ಡೆಹ್ರಾಡೂನ್(ಉತ್ತರಾಖಂಡ):ಖ್ಯಾತ ಬಾಲಿವುಡ್ ಗಾಯಕ ಚಂಪಾವತ್‌ನ ಪವನ್‌ದೀಪ್ ರಾಜನ್ ಕಾರ್ಯಕ್ರಮವೊಂದರ ನಿಮಿತ್ತ ನಿನ್ನೆ ಡೆಹ್ರಾಡೂನ್‌ಗೆ ಭೇಟಿ ನೀಡಿದ್ದು, ರಾತ್ರಿ ಊಟಕ್ಕೆ ಎಂದು ಸ್ನೇಹಿತರೊಂದಿಗೆ ಘಂಟಾಘರ್‌ನಲ್ಲಿರುವ ಡೂನ್ ಫುಡ್ ಕೋರ್ಟ್ ರೆಸ್ಟೋರೆಂಟ್ಗೆ ತೆರಳಿದ ಅವರನ್ನು ವೇಟರ್ಗಳು ಹಾಗೂ ರೆಸ್ಟೋರೆಂಟ್‌ನ ಸಿಬ್ಬಂದಿ ಆಟೋಗ್ರಾಫ್ ಹಾಗೂ ಸೆಲ್ಫಿಗಾಗಿ ಮುತ್ತಿಕೊಂಡಿದ್ದಾರೆ.
ಊಟಕ್ಕಾಗಿ ಕಾಯುವ ಸಮಯದಲ್ಲಿ ಅಲ್ಲಿದ್ದ ಸಿಬ್ಬಂದಿ ಪವನ್‌ದೀಪ್ ರಾಜನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಮಾಲೀಕ ಜತಿನ್ ಅವರು ರೆಸ್ಟೋರೆಂಟ್ಗೆ ಬಂದರೂ ಸಿಬ್ಬಂದಿ ಪವನ್‌ದೀಪ್ ಅವರೊಂದಿಗೆ ಫೋಟೋ ತೆಗಿಸಿಕೊಳ್ಳುತ್ತಿರುವುದನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಪವನ್‌ದೀಪ್ ಸೇರಿದಂತೆ ಅವರ ತಂಡದ 10ಕ್ಕೂ ಹೆಚ್ಚು ಸದಸ್ಯರೊಂದಿಗೆ ಆಟೋಗ್ರಾಫ್ ಸೆಲ್ಫಿ ಕ್ಲಿಕ್ಕಿಸಿಕೊಂಡ ಬಳಿಕವೇ ವೇಟರ್ಗಳು ಅವರಿಗೆ ಊಟ ಬಡಿಸಿದ್ದಾರೆ. ಅವರ ಅಭಿಮಾನಕ್ಕೆ ಪವನ್‌ದೀಪ್ ಕೂಡ ಭಾವುಕರಾಗಿದ್ದಾರೆ.