ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿಂದಿ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ ದಿವಂಗತ ಯಶ್ ಚೋಪ್ರಾ ಪತ್ನಿ ಪಮೇಲಾ ಚೋಪ್ರಾ (Pamela Chopra) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಚಿತ್ರರಂಗ ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ಹಿಂದಿ ಸಿನಿ ಗಣ್ಯರು ಪಮೇಲಾ ಚೋಪ್ರಾ ಅವರ ಅಂತಿಮ ದರ್ಶನ ಪಡೆದಿದ್ದಾರೆ.
ನಿರ್ದೇಶಕ, ನಿರ್ಮಾಪಕ ಆದಿತ್ಯ ಚೋಪ್ರಾ ಅವರ ಮುಂಬೈ ನಿವಾಸಕ್ಕೆ ಸೆಲೆಬ್ರಿಟಿಗಳು ಆಗಮಿಸಿ, ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಚೋಪ್ರಾ ಕುಟುಂಬದೊಂದಿಗೆ ಆತ್ಮೀಯ ಬಾಂಧವ್ಯವನ್ನು ಹಂಚಿಕೊಂಡಿರುವ ಬಾಲಿವುಡ್ ಕಿಂಗ್ ಖಾನ್ ಶಾರುಖ್, ಆದಿತ್ಯ ಚೋಪ್ರಾ ಅವರ ನಿವಾಸಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದರು. ಮಗ ಆರ್ಯನ್ ಅವರೊಂದಿಗೆ ಬಂದ ಶಾರೂಕ್ ಖಾನ್ ಪಮೇಲಾ ಚೋಪ್ರಾ ಅವರ ಅಂತಿಮ ದರ್ಶನ ಪಡೆದರು. ಇನ್ನು ಬಾಲಿವುಡ್ನ ತಾರಾ ದಂಪತಿಗಳಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೂಡ ಆದಿತ್ಯ ಚೋಪ್ರಾ ಅವರ ನಿವಾಸಕ್ಕೆ ಆಗಮಿಸಿ ಅಗಲಿದ ಜೀವಕ್ಕೆ ಸಂತಾಪ ಸೂಚಿಸಿದರು.
ಇದನ್ನು ಓದಿ:'ವಿಚ್ಛೇದನ'ವೆಂಬ ಕರಾಳ ಕ್ಷಣ-ನೋವಿನಿಂದ ಚೇತರಿಸಿಕೊಂಡಿಲ್ಲವೆಂದ ನಟಿ ಸಮಂತಾ
ನಟ ಹೃತಿಕ್ ರೋಷನ್ ಮತ್ತು ಅವರ ತಂದೆ ರಾಕೇಶ್ ರೋಷನ್ ಕೂಡಾ ಪಮೇಲಾ ಚೋಪ್ರಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಗಾಯಕ ಸೋನು ನಿಗಮ್ ಮತ್ತು ಅವರ ಪತ್ನಿ ಕೂಡ ಅಂತಿಮ ವಿಧಿ ವಿಧಾನಗಳಲ್ಲಿ ಉಪಸ್ಥಿತರಿದ್ದರು. ನಟಿ ಶ್ರದ್ಧಾ ಕಪೂರ್, ಭೂಮಿ ಪಡ್ನೇಕರ್ ಮತ್ತು ಅವರ ಸಹೋದರಿ, ಕಿರಣ್ ಖೇರ್, ನಟಿ ಕಾಜೋಲ್, ಶಿಲ್ಪಾ ಶೆಟ್ಟಿ, ನಟ ರಣ್ವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ, ನಟ ಅಮೀರ್ ಖಾನ್, ನಟ ಜಾನ್ ಅಬ್ರಹಾಂ ಕೂಡ, ನಿರ್ಮಾಪಕ ಆದಿತ್ಯ ಚೋಪ್ರಾ ಅವರ ನಿವಾಸಕ್ಕೆ ದೌಡಿಯಿಸಿ, ಅಗಲಿದ ಪಮೇಲಾ ಚೋಪ್ರಾ ಅವರ ಅಂತಿಮ ದರ್ಶನ ಪಡೆದುಕೊಂಡರು.