ವಿಭಿನ್ನ ಚಿತ್ರಗಳನ್ನು ನಿರ್ದೇಶನ ಮಾಡಿ ನಟಿಸುತ್ತಾ ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಎಂದೇ ಫೇಮಸ್ ಆಗಿರುವ ನಟ ಉಪೇಂದ್ರ. ಸ್ಯಾಂಡಲ್ವುಡ್ಗೆ ಈಗಾಗಲೇ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. 'ಕಬ್ಜ' ಸೂಪರ್ ಹಿಟ್ ಆದ ಬಳಿಕ ಉಪೇಂದ್ರ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿತ್ತು. ಅದಕ್ಕೆ ಉತ್ತರವಾಗಿ 'ಬುದ್ಧಿವಂತ' ಮತ್ತೆ ಬಂದಿದ್ದಾರೆ.
ಹೌದು. ಕನ್ನಡದಲ್ಲಿ ಅನೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಆ ಸಾಲಿನಲ್ಲಿ ಉಪೇಂದ್ರ ನಟನೆಯ 'ಬುದ್ಧಿವಂತ' ಕೂಡ ಒಂದು. ಇದೀಗ ಈ ಸಿನಿಮಾದ ಸೀಕ್ವೆಲ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. 2008 ರಲ್ಲಿ ಬಿಡುಗಡೆಯಾದ 'ಬುದ್ಧಿವಂತ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ 'ಬುದ್ಧಿವಂತ 2' ಚಿತ್ರ ತಯಾರಾಗುತ್ತಿದೆ. ಉಪೇಂದ್ರ ಅವರ ಹುಟ್ಟುಹಬ್ಬದಂದೇ ಸಿನಿಮಾದ ಟೀಸರ್ ಹಾಗೂ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಚಿತ್ರತಂಡ ಅನೌನ್ಸ್ ಮಾಡಲಿದೆ.
'ಬುದ್ಧಿವಂತ'ನಂತೆ ಸೀಕ್ವೆಲ್ ಹಿಟ್ ಆಗುತ್ತಾ? 'ನಾನವನಲ್ಲ ನಾನವನಲ್ಲ' ಎಂಬ ಡೈಲಾಗ್ ಕೇಳಿದೊಡನೆ ನೆನಪಾಗುವುದು ಉಪೇಂದ್ರ. 'ಬುದ್ಧಿವಂತ' ಚಿತ್ರದ ಈ ಡೈಲಾಗ್ ಇಂದಿಗೂ ಭಾರೀ ಫೇಮಸ್. ರಮಾನಾಥ್ ಋಗ್ವೇದಿ ನಿರ್ದೇಶನದ ಈ ಸಿನಿಮಾ 2008 ರಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿತ್ತು. ಇದೀಗ 'ಬುದ್ಧಿವಂತ 2' ಸಿನಿಮಾ ಬರುತ್ತಿದೆ. ಸುಮಾರು 15 ವರ್ಷಗಳ ನಂತರ ಈ ಚಿತ್ರದ ಸೀಕ್ವೆಲ್ ತೆರೆ ಕಾಣಲಿದೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.
ಇದನ್ನೂ ಓದಿ:ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇಗೆ ಸ್ಪೆಷಲ್ ಗಿಫ್ಟ್: ಕೃಷ್ಣಂ ಪ್ರಣಯ ಸಖಿ ಫಸ್ಟ್ ಲುಕ್ ಅನಾವರಣ