ಕರ್ನಾಟಕ

karnataka

ETV Bharat / entertainment

'ಬುಕ್‌ಮೈಶೋ'ನಲ್ಲಿ ಟಿಕೆಟ್​ ಕ್ಯಾನ್ಸಲ್​ ಮಾಡಿ, ಹಣ ಹಿಂಪಡೆಯುವುದು ಹೇಗೆ? ಸಿಂಪಲ್ ಸ್ಟೆಪ್ಸ್! - ಈಟಿವಿ ಭಾರತ ಕನ್ನಡ

BookMyShow ticket cancellation: 'ಬುಕ್‌ಮೈಶೋ'ನಲ್ಲಿ ನೀವು ಸುಲಭವಾಗಿ ಟಿಕೆಟ್​ ಕ್ಯಾನ್ಸಲ್​ ಮಾಡಿ, ಹಣ ಹಿಂಪಡೆದುಕೊಳ್ಳಬಹುದು. ಹೇಗೆ? ಎಂದು ತಿಳಿಯಲು ಮುಂದೆ ಓದಿ..

How to cancel your book my show tickets and get refund
ಬುಕ್​ ಮೈ ಶೋ

By ETV Bharat Karnataka Team

Published : Sep 10, 2023, 11:25 AM IST

ಒಂದು ಕಾಲದಲ್ಲಿ ಸಿನಿಮಾ ನೋಡಬೇಕೆಂದರೆ ಜನರು ಥಿಯೇಟರ್‌ಗಳೆದುರು ಕ್ಯೂನಲ್ಲಿ ನಿಂತು ಟಿಕೆಟ್​ ಪಡೆಯುತ್ತಿದ್ದರು. ಆದರೆ, ಕಾಲ ಬದಲಾಗಿದೆ. ಟಿಕೆಟ್​ ಖರೀದಿಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಥಿಯೇಟರ್​ಗೆ ಹೋಗುವ ಬದಲು ಫೋನ್​ನಲ್ಲೇ ಜನರು ಟಿಕೆಟ್​ ಬುಕ್​ ಮಾಡುತ್ತಿದ್ದಾರೆ. ತಮಗೆ ಬೇಕಿರುವ ಆಸನ ಆಯ್ದುಕೊಂಡು ಟಿಕೆಟ್​ ಖರೀದಿಸಿದರೆ ಕೆಲಸ ಸಲೀಸು. ಶೋ ಶುರುವಾಗುವ 5 ನಿಮಿಷಕ್ಕೂ ಮುನ್ನ ಥಿಯೇಟರ್‌ನೊಳಗೆ ಎಂಟ್ರಿ ಕೊಟ್ಟರೆ, ಆರಾಮವಾಗಿ ಕುಳಿತು ನಿಮ್ಮಿಷ್ಟದ ಸಿನಿಮಾ ವೀಕ್ಷಿಸಬಹುದು.

ಆದರೆ ಕೆಲವೊಮ್ಮೆ ಕಾರಣಾಂತರಗಳಿಂದ ನಾವು ಬುಕ್​ ಮಾಡಿದ್ದ ಟಿಕೆಟ್​ ರದ್ದು ಮಾಡಬೇಕಾದ ಸಂದರ್ಭ ಎದುರಾಗುತ್ತದೆ. ಆಗ ನಾವು ವ್ಯಯಿಸಿದ ಹಣದ ಬಗ್ಗೆ ಚಿಂತೆ ಮಾಡುತ್ತೇವೆ. ಈ ವಿಚಾರದಲ್ಲಿ ಅನೇಕರು ಟೆನ್ಶನ್​ ಮಾಡಿಕೊಳ್ಳುವರು. ಅಷ್ಟೆಲ್ಲಾ ದುಡ್ಡು ಕೊಟ್ಟು ಟಿಕೆಟ್​ ಬುಕ್​ ಮಾಡಿದ್ದೆ, ವೇಸ್ಟ್​ ಆಯ್ತು ಎಂಬೆಲ್ಲಾ ಆಲೋಚನೆಗೆ ಬೀಳುತ್ತಾರೆ. ಆದರೆ ಚಿಂತೆ ಪಡಬೇಕಾಗಿಲ್ಲ. ಏಕೆಂದರೆ, ನೀವು ಸುಲಭವಾಗಿ ಟಿಕೆಟ್​ ಕ್ಯಾನ್ಸಲ್​ ಮಾಡಿ, ಹಣವನ್ನೂ ಕೂಡ ಹಿಂಪಡೆದುಕೊಳ್ಳಬಹುದು.

