ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರು ಸೆಪ್ಟೆಂಬರ್ 9 ರಂದು 47ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಜನ್ಮದಿನದಂದು ರಾಜ್ ಸಾಮಾಜಿಕ ಮಾಧ್ಯಮದಲ್ಲಿ, ತಮ್ಮ ದ್ವೇಷಿಗಳಿಗೆ ಒನ್ ಲೈನ್ ಕ್ಯಾಪ್ಷನ್ ಇರುವ ಪೋಸ್ಟ್ ಮೂಲಕ ತಿರುಗೇಟು ನೀಡಿದ್ದಾರೆ.
ಶುಕ್ರವಾರ ರಾಜ್ ಕುಂದ್ರಾ ಟ್ವೀಟ್ ಮಾಡಿದ್ದಾರೆ. ಡೆನಿಮ್, ಕಪ್ಪು ಜಾಕೆಟ್, ಸಂಪೂರ್ಣ ಮುಖ ಮುಚ್ಚುವ ಮಾಸ್ಕ್ ಧರಿಸಿರುವ ಫೋಟೋದೊಂದಿಗೆ, ತಮ್ಮ ದ್ವೇಷಿಗಳಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ. "ನನಗೆ ಹೊಸ ದ್ವೇಷಿಗಳು ಬೇಕು, ಏಕೆಂದರೆ ಹಳೆಯವರು ನನ್ನನ್ನು ಇಷ್ಟಪಡಲು ಪ್ರಾರಂಭಿಸಿದ್ದಾರೆ" ಎಂದು ಟ್ವೀಟ್ ಮಾಡುವ ಮೂಲಕ ಮತ್ತಷ್ಟು ದ್ವೇಷಿಗಳನ್ನು ಆಹ್ವಾನಿಸಿದ್ದಾರೆ.
ಇದಕ್ಕೆ ಟ್ವಿಟರ್ ಬಳಕೆದಾರರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ರಾಜ್ ದ್ವೇಷಿಗಳನ್ನು ತೊಡೆದುಹಾಕಲು ಬಯಸಿದರೆ "ಗ್ರಹವನ್ನು ಬದಲಿಸಿ" ಎಂದು ಸಲಹೆ ನೀಡುತ್ತಿದ್ದಾರೆ. ಕೆಲವರು ಬಿಗ್ ಬಾಸ್ 16 ಮನೆಗೆ ಪ್ರವೇಶಿಸದಂತೆ ಎಚ್ಚರಿಕೆ ನೀಡುತ್ತಿದ್ದಾರೆ.