ಹೈದರಾಬಾದ್: ದಕ್ಷಿಣದ ಸಿನಿ ತಾರೆಯರ ಅಬ್ಬರಕ್ಕೆ ಕಳೆದ ಕೆಲ ತಿಂಗಳಿಂದ ಮಕಾಡೆ ಮಲಗಿದ್ದ ಬಾಲಿವುಡ್ಗೆ 'ಬ್ರಹ್ಮಾಸ್ತ್ರ' ಬೂಸ್ಟರ್ ನೀಡಿದೆ. ಚಿತ್ರದ ಬಗ್ಗೆ ಟೀಕೆ ಕೇಳಿ ಬಂದಿರುವ ಹೊರತಾಗಿಯೂ ಕೂಡ ಮೊದಲ ದಿನ ಉತ್ತಮ ಗಳಿಕೆ ಮಾಡಿದ್ದು, ಆರ್ಆರ್ಆರ್ ದಾಖಲೆ ಹಿಂದಿಕ್ಕಿದೆ.
ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಮೊದಲ ದಿನ ಗಲ್ಲಾಪಟ್ಟೆಗೆಯಲ್ಲಿ ಸದ್ದು ಮಾಡಿದ್ದು, ಉತ್ತಮ ಕಲೆಕ್ಷನ್ ಮಾಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಚಿತ್ರ ಮೊದಲ ದಿನವೇ 35-36 ಕೋಟಿಗೂ ಅಧಿಕ ಹಣ ಗಳಿಕೆ ಮಾಡಿದೆ ಎಂದು ಸಿನಿಮಾ ತಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಆರ್ಆರ್ಆರ್ ದಾಖಲೆ ಬ್ರೇಕ್ ಮಾಡಿದೆ. ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ಆರ್ಆರ್ಆರ್ ಮೊದಲ ದಿನ 20 ಕೋಟಿ ಗಳಿಕೆ ಮಾಡಿತ್ತು. ಇದಲ್ಲದೇ ಸಂಜು ಚಿತ್ರದ 34.75 ಕೋಟಿ ಗಳಿಕೆಯ ದಾಖಲೆ ಸಹ ಇದೀಗ ಬ್ರಹ್ಮಾಸ್ತ್ರದ ಮುಂದೆ ಬ್ರೇಕ್ ಆಗಿದೆ.
ಮೊದಲ ದಿನವೇ RRR ದಾಖಲೆ ಬ್ರೇಕ್ ಮಾಡಿದ 'ಬ್ರಹ್ಮಾಸ್ತ್ರ' ವಿಶ್ವದಾದ್ಯಂತ 8,913 ಸ್ಕ್ರೀನ್ಗಳಲ್ಲಿ ಬ್ರಹ್ಮಾಸ್ತ್ರ ರಿಲೀಸ್ ಆಗಿತ್ತು. ಇದರಲ್ಲಿ ಭಾರತದಲ್ಲಿ 5,019 ಹಾಗೂ ವಿದೇಶಗಳಲ್ಲಿ 3,894+ ಸ್ಕ್ರೀನ್ಗಳು ಸೇರಿಕೊಂಡಿದ್ದವು. ಈ ಮೂಲಕ 36+ ಕೋಟಿ ರೂ. ಗಳಿಕೆ ಮಾಡಿದೆ. ಬ್ರಹ್ಮಾಸ್ತ್ರ’ ನಿರಾಶಾದಾಯಕ. ಉತ್ತಮ ಸಂಭಾಷಣೆ ಬರೆದಿಲ್ಲ. ಸ್ಕ್ರೀನ್ ಪ್ಲೇ ಚೆನ್ನಾಗಿಲ್ಲ ಎಂಬೆಲ್ಲ ಮಾತುಗಳು ಕೇಳಿ ಬಂದಿದ್ದವು. ಆದರೆ, ಇದೀಗ ಉತ್ತಮ ಗಳಿಕೆ ಮಾಡಿದೆ.
