ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಚಿತ್ರದ ಕಥೆ, ಮೇಕಿಂಗ್, ತಾರಾಗಣ ಎಲ್ಲರ ಗಮನ ಸೆಳೆಯುತ್ತಿದೆ. ಕೆಜಿಎಫ್, ಕಾಂತಾರ ಯಶಸ್ಸಿನ ಬಳಿಕ ಸ್ಯಾಂಡಲ್ವುಡ್ ವರ್ಚಸ್ಸು ಉತ್ತುಂಗಕ್ಕೇರಿದೆ. ಈ ಹಿನ್ನೆಲೆ ಇಡೀ ಭಾರತೀಯ ಚಿತ್ರರಂಗದ ಕಣ್ಣು ಕನ್ನಡ ಚಿತ್ರರಂದ ಮೇಲಿದೆ. ಈ ಮಧ್ಯೆ ಸ್ಯಾಂಡಲ್ವುಡ್ಗೆ ಪ್ರತಿಭಾನ್ವಿತ ನಿರ್ದೇಶಕರಿಂದ ಹಿಡಿದು ಯುವ ನಟ, ನಟಿಯರ ಎಂಟ್ರಿ ಆಗುತ್ತಿದೆ. ಯಶಸ್ಸು ಕಾಣಬೇಕು ಎಂಬ ಗುರಿಯನ್ನಿಟ್ಟುಕೊಂಡು ಚಿತ್ರರಂಗಕ್ಕೆ ಅನೇಕರು ಎಂಟ್ರಿ ಕೊಡುತ್ತಾರೆ. ಕೆಲವರಿಗೆ ಈ ರಂಗ ಕೈ ಹಿಡಿಯುತ್ತದೆ.
ಬುದ್ಧ ಚಿತ್ರದ ಫಸ್ಟ್ ಲುಕ್: ಇದೀಗ ಬುದ್ಧ ಅನ್ನೋ ಶೀರ್ಷಿಕೆಯೊಂದಿಗೆ ಹೊಸ ಚಿತ್ರ ತಂಡವೊಂದು ಚಂದನವನಕ್ಕೆ ಎಂಟ್ರಿ ಕೊಟ್ಟಿದೆ. ಮಹೇಶ್ ಬಾಬು ಎಂಬ ಯುವ ನಟ ಈ ಚಿತ್ರದ ಮೂಲಕ ಗಾಂಧಿನಗರಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ರಾಮ್ ಪೆರಿಯಸಾಮಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬುದ್ಧ ಚಿತ್ರದ ಫಸ್ಟ್ ಲುಕ್ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆ ಆಗಿದೆ. ಚಿತ್ರದ ಫಸ್ಟ್ ಲುಕ್ ಸಿನಿಪ್ರಿಯರ ಮೆಚ್ಚುಗೆ ಗಳಿಸಿದೆ.
ಮೊದಲ ಹಂತದ ಚಿತ್ರೀಕರಣ ಮುಕ್ತಾಯ:ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಅಭಿನಯದ ಬಗ್ಗೆ ತರಬೇತಿ ಪಡೆದಿರುವ ಮಹೇಶ್ ಬಾಬು ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಮಹೇಶ್ ಜೋಡಿಯಾಗಿ ವಿದ್ಯಾರಾಜ್ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಕಾಶಿಯಲ್ಲಿ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾಡುವ ಯೋಜನೆ ಈ ಚಿತ್ರತಂಡಕ್ಕಿದೆ.
ಇದನ್ನೂ ಓದಿ:ಬಹುನಿರೀಕ್ಷಿತ ಜೂಲಿಯೆಟ್ 2 ಟ್ರೇಲರ್ ರಿಲೀಸ್: ಆ್ಯಕ್ಷನ್ ಅವತಾರದಲ್ಲಿ ಬೃಂದಾ ಆಚಾರ್ಯ