'2023' ಸಿನಿ ಪ್ರೇಮಿಗಳಿಗೆ ಮನರಂಜನೆಯ ವರ್ಷವೆಂದೇ ಹೇಳಬಹುದು. ಜನವರಿಯಿಂದ ಈವರೆಗೂ ಅನೇಕ ಸಿನಿಮಾಗಳು ತೆರೆ ಕಂಡಿದ್ದು, ಮುಂದಿನ ದಿನಗಳಲ್ಲಿ ಇದಕ್ಕೂ ಹೆಚ್ಚಿನ ಬಹುನಿರೀಕ್ಷಿತ ಚಿತ್ರಗಳೇ ತೆರೆ ಕಾಣಲು ಸಜ್ಜಾಗಿದೆ. 2024ರ ಆರಂಭದಲ್ಲೂ ಸಿನಿಮಾಗಳ ಮನರಂಜನೆ ಹೀಗೆಯೇ ಮುಂದುವರೆಯಲಿದೆ. ಈ ಮೂಲಕ ಇನ್ನು ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ಭಾರಿ ಪೈಪೋಟಿಯೇ ನಡೆಯಲಿದೆ. ಆ ಸಿನಿಮಾಗಳ ಡೀಟೈಲ್ಸ್ ಹೀಗಿದೆ..
ಯೋಧ Vs ಮೇರಿ ಕ್ರಿಸ್ಮಸ್: ಕತ್ರಿನಾ ಕೈಫ್ ಮತ್ತು ವಿಜಯ್ ಸೇತುಪತಿ ನಟನೆಯ 'ಮೇರಿ ಕ್ರಿಸ್ಮಸ್' ಸಿನಿಮಾ ಡಿಸೆಂಬರ್ 8 ರಂದು ತೆರೆ ಕಾಣಲಿದೆ. ಅದೇ ದಿನದಂದು ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ದಿಶಾ ಪಟಾನಿ ಮುಖ್ಯಭೂಮಿಕೆಯ 'ಯೋಧ' ಸಿನಿಮಾ ಕೂಡ ಬಿಡುಗಡೆಯಾಗಲಿದೆ.
ಡಂಕಿ Vs ಸಲಾರ್:ಭಾರತೀಯ ಚಿತ್ರರಂಗದ ಈ ವರ್ಷದ ಎರಡು ಬಹುನಿರೀಕ್ಷಿತ ಸಿನಿಮಾಗಳೆಂದರೆ 'ಸಲಾರ್' ಮತ್ತು 'ಡಂಕಿ'. ಪ್ರಶಾಂತ್ ನೀಲ್ ನಿರ್ದೇಶಿಸಿ, ಪ್ರಭಾಸ್ ನಟಿಸಿರುವ 'ಸಲಾರ್' ಮತ್ತು ರಾಜ್ಕುಮಾರ್ ಹಿರಾನಿ ನಿರ್ದೇಶನದ, ಶಾರುಖ್ ಖಾನ್ ನಟನೆಯ 'ಡಂಕಿ' ಡಿಸೆಂಬರ್ 22ರಂದು ಒಮ್ಮೆಲೇ ತೆರೆಗಪ್ಪಳಿಸಲಿದೆ. ಈ ಎರಡು ಸಿನಿಮಾಗಳ ಮಧ್ಯೆ ಭಾರಿ ಪೈಪೋಟಿ ಏರ್ಪಡುವುದಂತೂ ಪಕ್ಕಾ.
ಮಿಷನ್ ರಾಣಿಗಂಜ್: ದಿ ಗ್ರೇಟ್ ಭಾರತ್ ರೆಸ್ಕ್ಯೂ Vs ಥ್ಯಾಂಕ್ಯೂ ಫರ್ ಕಮಿಂಗ್:ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಹಾಗೂ ಪರಿಣಿತಿ ಚೋಪ್ರಾ ನಟನೆಯ 'ಮಿಷನ್ ರಾಣಿಗಂಜ್: ದಿ ಗ್ರೇಟ್ ಭಾರತ್ ರೆಸ್ಕ್ಯೂ' ಸಿನಿಮಾ ಅಕ್ಟೋಬರ್ 6 ರಂದು ಬಿಡುಗಡೆಯಾಗಲಿದೆ. ಇದೇ ದಿನದಂದು ಭೂಮಿ ಪಡ್ನೇಕರ್ ಮುಖ್ಯಭೂಮಿಕೆಯ 'ಥ್ಯಾಂಕ್ಯೂ ಫಾರ್ ಕಮಿಂಗ್' ಕೂಡ ತೆರೆ ಕಾಣಲಿದೆ.
