ಮುಂಬೈ:ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಿ ಅದನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿದ ನಟಿ ಛಾವಿ ಮಿತ್ತಲ್ ಇದೀಗ ಮತ್ತೊಂದು ಸಮಸ್ಯೆಗೆ ತುತ್ತಾಗಿದ್ದಾರೆ. ಇದೀಗ ಅವರು ಕೊಸ್ಟೊಕೊಂಡ್ರೈಟಿಸ್ ನಿಂದ ಬಳಲುತ್ತಿದ್ದಾರೆ.
ಇತ್ತೀಚಿಗಷ್ಟೇ ನಟಿ ಈ ಕುರಿತು ಇನ್ಸ್ಟಾಗ್ರಾಂ ಪೋಸ್ಟ್ ಹಂಚಿಕೊಂಡಿದ್ದು, ಕೊಸ್ಟೊಕೊಂಡ್ರೈಟಿಸ್ ಪತ್ತೆಯಾಗಿರುವ ಸಂಬಂಧ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕೊಸ್ಟೊಕೊಂಡ್ರೈಟಿಸ್ ಎಂಬುದು ಪಕ್ಕೆಲುಬುಗಳನ್ನು ಎದೆಯ ಮೂಳೆಗೆ ಸಂಪರ್ಕಿಸುವ ಕಾರ್ಟಿಲೆಜ್ ಉರಿಯೂತದಿಂದ ಬಳಲುವ ಸಮಸ್ಯೆಯಾಗಿದೆ.
ನಾನು ಇದೀಗ ಹೊಸ ಸಮಸ್ಯೆಗೆ ತುತ್ತಾಗಿದ್ದೇನೆ. ಇದನ್ನು ಕೊಸ್ಟೊಕೊಂಡ್ರೈಟಿಸ್ ಎಂದು ಕರೆಯುತ್ತಾರೆ. ಇದು ಫ್ಯಾನ್ಸಿಯಾಗಿದೆ ಅಲ್ವಾ? ಇದು ಕ್ಯಾನ್ಸರ್ ಚಿಕಿತ್ಸೆ ವೇಳೆ ಉಂಟಾಗುವ ರೇಡಿಯೇಷನ್ ನಿಂದ ಆಗಿರಬಹುದು ಅಥವಾ ಇಂಜೆಕ್ಷನ್ನ ಅಡ್ಡ ಪರಿಣಾಮದಿಂದ ಆಗಿರಬಹುದು. ನಾನು ಆಸ್ಟಿಯೋಪೆನಿಯಾಗೆ ತೆಗೆದುಕೊಂಡಿದ್ದೇನೆ ಅಥವಾ ಇದು ಹೆಚ್ಚಿನ ಕೆಮ್ಮು ಆಗಿರಬಹುದು. ಅಥವಾ ಒಂದು ಅಥವಾ ಹೆಚ್ಚಿನದರ ಸಂಯೋಜನೆ ಆಗಿರಬಹುದು ಎಂದು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಛಾವಿ ಉಸಿರಾಡುವಾಗ ತುಂಬಾ ನೋವು ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಕೈ ಎತ್ತಿದರೆ, ಮಲಗಿದಾಗ ಅಥವಾ ಕೂತಾಗ ಅಥವಾ ನಕ್ಕಾಗ ಅಥವಾ ಬಹುತೇಕ ಕೆಲಸಗಳನ್ನು ಮಾಡುವಾಗ ಅಗಾಧ ನೋವು ಕಾಡುತ್ತಿದೆ ಎಂದಿದ್ದಾರೆ.