ಇದನ್ನೂ ಓದಿ:RRR, ಭೂಲ್ ಭುಲೈಯಾ 2 ಮೀರಿಸಿದ 'ಬ್ರಹ್ಮಾಸ್ತ್ರ': ಬಾಲಿವುಡ್ಗೆ ಸಿಗುವುದೇ ಬೂಸ್ಟರ್ ಡೋಸ್?
ಕಳೆದ ನಾಲ್ಕು ವರ್ಷಗಳಿಂದ ಬ್ರಹ್ಮಾಸ್ತ್ರ ಚಿತ್ರದ ಚಿತ್ರೀಕರಣ ನಡೆದಿದ್ದು, ಇದಕ್ಕೋಸ್ಕರ ಬರೋಬ್ಬರಿ 410 ಕೋಟಿ ರೂ. ಖರ್ಚು ಮಾಡಲಾಗಿದೆ. ಬಾಲಿವುಡ್ನಲ್ಲಿ ನಿರ್ಮಾಣಗೊಂಡಿರುವ ಅತ್ಯಂತ ದುಬಾರಿ ವೆಚ್ಚದ ಚಿತ್ರ ಇದಾಗಿದೆ. ಹಿಂದಿ ಮಾತ್ರವಲ್ಲದೆ ಕನ್ನಡ, ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ದಕ್ಷಿಣ ಭಾರತದಲ್ಲಿ ಸಿನಿಮಾ ಹಂಚಿಕೆ ಜವಾಬ್ದಾರಿಯನ್ನು ರಾಜಮೌಳಿ ಹೊತ್ತುಕೊಂಡಿದ್ದರು. ಈ ಕಾರಣದಿಂದಲೂ ಸಿನಿಮಾಗೆ ಹೆಚ್ಚಿನ ಮೈಲೇಜ್ ಸಿಕ್ಕಿದೆ ಎಂಬ ಮಾತು ಜೋರಾಗಿ ಕೇಳಿಬರುತ್ತಿವೆ.
ಮುಂಗಡ ಬುಕ್ಕಿಂಗ್ನಲ್ಲೂ ದಾಖಲೆ:ಬ್ರಹ್ಮಾಸ್ತ್ರ ಚಿತ್ರ ಮುಂಗಡ ಬುಕ್ಕಿಂಗ್ನಲ್ಲೂ ದಾಖಲೆ ಬರೆದಿದೆ. ಸೆಪ್ಟೆಂಬರ್ 6ರ ರಾತ್ರಿ 11:30ರವರೆಗಿನ ಮಾಹಿತಿ ಪ್ರಕಾರ ಒಟ್ಟು 1,31,000 ಟಿಕೆಟ್ಗಳು ಬಿಕರಿಯಾಗಿವೆ. ಈ ಮೂಲಕ ಕೋವಿಡ್ ಮಹಾಮಾರಿ ಬಳಿಕ ಹೆಚ್ಚು ಮುಂಗಡ ಬುಕ್ಕಿಂಗ್ ಆಗಿರುವ ಚಿತ್ರ ಎಂಬ ವಿಶೇಷತೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ, ಆರ್ಆರ್ಆರ್ ಹಾಗೂ ಭೂಲ್ಭುಲೈಯಾ ಟಿಕೆಟ್ ಬುಕ್ಕಿಂಗ್ ದಾಖಲೆಯನ್ನು ಇದು ಪುಡಿಗಟ್ಟಿದೆ. ಚಿತ್ರದಲ್ಲಿ ರಣಬೀರ್ ಜೊತೆ ನಟಿ ಆಲಿಯಾ ಭಟ್, ಅಮಿತಾಬ್ ಬಚ್ಚನ್, ನಾಗಾರ್ಜುನ್ ಮತ್ತು ಮೌನಿ ರಾಯ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.