'ಬುಕ್‌ಮೈಶೋ'ನಲ್ಲಿ ಹೀಗೆ ಟಿಕೆಟ್​ ಕ್ಯಾನ್ಸಲ್​ ಮಾಡಿ:

  • ನಿಮ್ಮ ಮೊಬೈಲ್​ನಲ್ಲಿ 'ಬುಕ್‌ಮೈಶೋ' ಆ್ಯಪ್​ ತೆರೆಯಿರಿ.
  • ನೀವು ಲಾಗ್​ ಔಟ್​ ಆಗಿದ್ದರೆ, ಲಾಗ್​ ಇನ್​ ಆಗಿ ಆ್ಯಪ್​ ಓಪನ್​ ಮಾಡಿ.
  • ಪ್ರೊಫೈಲ್​ ಐಕಾನ್​ ಮೇಲೆ ಕ್ಲಿಕ್​ ಮಾಡಿ.
  • Your Orders ಎಂಬ ಆಯ್ಕೆಯನ್ನು ಒತ್ತಿ.
  • ಪರದೆಯಲ್ಲಿ ನೀವು ಬುಕ್​ ಮಾಡಿದ ಟಿಕೆಟ್​ ಲಿಸ್ಟ್​ ಕಾಣಿಸುತ್ತದೆ.
  • ಅದರಲ್ಲಿ ನೀವು ಸಿನಿಮಾ ನೋಡಲು ಬುಕ್​ ಮಾಡಿರುವ ಟಿಕೆಟ್​ ಆಯ್ದುಕೊಳ್ಳಿ.
  • ನಂತರ Cancel Booking Option ಕ್ಲಿಕ್ಕಿಸಿ.
  • ಸ್ಕ್ರೀನ್​ ಕೆಳಗೆ ಸ್ಕ್ರಾಲ್​ ಮಾಡಿ, Refund Payment method ಆಯ್ಕೆ ಮಾಡಿ.
  • Get refund ಕ್ಲಿಕ್​ ಮಾಡಿ.

'ಬುಕ್‌ಮೈಶೋ' ಅಧಿಕೃತ ವೆಬ್​ಸೈಟ್​ನಲ್ಲಿ ಟಿಕೆಟ್​ ಕ್ಯಾನ್ಸಲ್​ ಮಾಡುವುದು ಹೇಗೆ?:ಬುಕ್‌ಮೈಶೋ ಮೊಬೈಲ್​ ಆ್ಯಪ್​ ಬಳಸದವರೂ ಇದ್ದಾರೆ. ಸಿನಿಮಾ ಟಿಕೆಟ್​ಗಳನ್ನು ಬುಕ್​ ಮಾಡಲು ಬುಕ್​ ಮೈ ಶೋ ಅಧಿಕೃತ ವೆಬ್​ಸೈಟ್ ಅನ್ನೇ​ ಬಳಸುವರೂ ಇದ್ದಾರೆ. ನೀವು ಅಧಿಕೃತ ವೆಬ್​ಸೈಟ್​ನಿಂದ ಸಿನಿಮಾ ಟಿಕೆಟ್​ ಬುಕ್​ ಮಾಡಿದ್ದರೆ, ಅದನ್ನು ಕ್ಯಾನ್ಸಲ್​ ಮಾಡಬಹುದು. ಹೇಗೆ ಗೊತ್ತೇ?

