ಬಾಲಿವುಡ್ ನಟಿ ಅನುಷ್ಕಾ ಶರ್ಮಾ - ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ತಾರಾ ದಂಪತಿ ದೀಪಿಕಾ ಪಡುಕೋಣೆ - ರಣ್ವೀರ್ ಸಿಂಗ್ ದೇಶದ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಜೋಡಿಗಳಲ್ಲಿ ಪ್ರಮುಖರು. ಗುರುವಾರ ಮುಂಬೈನಲ್ಲಿ ನಡೆದ ನಾಲ್ಕನೇ ಆವೃತ್ತಿಯ ಇಂಡಿಯನ್ ಸ್ಪೋರ್ಟ್ಸ್ ಹಾನರ್ಸ್ ಸಮಾಂಭಕ್ಕೆ ಈ ಜೋಡಿಗಳು ಸಾಕ್ಷಿಯಾಗಿವೆ. ಅಲ್ಲದೇ, ಅಜಯ್ ದೇವಗನ್, ಅಭಿಷೇಕ್ ಬಚ್ಚನ್, ಅಂಗದ್ ಬೇಡಿ, ನೇಹಾ ಧೂಪಿಯಾ, ರಿಯಾ ಚಕ್ರವರ್ತಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ.
ರೆಡ್ ಕಾರ್ಪೆಟ್ ಮೇಲೆ ವಿರುಷ್ಕಾ ಜೋಡಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಒಟ್ಟಿಗೆ ಪೋಸ್ ನೀಡಿದ್ದಾರೆ. ಪಠಾಣ್ ನಟಿ ದೀಪಿಕಾ ಪಡುಕೋಣೆ ತಮ್ಮ ತಂದೆ, ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಮತ್ತು ಪತಿ, ನಟ ರಣ್ವೀರ್ ಸಿಂಗ್ ಅವರೊಂದಿಗೆ ಪಾಪರಾಜಿಗಳ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಈ ಎರಡೂ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಮೆಚ್ಚುಗೆ ಸಂಪಾದಿಸಿದೆ.
ದೀಪ್ವೀರ್, ಪ್ರಕಾಶ್ ಪಡುಕೋಣೆ ಬ್ಲ್ಯಾಕ್ ಡ್ರೆಸ್ ಕೋಡ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಪ್ರಕಾಶ್ ಪಡುಕೋಣೆ ವಿಶ್ವದ ನಂಬರ್ 1 ಬ್ಯಾಡ್ಮಿಂಟನ್ ಆಟಗಾರ. 1980ರಲ್ಲಿ, ಪ್ರಕಾಶ್ ಪಡುಕೋಣೆ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಆಟಗಾರ. ರಣ್ವೀರ್ ಮತ್ತು ದೀಪಿಕಾ ತಮ್ಮ ತಂದೆಯೊಂದಿಗೆ ಪಾಪರಾಜಿಗಳಿಗೆ ಪೋಸ್ ನೀಡಿದರು. ರಣ್ವೀರ್ ಸಿಂಗ್ ಮತ್ತು ಪ್ರಕಾಶ್ ಪಡುಕೋಣೆ ಇಬ್ಬರೂ ಕಪ್ಪು ಸೂಟ್ ಧರಿಸಿದ್ದರೆ, ದೀಪಿಕಾ ಕಪ್ಪು ಸೀರೆಯಲ್ಲಿ ಮಿಂಚಿದರು.