ಕರ್ನಾಟಕ

karnataka

ETV Bharat / entertainment

ಮಹಿಳಾ ಕಾಸ್ಟಿಂಗ್​ ನಿರ್ದೇಶಕಿ ವೇಶ್ಯಾವಾಟಿಕೆ ದಂಧೆ.. ಗಿರಾಕಿಗಳ ರೀತಿ ಹೋದ ಪೊಲೀಸರು, ಮುಂದಾಗಿದ್ದೇನು? - etv bharat kannada

ರೂಪದರ್ಶಿಗಳಿಗೆ ಉತ್ತಮ ಹಣ ನೀಡಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ ಮಹಿಳಾ ಕಾಸ್ಟಿಂಗ್​ ನಿರ್ದೇಶಕರನ್ನು ಮುಂಬೈ ದಿಂಡೋಶಿ ಪೊಲೀಸರು ಬಂಧಿಸಿದ್ದಾರೆ.

MH Bollywoord
ಮಹಿಳಾ ಕಾಸ್ಟಿಂಗ್​ ನಿರ್ದೇಶಕರ ಬಂಧನ

By

Published : Apr 18, 2023, 10:33 AM IST

ಮುಂಬೈ:ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮತ್ತು ಗ್ರಾಹಕರಿಗೆ ಮಾಡೆಲ್​ಗಳನ್ನು ಪೂರೈಕೆ ಮಾಡುತ್ತಿದ್ದ ಆರೋಪದಡಿ 27 ವರ್ಷದ ಮಹಿಳಾ ಕಾಸ್ಟಿಂಗ್​ ನಿರ್ದೇಶಕರನ್ನು ಮುಂಬೈ ದಿಂಡೋಶಿ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಪೊಲೀಸರ ಸಾಮಾಜಿಕ ಸೇವಾ ವಿಭಾಗವು ಇಬ್ಬರು ಡಮ್ಮಿ ಕ್ಲೈಂಟ್ಸ್​ಗಳನ್ನು ಕಳುಹಿಸಿ ಇಬ್ಬರು ಮಾಡೆಲ್​ಗಳನ್ನು ರಕ್ಷಿಸಿದೆ. ಸದ್ಯ ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಸಂಪೂರ್ಣ ತನಿಖೆಯನ್ನು ಸಮಾಜ ಸೇವಾ ಇಲಾಖೆ ನಡೆಸಿದ್ದು, ಘಟನೆಯ ವಿಡಿಯೋವನ್ನು ಸಂಪೂರ್ಣವಾಗಿ ಚಿತ್ರೀಕರಿಸಲಾಗಿದೆ.

ಆರೋಪಿಯ ಹೆಸರು ಆರತಿ ಹರಿಶ್ಚಂದ್ರ ಮಿತ್ತಲ್​. ಆರತಿ ಅವರು ಓಶಿವಾರದ ಆರಾಧನಾ ಅಪಾರ್ಟ್​ಮೆಂಟ್​ನ ನಿವಾಸಿಯಾಗಿದ್ದು, ಚಲನಚಿತ್ರಗಳಿಗೆ ಕಾಸ್ಟಿಂಗ್​ ನಿರ್ದೇಶಕರಾಗಿದ್ದಾರೆ. ವಿವಿಧ ಪ್ರಾಜೆಕ್ಟ್‌ಗಳ ಸಂದರ್ಭದಲ್ಲಿ ಭೇಟಿಯಾದ ರೂಪದರ್ಶಿಗಳಿಗೆ ಉತ್ತಮ ಹಣ ನೀಡಿ ವೇಶ್ಯಾವಾಟಿಕೆಗೆ ಆಮಿಷ ಒಡ್ಡುತ್ತಿದ್ದರು ಎಂದು ದಿಂಡೋಶಿ ಪೊಲೀಸರು ತಿಳಿಸಿದ್ದಾರೆ. ಆರತಿ ಅವರು ಓರ್ವ ನಟಿ ಮತ್ತು ಕಾಸ್ಟಿಂಗ್​ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಇವರು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಪೊಲೀಸ್​ ಇನ್ಸ್​ಪೆಕ್ಟರ್​ ಮನೋಜ್​ ಸುತಾರ್​ ಅವರಿಗೆ ಮಾಹಿತಿ ಸಿಕ್ಕಿತ್ತು.