ಅನಿಮಲ್ Vs ಸ್ಯಾಮ್ ಬಹದ್ದೂರ್:ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿ, ರಣ್ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ 'ಅನಿಮಲ್' ಚಿತ್ರ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. ಇದೇ ದಿನದಂದು ಮೇಘನಾ ಗುಲ್ಜಾರ್ ಜೀವನಾಧಾರಿತ 'ಸ್ಯಾಮ್ ಬಹದ್ದೂರ್' ಚಿತ್ರವು ಬೆಳ್ಳಿ ಪರದೆಗೆ ಬರಲಿದೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್ ನಟಿಸಿದ್ದಾರೆ.
ಅಮೀರ್ ಖಾನ್ ಮುಂದಿನ ಸಿನಿಮಾ Vs ವೆಲ್ಕಮ್ ಟು ದಿ ಜಂಗಲ್:ಅಮೀರ್ ಖಾನ್ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣವನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಶೀರ್ಷಿಕೆ ಮತ್ತು ಕಥೆಯ ಬಗ್ಗೆ ಬಹಿರಂಗಪಡಿಸಿಲ್ಲ. ಆದರೆ ಈ ಹೆಸರಿಡದ ಸಿನಿಮಾ ಕ್ರಿಸ್ಮಸ್ ವೇಳೆ ಡಿಸೆಂಬರ್ 20 ರಂದು ಬಿಡುಗಡೆಯಾಗಲಿದೆ. ಇದೇ ಸಮಯದಲ್ಲಿ ವೆಲ್ಕಮ್ ಟು ದಿ ಜಂಗಲ್ ಕೂಡ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಸಂಜಯ್ ದತ್, ಅರ್ಷದ್ ವಾರ್ಸಿ, ಸುನೀಲ್ ಶೆಟ್ಟಿ, ಜಾಕ್ವೆಲಿನ್ ಫರ್ನಾಂಡೀಸ್, ದಿಶಾ ಪಟಾನಿ ನಟಿಸಿದ್ದಾರೆ.
ಗಣಪತ್ Vs ಯಾರಿಯನ್ 2 Vs ತೇಜಸ್:ಈ ತಿಂಗಳ ಕೊನೆಯಲ್ಲಿ ಮೂರು ಸಿನಿಮಾಗಳು ಬಿಡುಗಡೆಯಾಗಲಿದೆ. ಟೈಗರ್ ಶ್ರಾಫ್ ನಟನೆಯ ಗಣಪತ್: ಎ ಹೀರೋ ಇಸ್ ಬಾರ್ನ್, ಕಂಗನಾ ರಣಾವತ್ ಮುಖ್ಯಭೂಮಿಕೆಯ ತೇಜಸ್ ಮತ್ತು ದಿವ್ಯಾ ಖೋಸ್ಲಾ ಕುಮಾರ್ ಅವರ ಯಾರಿಯನ್ 2 ಚಿತ್ರಗಳು ಅಕ್ಟೋಬರ್ 20ರಂದು ತೆರೆ ಕಾಣಲಿದೆ.
ಸಿಂಗಮ್ Vs ಪುಷ್ಪ 2:ಅಜಯ್ ದೇವಗನ್ ನಟನೆಯ 'ಸಿಂಗಮ್' ಮತ್ತು ಅಲ್ಲು ಅರ್ಜುನ್ ನಟನೆಯ 'ಪುಷ್ಪ 2: ದಿ ರೂಲ್' ಸಿನಿಮಾಗಳನ್ನು ಮುಂದಿನ ವರ್ಷ 2024ರ ಆಗಸ್ಟ್ 15ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಆದರೆ ಈ ಸಿನಿಮಾದ ರಿಲೀಸ್ ಡೇಟ್ನಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳು ಇವೆ.
ಇದನ್ನೂ ಓದಿ:ಬಹುನಿರೀಕ್ಷಿತ 'ಸಲಾರ್' ರಿಲೀಸ್ ಡೇಟ್ ಅನೌನ್ಸ್: ಶಾರುಖ್ ಸಿನಿಮಾದೊಂದಿಗೆ ಪೈಪೋಟಿ!