ಕರ್ನಾಟಕ

karnataka

ETV Bharat / entertainment

ಗಡಿ ಭಾಗದ ಕಥೆ ಹೇಳಲಿದೆ 'ಕ್ಯಾಂಪಸ್ ಕ್ರಾಂತಿ'

'ಕ್ಯಾಂಪಸ್ ಕ್ರಾಂತಿ' ಸಿನಿಮಾ ಫೆಬ್ರವರಿ 24ರಂದು ಬಿಡುಗಡೆ ಆಗಲಿದೆ.

Campus kranti
ಕ್ಯಾಂಪಸ್ ಕ್ರಾಂತಿ

By

Published : Feb 14, 2023, 7:36 PM IST

Updated : Feb 14, 2023, 7:56 PM IST

ಮೈಸೂರು: ವಿಭಿನ್ನ ಕಥೆ ಹೊಂದಿರುವ 'ಕ್ಯಾಂಪಸ್ ಕ್ರಾಂತಿ' ಸಿನಿಮಾ ರಾಜ್ಯಾದ್ಯಂತ ಇದೇ ಫೆಬ್ರವರಿ 24ರಂದು ತೆರೆಗೆ ಕಾಣಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಇಂದು ಮೈಸೂರಿನ ಪತ್ರಿಕಾ ಭವನದಲ್ಲಿ ಚಿತ್ರದ ನಿರ್ದೆಶಕ ಸಂತೋಷ್ ಕುಮಾರ್ ಮಾತನಾಡಿ, ಸಿನಿಮಾ ಬಗ್ಗೆ ಕೆಲ ಮಾಹಿತಿಯನ್ನು ಶೇರ್​ ಮಾಡಿಕೊಂಡರು.

ಈ ಹಿಂದೆ ಸ್ಟೂಡೆಂಟ್ಸ್, ಬಿಂದಾಸ್‌, ಗೂಗ್ಲಿ ಚಿತ್ರಗಳನ್ನು ನಿರ್ದೇಶಿಸಿದ್ದ ಸಂತೋಷ್‌ ಕುಮಾರ್ ಸಾರಥ್ಯದ ಮತ್ತೊಂದು ಚಿತ್ರ ಕ್ಯಾಂಪಸ್​ ಕ್ರಾಂತಿ. ಇದೇ ತಿಂಗಳ 24ರಂದು ತೆರೆಕಾಣುತ್ತಿರುವ ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಸಿನಿ ಪ್ರಿಯರನ್ನು ಸೆಳೆದಿವೆ. ಕಾಲೇಜ್ ಕ್ಯಾಂಪಸ್​​ ವಿದ್ಯಾರ್ಥಿಗಳ ಸುತ್ತ ನಡೆಯುವ ಕಥೆಯಾಗಿದ್ದು, ಯುವನಟ ಆರ್ಯ ಹಾಗೂ ಆರತಿ ಮತ್ತು ಅಲಂಕಾರ್ ಹಾಗೂ ಇಶಾನಾ ನಾಯಕ, ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ನಾಯಕರ ತಂದೆಯಾಗಿ ಕೀರ್ತಿರಾಜ್ ಹಾಗೂ ತಾಯಿಯಾಗಿ ನಟಿ ವಾಣಿಶ್ರೀ ಅಭಿನಯಿಸಿದ್ದಾರೆ.

ನಿರ್ದೇಶಕ ಸಂತೋಷ್‌ಕುಮಾರ್ ಮಾತನಾಡಿ, ಕಾಲೇಜ್ ಹುಡುಗರೆಲ್ಲ ಸೇರಿ ಮಾಡುವ ಹೊಸ ಕ್ರಾಂತಿ ಇದಾಗಿದ್ದು, ಕರ್ನಾಟಕ, ಮಹಾರಾಷ್ಟ್ರ ಗಡಿಯ ಅಗ್ನಿರಾಂಪುರ ಎಂಬ ಕಾಲ್ಪನಿಕ ಊರೊಂದರಲ್ಲಿ ಈ ಚಿತ್ರದ ಕಥೆ ನಡೆಯುತ್ತದೆ. ಗಡಿ ಭಾಗದಲ್ಲಿ ಲೋಕಲ್ ರೌಡಿಸಂ ಕ್ರೈಂ ಹೇಗಿರುತ್ತದೆ, ಅದು ಅಲ್ಲಿನ ಹುಡುಗರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ, ಇದನ್ನೆಲ್ಲ ಆ ಹುಡುಗರು ಹೇಗೆ ತಡೆಯುತ್ತಾರೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ.

