ಕನ್ನಡತಿ ಕಿರುತೆರೆ ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿರುವ ಯುವ ನಟ ಕಿರಣ್ ರಾಜ್. "ಮಾರ್ಚ್ 22" ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ ಕಿರಣ್ ರಾಜ್ ಈಗ ಹಲವು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಬಡ್ಡೀಸ್ ಸಿನಿಮಾದ ಯಶಸ್ಸಿನ ಖುಷಿಯಲ್ಲಿರೋ ಕಿರಣ್ ರಾಜ್ ಗೆ, ಜುಲೈ 5 ರಂದು ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಕಿರಣ್ ರಾಜ್ ತಮ್ಮ ಹುಟ್ಟುಹಬ್ಬವನ್ನು ಬಹಳ ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದ್ದಾರೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಉಡುಗೊರೆ ನೀಡುವುದು ವಾಡಿಕೆ. ಆದರೆ, ಕಿರಣ್ ರಾಜ್ ತಮ್ಮ ಹುಟ್ಟುಹಬ್ಬದ ದಿನ, ತಮ್ಮ ಅಭಿಮಾನಿಗಳಿಗೆ ಉಡುಗೊರೆ ನೀಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ತಮ್ಮ ಅಭಿಮಾನಿಗಳಿಗೆ ಉಡುಗೊರೆ ನೀಡಿ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಕಿರಣ್ರಾಜ್ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ನೂರು ದಿನಗಳಿಂದ ಸಾಕಷ್ಟು ಜನ ಅಭಿಮಾನಿಗಳು ಸಿ.ಡಿಪಿ(ಕಾಮನ್ ಡಿಪಿ) ಹಾಕಿಕೊಳ್ಳುವ ಮೂಲಕ ನನಗೆ ವಿಶೇಷವಾಗಿ ಶುಭ ಕೋರುತ್ತಾ ಬಂದಿದ್ದಾರೆ. ಅಂತಹ ಅಭಿಮಾನಿಗಳನ್ನು ಗುರುತಿಸಿ ನಾನೇ ಅವರಿಗೆ ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಉಡುಗೊರೆ ನೀಡಲಿದ್ದೇನೆ ಎಂದು ಕಿರಣ್ ರಾಜ್ ಹೇಳಿದ್ದಾರೆ.
ಇದರ ಜೊತೆಗೆ ಕರ್ನಾಟಕದ ವಿವಿಧ ಊರುಗಳಲ್ಲಿರುವ ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಅನ್ನದಾನ, ಬ್ಲಾಂಕೆಟ್ ವಿತರಣೆ ಮುಂತಾದ ಉತ್ತಮ ಕಾರ್ಯಗಳನ್ನು ಕಿರಣ್ ರಾಜ್ ಹಮ್ಮಿಕೊಂಡಿದ್ದಾರೆ. ಈ ರೀತಿಯಲ್ಲಿ ಸಮಾಜಮುಖಿ ಕೆಲಸಗಳ ಮೂಲಕ ಅರ್ಥಪೂರ್ಣ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಕಿರಣ್ ರಾಜ್ ನಿರ್ಧರಿಸಿದ್ದಾರೆ.
ಓದಿ :ಸಾಂಸ್ಕೃತಿಕ ನಗರಿಯಲ್ಲಿ ಹೊಯ್ಸಳ ಚಿತ್ರೀಕರಣ.. ಆ್ಯಕ್ಷನ್ ಮೂಡ್ನಲ್ಲಿ ಡಾಲಿ