ಬಳಿಕ ಮನೋಜ್​ ಸುತಾರ್​ ಅವರು ತಂಡವನ್ನು ರಚಿಸಿದರು. ಬಳಿಕ ಆರತಿ ಮಿತ್ತಲ್​ ಬಳಿಗೆ ಗಿರಾಕಿಗಳಂತೆ ಇಬ್ಬರನ್ನು ಕಳುಹಿಸಿ ಹುಡುಗಿಯರನ್ನು ಕೇಳಿದರು. ಆಗ ಮಿತ್ತಲ್​ 60,000 ರೂ. ಹಣವನ್ನು ಅವರಿಂದ ಕೇಳಿದರು. ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ ಪ್ರಕಾರ, "ಆರತಿ ಮಿತ್ತಲ್​ ಇಬ್ಬರು ಮಹಿಳೆಯರ ಫೋಟೋಗಳನ್ನು ಇನ್ಸ್​ಪೆಕ್ಟರ್​ ಮನೋಜ್​ ಸುತಾರ್​ ಅವರ ಫೋನ್​ಗೆ ಕಳುಹಿಸಿದ್ದರು. ಮಾಡೆಲ್​ಗಳು ಜುಹು ಅಥವಾ ಗೋರೆಗಾಂವ್​ನಲ್ಲಿರುವ ಹೋಟೆಲ್​ಗೆ ಬರುತ್ತಾರೆ ಎಂದು ತಿಳಿಸಿದ್ದರು. ಅದರಂತೆ ಗೋರೆಗಾಂವ್​ನಲ್ಲಿ ಎರಡು ಕೊಠಡಿಗಳನ್ನು ಬುಕ್​ ಮಾಡಿ ಇಬ್ಬರು ಡಮ್ಮಿ ಗ್ರಾಹಕರನ್ನು ಕಳುಹಿಸಿದ್ದರು."

ಇದನ್ನೂ ಓದಿ:ಶೂಯಿಂದ ಒದ್ದು ವೃದ್ಧ ದಂಪತಿ ಮೇಲೆ ಹಲ್ಲೆ : ನೋವಿನಲ್ಲಿ ಪ್ರಾಣ ಬಿಟ್ಟ ಹಿರಿಯ ಜೀವ

"ಇಬ್ಬರು ಯುವತಿಯರೊಂದಿಗೆ ಅಲ್ಲಿಗೆ ಮಿತ್ತಲ್​ ಬಂದರು. ಇದೆಲ್ಲವೂ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಸೇವಾ ವಿಭಾಗದ ಅಧಿಕಾರಿಗಳು ಹೋಟೆಲ್​ ಮೇಲೆ ದಾಳಿ ನಡೆಸಿ ಆರೋಪಿಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದಿದ್ದಾರೆ. ನಂತರ ಅವರು ದಿಂಡೋಶಿ ಪೊಲೀಸ್​ ಠಾಣೆಗೆ ಮಾಹಿತಿ ನೀಡಿ ಮಿತ್ತಲ್​ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ. ತನಿಖೆಯ ವೇಳೆ ಮಿತ್ತಲ್​ ತಮಗೆ ತಲಾ 15,000 ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ." ಎಂದು ಮಾಹಿತಿ ನೀಡಿದ್ದಾರೆ.

ದಿಂಡೋಶಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು, “ಚಿತ್ರರಂಗದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮತ್ತು ಗ್ರಾಹಕರಿಂದ ಹಣ ಪಡೆದು ಮಾಡೆಲ್‌ಗಳನ್ನು ಸರಬರಾಜು ಮಾಡುತ್ತಿದ್ದ ಆರೋಪಿಗಳನ್ನು ನಾವು ಬಂಧಿಸಿದ್ದೇವೆ. ನಾವು ಆರತಿ ಮಿತ್ತಲ್ ವಿರುದ್ಧ ಸೆಕ್ಷನ್ 370 ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಹೆಣ್ಣುಮಕ್ಕಳ ಕಳ್ಳಸಾಗಣೆಗಾಗಿ ಪ್ರಕರಣ ದಾಖಲಿಸಿದ್ದೇವೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಅಪರಾಧ ವಿಭಾಗದ ಕೊಠಡಿ 11 ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿದೆ. ಇಂದು ಆರೋಪಿ ಆರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅಂತೆಯೇ ಈ ವೇಶ್ಯಾವಾಟಿಕೆ ದಂಧೆಯ ಸಂಪರ್ಕ ಕೊನೆಗೊಳ್ಳಲಿದೆ" ಎಂದು ತಿಳಿಸಿದರು.

ಇದನ್ನೂ ಓದಿ:ಗಣಿ ಇಲಾಖೆಯ ಮಹಿಳಾ ಅಧಿಕಾರಿಯನ್ನು ಎಳೆದಾಡಿ ಹಲ್ಲೆ ನಡೆಸಿದ ದುಷ್ಕರ್ಮಿಗಳು

ABOUT THE AUTHOR

...view details