ಕನ್ನಡಾಭಿಮಾನ ಸಾರುವ ಚಿತ್ರ:ಅಲ್ಲದೇ ಸುಮಾರು 21 ವರ್ಷಗಳಿಂದಲೂ ಒಂದು ಊರಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ನಿಂತು ಹೋಗಿರುತ್ತದೆ. ಈ ಹುಡುಗರೆಲ್ಲ ಸೇರಿ ಅಲ್ಲಿ ಮತ್ತೆ ಕನ್ನಡ ರಾಜ್ಯೋತ್ಸವ ಆಚರಿಸುತ್ತಾರೆ. ಕನ್ನಡ ಬಾವುಟ ಹಾರಿಸುತ್ತಾರೆ. ಮನೋರಂಜನೆ ಜೊತೆಗೆ ಕನ್ನಡ ಭಾಷೆ, ಸಂಸ್ಕೃತಿ, ಕನ್ನಡತನವನ್ನು ಬೆಳೆಸಬೇಕು. ವಿದ್ಯಾರ್ಥಿಗಳು ಜವಾಬ್ದಾರಿ ತೆಗೆದುಕೊಂಡರೆ ಏನು ಬೇಕಾದರೂ ಮಾಡಬಹುದು. ಅಲ್ಲದೇ ಗಡಿಸಮಸ್ಯೆ ವಿದ್ಯಾರ್ಥಿಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲೊರಟಿದ್ದೇವೆ. ಜೊತೆಗೆ ಲವ್ ಟ್ರ್ಯಾಕ್ ಕೂಡ ಸಾಗುತ್ತದೆ‌. ಚಿತ್ರದಲ್ಲಿ ಕಾಮಿಡಿ, ಥ್ರಿಲ್ಲರ್, ಆ್ಯಕ್ಷನ್ ಎಲ್ಲವನ್ನೂ ಕಲರ್ ಫುಲ್ ಆಗಿ ತೋರಿಸಿದ್ದೇವೆ ಎಂದು ತಿಳಿಸಿದರು.

'ಕ್ಯಾಂಪಸ್ ಕ್ರಾಂತಿ' ಕಲಾವಿದರು: ನಟ ಆರ್ಯ‌ ಮಾತನಾಡಿ, ನಾನು ಮೈಸೂರಿನವನು, ಪಿಹೆಚ್​ಡಿ ಮಾಡುತ್ತಲೇ ಬರವಣಿಗೆ ಆರಂಭಿಸಿದ್ದೆ. ಸ್ಕ್ರಿಪ್ಟ್ ಹಂತದಿಂದಲೂ ನಾನು ಈ ಚಿತ್ರತಂಡದ ಜೊತೆಗಿದ್ದೇನೆ ಎಂದು ಹೇಳಿದರು. ನಟಿ ಆರತಿ ಅವರು ಕನಸು ಎಂಬ ಕಾಲೇಜು ಸ್ಟೂಡೆಂಟ್ ಆಗಿ ನಟಿಸಿದ್ದಾರೆ. ಇಶಾನಾ ಪಾತ್ರದ ಹೆಸರು ಲಕ್ಷ್ಮಿ. ನಾಯಕ ಅಲಂಕಾರ್ ಒಬ್ಬ ಶ್ರೀಮಂತ ಮನೆತನದ ಯುವಕ ಆದಿಯಾಗಿ ನಟಿಸಿದ್ದಾರೆ. ನಂದಗೋಪಾಲ್ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ ಸಮಂತಾ ಭೇಟಿ: 600 ಮೆಟ್ಟಿಲುಗಳಿಗೂ ಕರ್ಪೂರ ಹಚ್ಚಿ ಹೆಜ್ಜೆ ಹಾಕಿದ ನಟಿ

ವಿ ಮನೋಹರ್ ಅವರು ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ಮಾಡಿದ್ದಾರೆ. ಪಿಕೆಹೆಚ್ ದಾಸ್ ಅವರ ಕ್ಯಾಮರಾವರ್ಕ್ ಈ ಚಿತ್ರಕ್ಕಿದೆ. ಇನ್ನೂ ಚಿತ್ರದಲ್ಲಿ 5 ಸಾಹಸ ದೃಶ್ಯಗಳಿದ್ದು, ಕುಂಗ್ ಫು ಚಂದ್ರು ಸಾಹಸ ಸಂಯೋಜನೆ ಮಾಡಿದ್ದಾರೆ. ಫ್ಯಾಷನ್ ಮೂವೀಮೇರ್ಸ್ ಮೂಲಕ ನಿರ್ದೇಶಕ ಸಂತೋಷ್‌ ಕುಮಾರ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹನುಮಂತೇಗೌಡ್ರು, ಭವಾನಿ ಪ್ರಕಾಶ್, ಧನಂಜಯ್ ಇತರ ಪಾತ್ರಗಳಲ್ಲಿದ್ದಾರೆ.

Last Updated : Feb 14, 2023, 7:56 PM IST

ABOUT THE AUTHOR

...view details