ಭಾರತದಾದ್ಯಂತ ಬಣ್ಣದ ಹಬ್ಬದ ಸಂಭ್ರಮ ಕಳೆಗಟ್ಟಿದೆ. ವಿಭಿನ್ನ ಆಚರಣೆಗಳು, ಬಣ್ಣದ ಎರೆಚಾಟ ಮುಂದುವರಿದಿದೆ. ಬಾಲಿವುಡ್ ಮಂದಿ ಕೂಡ ಸಖತ್ ಕಲರ್ಫುಲ್ ಆಗಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಬಾಲಿವುಡ್ ತಾರೆಯರಾದ, ಸಲ್ಮಾನ್ ಖಾನ್, ಶಿಲ್ಪಾ ಶೆಟ್ಟಿ, ಶಾಹಿದ್ ಕಪೂರ್, ಅನನ್ಯಾ ಪಾಂಡೆ, ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ಅಮಿತಾಭ್ ಬಚ್ಚನ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಬಾಲಿವುಡ್ ಸೆಲೆಬ್ರಿಟಿಗಳು ಹೋಳಿ ಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ.
ಹೋಳಿ ಸಂಭ್ರಮದಲ್ಲಿ ಅಮಿತಾಭ್ ಬಚ್ಚನ್: ಪ್ರೊಜೆಕ್ಟ್ ಕೆ ಶೂಟಿಂಗ್ ಸೆಟ್ನಲ್ಲಿ ಗಾಯಗೊಂಡಿರುವ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅಭಿಮಾನಿಗಳಿಗೆ ಹೋಳಿ ಹಬ್ಬದ ಶುಭ ಕೋರಿದ್ದಾರೆ. ಹಿಂದಿ ಕ್ಯಾಲೆಂಡರ್ ಪ್ರಕಾರ ಹಬ್ಬದ ದಿನಾಂಕ, ಸಮಯದ ಬಗ್ಗೆ ಕೊಂಚ ಗೊಂದಲ ಇತ್ತು. ಒಂದು ದಿನ ಮೊದಲೇ ಹೋಳಿ ಆಚರಿಸಿದ್ದೇವೆ ಎಂದು ತಿಳಿಸಿದರು. ತಮ್ಮ ಅಭಿಮಾನಿಗಲಿಗೂ ಹೋಳಿ ಶುಭಾಶಯಗಳನ್ನು ಕೋರಿದರು. ಇನ್ನು ಆರೋಗ್ಯ ಸುಧಾರಿಸುತ್ತಿದ್ದು, ಸಂಪೂರ್ಣ ಚೇತರಿಕೆಗೆ ಸಮಯ ಹಿಡಿಯುತ್ತದೆ ಎಂದು ತಿಳಿಸಿದ್ದಾರೆ.
ಸಿದ್ ಕಿಯಾರ ಹೋಳಿ ಸಂಭ್ರಮ: ಇತ್ತೀಚೆಗೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿರುವ ನಟಿ ಕಿಯಾರಾ ಅಡ್ವಾಣಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಳದಿ ಶಾಸ್ತ್ರದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನಮ್ಮಿಂದ (ಕಿಯಾರಾ ಅಡ್ವಾಣಿ - ಸಿದ್ಧಾರ್ಥ್ ಮಲ್ಹೋತ್ರಾ) ನಿಮಗೆ ಮತ್ತು ನಿಮ್ಮವರಿಗೆ ಹೋಳಿ ಹಬ್ಬದ ಶುಭಾಶಯಗಳು ಎಂದು ಫೋಟೋಗಳಿಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.
ಸಲ್ಮಾನ್ ಖಾನ್ ಹೋಳಿ ಸೆಲೆಬ್ರೇಶನ್:ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಪ್ರತಿಕ್ರಿಯಿಸಿ, ತಮ್ಮ ಮೆಚ್ಚಿನ ನಟನಿಗೂ ಶುಭ ಕೋರುತ್ತಿದ್ದಾರೆ.
ಹೋಳಿ ಸಂಭ್ರಮದಲ್ಲಿ ಶಿಲ್ಪಾ ಶೆಟ್ಟಿ ಕುಟುಂಬ: ಪ್ರತೀ ಹಬ್ಬವನ್ನು ಬಹಳ ಸಂಭ್ರಮದಿಂದ, ಅದ್ಧೂರಿಯಾಗಿ, ಸಂಪ್ರದಾಯಬದ್ಧವಾಗಿ ಆಚರಿಸುವ ಬಾಲಿವುಡ್ ದಂತದ ಗೊಂಬೆ ಶಿಲ್ಪಾ ಶೆಟ್ಟಿ ಅವರು ಈ ಸಾಲಿನ ಹೋಳಿ ಹಬ್ಬವನ್ನೂ ಬಹಳ ಸಡಗರಿಂದ ಆಚರಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪುತ್ರ ವಿಹಾನ್ ಮತ್ತು ಪುತ್ರಿ ಸಮಿಶಾ ಜೊತೆ ನಟಿ ಶಿಲ್ಪಾ ಸಂಭ್ರಮಿಸಿರೋದನ್ನು ಕಾಣಬಹುದು. ವಿಡಿಯೋ ಹಂಚಿಕೊಂಡಿರುವ ನಟಿ ಅಭಿಮಾನಿಗಳಿಗೂ ಶುಭ ಕೋರಿದ್ದಾರೆ.
ಅನನ್ಯಾ ಪಾಂಡೆ ಹೋಳಿ ಹಬ್ಬ: ನಟಿ ಅನನ್ಯಾ ಪಾಂಡೆ ಸಹ ತಮ್ಮ ಸುಮದರ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹೋಇ ಹಬ್ಬದ ಶುಭಾಶಯ ಕೋರಿದ್ದಾರೆ. ಆಯುಷ್ಮಾನ್ ಖುರಾನ ಜೊತೆ ಡ್ರೀಮ್ ಗರ್ಲ್ 2 ನಲ್ಲಿ ನಟಿಸುತ್ತಿರುವ ಅನನ್ಯಾ ಪಾಂಡೆ ಸಿನಿಮಾದಿಂದ ತಮ್ಮ ಲುಕ್ ಅನ್ನು ಹಂಚಿಕೊಂಡಿದ್ದಾರೆ.
ಸೋನಾಕ್ಷಿ ಸಿನ್ಹಾ ಹೋಳಿ ಸೆಲೆಬ್ರೇಶನ್: ನಟಿ ಸೋನಾಕ್ಷಿ ಸಿನ್ಹಾ ತಮ್ಮ ಸೆಲ್ಫಿ ಹಂಚಿಕೊಂಡು ಅಭಿಮಾನಿಗಳಿಗೆ ಹೋಳಿ ಹಬ್ಬದ ಶುಭ ಕೋರಿದ್ದಾರೆ. ವದಂತಿಯ ಗೆಳೆಯ ಜಯೀರ್ ಇಕ್ಬಾಲ್ ಸಹ ಈ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ಸೋನಾಕ್ಷಿ ಸಿನ್ಹಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.