'ವಿಕ್ರಾಂತ್ ರೋಣ' ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಸಿನಿಮಾ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಕ್ರಾಂತ್ ಆಗಿ ಅಭಿನಯಿಸುತ್ತಿರುವ ಹೈ ವೋಲ್ಟೇಜ್ ಚಿತ್ರವಾಗಿದೆ. ಈ ಸಿನಿಮಾ ಕರ್ನಾಟಕ ಅಲ್ಲದೇ ದೇಶಾದ್ಯಂತ ಸಖತ್ ಕ್ರೇಜ್ ಹುಟ್ಟಿಸಿದೆ. ಕೆಲ ದಿನಗಳ ಹಿಂದೆ ರಾ ರಾ ರಕ್ಕಮ್ಮ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿ, ಸೋಷಿಯಲ್ ಮಿಡಿಯಾದಲ್ಲಿ ಮಿಲಿಯನ್ ಗಟ್ಟಲೇ ಜನರು ವೀಕ್ಷಿಸಿ ಇದನ್ನು ಮೆಚ್ಚಿಕೊಂಡಿದ್ದಾರೆ. ಇದೀಗ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಈ ಹಾಡಿನ ವಿಚಾರವಾಗಿ ಕನ್ನಡದಲ್ಲಿ ಮಾತನಾಡಿದ್ದಾರೆ.
ಈ ಹಾಡು ಸೂಪರ್ ಹಿಟ್ ಆಗಿರೋದಕ್ಕೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್, ಕನ್ನಡದಲ್ಲಿ ಮಾತನಾಡಿದ್ದಾರೆ. ದೇಶದೆಲ್ಲೆಡೆ ವಿಕ್ರಾಂತ್ ರೋಣ ಸಿನಿಮಾದ ರಕ್ಕಮ್ಮ ಹಾಡಿನದ್ದೇ ಹವಾ. ಈ ಹಾಡು ಇಷ್ಟು ದೊಡ್ಡ ಮಟ್ಟಕ್ಕೆ ಹಿಟ್ ಆಗಿರೋದಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದು ಜಾಕ್ವೆಲಿನ್ ಫರ್ನಾಂಡೀಸ್ ಸಂತಸ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಅನೂಪ್ ಭಂಡಾರಿ ಬರೆದಿರುವ ಸಾಹಿತ್ಯಕ್ಕೆ ನಕ್ಷಾ ಅಜೀಜ್ ಹಾಗೂ ಸುನಿಧಿ ಚೌಹಾನ್ ಸಖತ್ತಾಗಿ ಹಾಡಿದ್ದು, ಅಜನೀಶ್ ಲೋಕನಾಥ್ ಕ್ಯಾಚಿ ಟ್ಯೂನ್ಸ್ ಹಾಕಿದ್ದಾರೆ.