  • ಬುಕ್​ ಮೈ ಶೋ ಅಧಿಕೃತ ವೆಬ್​ಸೈಟ್​ ತೆರೆಯಿರಿ.
  • ನಿಮ್ಮ ಖಾತೆಗೆ ಲಾಗಿನ್​ ಆಗಿ.
  • ಬಲಭಾಗದಲ್ಲಿರುವ ನಿಮ್ಮ ಪ್ರೊಫೈಲ್​ ಓಪನ್​ ಮಾಡಿ.
  • Purchase History ಆಯ್ದುಕೊಳ್ಳಿ.
  • ಟಿಕೆಟ್​ ಮೇಲೆ ಕ್ಲಿಕ್ಕಿಸಿ.
  • ಸ್ಕ್ರೀನ್​ ಕೆಳಗೆ ಸ್ಕ್ರಾಲ್​ ಮಾಡಿ, ರದ್ದು ಆಯ್ಕೆ ಒತ್ತಿ.
  • Refund Payment method ಸೆಲೆಕ್ಟ್​ ಮಾಡಿ.
  • Confirm ಮೇಲೆ ಕ್ಲಿಕ್​ ಮಾಡಿ.
  • ಸೂಚನೆ: ಕೆಲವೊಮ್ಮೆ ಈ ವೆಬ್​ಸೈಟ್​ ಓಪನ್​ ಆಗುವುದಿಲ್ಲ.

ನೀವು ಸೂಪರ್​ಸ್ಟಾರ್​​ ಕಸ್ಟಮರ್​ ಆಗಿದ್ದಲ್ಲಿ ಟಿಕೆಟ್​ ಕ್ಯಾನ್ಸಲ್​ ಹೇಗೆ?:ಬುಕ್‌ಮೈಶೋ ಅಪ್ಲಿಕೇಶನ್​ ತನ್ನ ಸೂಪರ್​ಸ್ಟಾರ್​ ಗ್ರಾಹಕರಿಗೆ ಹೆಚ್ಚುವರಿ ಪ್ರಯೋಜನ ನೀಡುತ್ತದೆ. ಒಬ್ಬ ವ್ಯಕ್ತಿ ಸೂಪರ್​ಸ್ಟಾರ್​ ಕಸ್ಟಮರ್​ ಆಗಿದ್ದಲ್ಲಿ ಟಿಕೆಟ್​ಗೆ ಪಾವತಿಸಿದ ಸಂಪೂರ್ಣ ಹಣ ಅವರಿಗೆ ಸಿಗುತ್ತದೆ. ಯಾವುದೇ ಗ್ರಾಹಕ ಒಂದು 1 ವರ್ಷದೊಳಗೆ ಬುಕ್​ ಮೈ ಶೋದಿಂದ 10ಕ್ಕಿಂತ ಹೆಚ್ಚು ಟಿಕೆಟ್​ಗಳನ್ನು ಬುಕ್​ ಮಾಡಿದ್ದಲ್ಲಿ, ಅವರನ್ನು 'ಸೂಪರ್​ಸ್ಟಾರ್​ ಕಸ್ಟಮರ್'​ ಎಂದು ಕರೆಯಲಾಗುತ್ತದೆ. ಹಾಗಿದ್ದರೆ ಈ ಸೂಪರ್​ಸ್ಟಾರ್​ ಕಸ್ಟಮರ್​ ತಮ್ಮ ಟಿಕೆಟ್​ ಕ್ಯಾನ್ಸಲ್​ ಮಾಡುವುದು ಹೇಗೆ? ಸಂಪೂರ್ಣ ಹಣವನ್ನು ಹಿಂಪಡೆಯುವುದು ಹೇಗೆಂದು ತಿಳಿಯಿರಿ.

