ಪುಷ್ಪ ಸಿನಿಮಾ ಖ್ಯಾತಿಯ ನಟನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಸೂಪರ್ ಹಿಟ್ ಪುಷ್ಪ ಚಿತ್ರದಲ್ಲಿ ಸಹನಟನಾಗಿ ನಟಿಸಿದ್ದ ಕೇಶವ ಅಲಿಯಾಸ್ ಜಗದೀಶ್ ವಿರುದ್ಧ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐದು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಯುವತಿ ಸಾವಿಗೆ ಜಗದೀಶ್ ಕಾರಣ ಎಂದು ಮೃತಳ ತಂದೆ ಸಲ್ಲಿಸಿರುವ ದೂರಿನ ಆಧಾರದ ಮೇಲೆ ಪಂಜಗುಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ರಿಮಾಂಡ್ಗೆ ಕಳುಹಿಸಿದ್ದಾರೆ.
ನನ್ನ ಮಗಳು ಕಿರುಚಿತ್ರಗಳಲ್ಲಿ ತೊಡಗಿಕೊಂಡಿದ್ದಳು. ಆ ಸಂದರ್ಭ ಜಗದೀಶ್‌ನ ಭೇಟಿಯಾಗಿದ್ದೆ. ಆದ್ರೆ ಜಗದೀಶ್ ಮಗಳಿಗೆ ವಂಚನೆ ಮಾಡಿದ್ದಾನೆ ಎಂದು ಮೃತಳ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಗಂಭೀರ ಆರೋಪ ಹೊತ್ತಿರುವ ಜಗದೀಶ್ ಅವರನ್ನು ಪಂಜಗುಟ್ಟ ಪೊಲೀಸರು ಬುಧವಾರದಂದು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪಂಜಗುಟ್ಟ ಪ್ರದೇಶದಲ್ಲಿ ವಾಸವಿದ್ದ ಯುವತಿ (ಕಿರಿಯ ಕಲಾವಿದೆ) ಕಳೆದ ತಿಂಗಳು 29ರಂದು ಆತ್ಮಹತ್ಯೆಗೆ ಶರಣಾದ್ದರು. ಇದಕ್ಕೆ ಜಗದೀಶ್ ಕೊಟ್ಟ ಮಾನಸಿಕ ಕಿರುಕುಳವೇ ಕಾರಣ ಎಂಬ ಗಂಭೀರ ಆರೋಪವಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಯುವತಿಯ ಆತ್ಮಹತ್ಯೆಗೆ ಕಾರಣಗಳನ್ನು ಪತ್ತೆ ಹಚ್ಚಿದ್ದಾರೆ.
ಕಳೆದ ತಿಂಗಳು 27ರಂದು ಬೇರೆ ಪುರುಷನೊಂದಿಗೆ ಇದ್ದ ಯುವತಿಯ ಫೋಟೋಗಳನ್ನು ಜಗದೀಶ್ ಆಕೆಗೆ ತಿಳಿಯದಂತೆ ಕ್ಲಿಕ್ಕಿಸಿಕೊಂಡಿದ್ದ. ನಂತರ ಆಕೆಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಸದ್ಯದ ಆರೋಪ. ಈ ಪ್ರಕರಣದಲ್ಲಿ ಅಂದಿನಿಂದಲೂ ತಲೆಮರೆಸಿಕೊಂಡಿದ್ದ ಜಗದೀಶ್ನನ್ನು ಬುಧವಾರದಂದು ಬಂಧಿಸಿ ರಿಮಾಂಡ್ಗೆ ಕಳುಹಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯೊಂದಿಗೆ ಜಗದೀಶ್ ಗುರುತಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.