗುವ ಮೊದಲೇ ಅನಿಮಲ್ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ರಣ್ಬೀರ್ ಕಪೂರ್ ಭಾರತಕ್ಕೆ ತಮ್ಮ ಬೆಂಬಲ ಸೂಚಿಸಲು ಆಗಮಿಸಿದರು. ಬಾಲಿವುಡ್ ಲವ್ ಬರ್ಡ್ಸ್ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದಾರೆ. ಜಾನ್ ಅಬ್ರಹಾಂ ಜೊತೆಗೆ ಈ ಜೋಡಿ ಕಂಡು ಬಂದಿದ್ದು, ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ವರ್ಸಸ್ ನ್ಯೂಜಿಲೆಂಡ್ ಪಂದ್ಯವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ರಣ್ಬೀರ್ ಕಪೂರ್ ಇಂಡಿಯನ್ ಕ್ರಿಕೆಟ್ ಜೆರ್ಸಿ ಧರಿಸಿದ್ದು, ಎಲ್ಲರೂ ಒಂದೇ ಫ್ರೇಮ್ನಲ್ಲಿ ಕಂಡುಬಂದರು. ತಾರಾ ದಂಪತಿ ಕಿಯಾರಾ ಮತ್ತು ಸಿದ್ಧಾರ್ಥ್ ಮ್ಯಾಚಿಂಗ್ ವೈಟ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಜಾನ್ ಅಬ್ರಹಾಂ ಬ್ಲ್ಯಾಕ್ ಟೀ ಶರ್ಟ್ನಲ್ಲಿ ಸಖತ್ ಹ್ಯಾಡ್ಸಂ ಆಗಿ ಕಾಣಿಸಿಕೊಂಡರು.