  • ಬುಕ್‌ಮೈಶೋ ಅಪ್ಲಿಕೇಶನ್​ ತೆರೆಯಿರಿ.
  • ನಿಮ್ಮ ಪ್ರೊಫೈಲ್​ಗೆ ಹೋಗಿ.
  • Your Orders ಆಯ್ಕೆಯ ಮೇಲೆ ಕ್ಲಿಕ್​ ಮಾಡಿ.
  • ಟಿಕೆಟ್​ ಆಯ್ಕೆ ಮಾಡಿ.
  • Superstar Cancelation ಮೇಲೆ ಕ್ಲಿಕ್​ ಮಾಡಿ.
  • Original Payment method ಆಯ್ದುಕೊಳ್ಳಿ.
  • Get refund ಕ್ಲಿಕ್ಕಿಸಿ.
  • ನಿಮ್ಮ ಟಿಕೆಟ್​ ಕ್ಯಾನ್ಸಲ್​ ಅನ್ನು ಕನ್​ಫರ್ಮ್​ ಮಾಡಿ.

BookMyShow Ticket Cancellation Rules: ಬುಕ್‌ಮೈಶೋ ಟಿಕೆಟ್​ ಕ್ಯಾನ್ಸಲ್​ ಮಾಡಬೇಕಾದರೆ ಅದಕ್ಕೆ ಕೆಲವು ನಿಯಮಗಳಿವೆ. ಅವುಗಳನ್ನು ನಾವು ಪಾಲಿಸಲೇಬೇಕು. ಅವರು ನೀಡಿದ ರೂಲ್ಸ್ ಅನ್ನು ನೀವು ಸರಿಯಾಗಿ ಅನುಸರಿಸದೇ, ಅಷ್ಟೇ ಸುಲಭವಾಗಿ ನಿಮ್ಮ ಟಿಕೆಟ್​ ಕ್ಯಾನ್ಸಲ್​ ಮಾಡಿಕೊಳ್ಳುವುದರ ಜೊತೆಗೆ ಹಣ ಹಿಂಪಡೆಯಬಹುದು.

  • ನೀವು ಬುಕ್​ ಮೈ ಶೋನಲ್ಲಿ ಟಿಕೆಟ್​ ಕ್ಯಾನ್ಸಲ್​ ಮಾಡಲು ಬಯಸಿದ್ದಲ್ಲಿ, ಸಿನಿಮಾ ಪ್ರಾರಂಭವಾಗುವ 4 ಗಂಟೆಗಳ ಮುಂಚಿತವಾಗಿ ಮಾಡಬೇಕು.
  • ತಡವಾದಲ್ಲಿ ಟಿಕೆಟ್​ ಕ್ಯಾನ್ಸಲ್​ ಮಾಡಲು ಸಾಧ್ಯವಿಲ್ಲ. ಸರಿಯಾದ ಸಮಯಕ್ಕೆ ಟಿಕೆಟ್​ ಕ್ಯಾನ್ಸಲ್​ ಮಾಡಿದರೆ, ಶೇ.30ರಷ್ಟು ಹಣ ಕಡಿತಗೊಂಡು ಉಳಿದ ಮೊತ್ತ ನಿಮಗೆ ಸಿಗುತ್ತದೆ.
  • ಮರುಪಾವತಿಗಾಗಿ (Refund Payment) ನೀವು ಕ್ರೆಡಿಟ್​/ಡೆಬಿಟ್​ ಕಾರ್ಡ್​ ಅಥವಾ ನೆಟ್​ ಬ್ಯಾಕಿಂಗ್​ ವಿಧಾನವನ್ನು ಆರಿಸಿದ್ದಲ್ಲಿ, ನಿಮ್ಮ ಖಾತೆಗೆ ಹಣ ಪಾವತಿಯಾಗಲು 7 ರಿಂದ 10 ದಿನ ಬೇಕಾಗುತ್ತದೆ.

ಇದನ್ನೂ ಓದಿ:ತಡವಾಗಿ ಎಚ್ಚೆತ್ತುಕೊಂಡ ಬುಕ್ ಮೈ ಶೋ: ಆನ್ಲೈನ್ ಬುಕಿಂಗ್ ಕ್ಲೋಸ್

ABOUT THE AUTHOR

...view details