ನಾನು ಸದಾ ಯಾವಾಗಲೂ ಸಕಾರಾತ್ಮಕವಾಗಿರುವುದಿಲ್ಲ. ಕೆಲವು ವೇಳೆ ನಕಾರಾತ್ಮಕ ಚಿಂತನೆಗಳು ಬರುತ್ತದೆ. ಹಾಗಾಗಿ ನಾನು ನನ್ನ ಎದೆಯ ಮೇಲೆ ಕೈ ಇರಿಸುತ್ತೇನೆ. ನಾನು ಜಿಮ್ಗೆ ಹೋಗುತ್ತೇನೆ. ಇದು ನನ್ನ ಖುಷಿ ತಾಣವಾಗಿದೆ. ಕಾರಣ ನಿಮಗೆ ಗೊತ್ತು. ನಾವು ಎಲ್ಲರೂ ಒಮ್ಮೆ ಕೆಳಗೆ ಬೀಳುತ್ತೇವೆ. ಆದರೆ, ನಾವು ಮತ್ತೇ ಏಳುವುದಿಲ್ಲವೇ? ನಾನು ಏಳುತ್ತೇವೆ. ನೀವು ಕೂಡ ಒಂದಲ್ಲಾ ಒಂದು ರೀತಿಯಲ್ಲಿ ಬಳಲುತ್ತಿದ್ದೀರಾ.. ಆದರೆ ನೀವು ಒಬ್ಬಂಟಿ ಅಲ್ಲ, ಇದು ಕಾಲ ಕಳೆದಂತೆ ಮಾಯಾವಾಗುತ್ತದೆ ಎಂದು ನೋವಿನಲ್ಲಿದ್ದರೂ ಉತ್ಸಾಹ ಭರಿತ ಮಾತುಗಳನ್ನು ಆಡಿದ್ದಾರೆ.
ಛಾವಿ ಅವರ ಈ ಪೋಸ್ಟ್ ನೋಡಿ ಅವರ ಅಭಿಮಾನಿಗಳು ಅವರಿಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಕಿರುತೆರೆಯ ಉದ್ಯಮದ ಮಂದಿ ಕೂಡ ನಿಮ್ಮ ಜೊತೆಗೆ ನಾವಿದ್ದೇವೆ ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಒಬ್ಬರು, ನಿಮಗೆ ಹೆಚ್ಚಿನ ಶಕ್ತಿ ಸಿಗಲಿ.. ನೀವು ಅನೇಕ ಕ್ಯಾನ್ಸರ್ ಸಂತ್ರಸ್ತರಿಗೆ ಸ್ಪೂರ್ತಿಯನ್ನು ನೀಡಿದ್ದೀರಿ.. ಇದೇ ರೀತಿ ನೋವು ಸದಾ ನಗುವಿನೊಂದಿಗೆ ಜಗತ್ತನ್ನು ಆಳಿ ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ ನಿಮಗೆ ಹೆಚ್ಚಿನ ಬಲ ಮತ್ತು ಪ್ರೀತಿ ಸಿಗಲಿ ಎಂದು ಹಾರೈಸಿದ್ದಾರೆ.
ಹಿಂದಿ ಕಿರುತೆರೆ ನಟಿಯಾಗಿರುವ ಛಾವಿಗೆ ಕಳೆದ ವರ್ಷ ಏಪ್ರಿಲ್ 2022ರಲ್ಲಿ ಸ್ತನ ಕ್ಯಾನ್ಸರ್ನ ಆರಂಭಿಕ ಹಂತ ಪತ್ತೆ ಆಗಿತ್ತು. ಅವರು ಅನೇಕ ಸರ್ಜರಿ ಮತ್ತು ಚಿಕಿತ್ಸೆಗೆ ಒಳಗಾಗಿ ತಾವು ಕ್ಯಾನ್ಸರ್ನಿಂದ ಮುಕ್ತವಾಗಿರುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ: ರಿಲೇ ಸ್ಪರ್ಧೆಯಲ್ಲಿ ಬಾಲಕನಿಗೆ ದ್ವಿತೀಯ ಸ್ಥಾನ.. ಬಹುಮಾನ ಪಡೆಯುವ ಮುನ್ನವೇ ಹೃದಯಾಘಾತದಿಂದ ಸಾವು