ಕರ್ನಾಟಕ

karnataka

ETV Bharat / entertainment

'OMG... ನನ್ನನ್ನು ತವರಿಗೆ ಕರೆದೊಯ್ತು ಕಾಂತಾರ'.. ತುಳುನಾಡ ಬೆಡಗಿ ಶಿಲ್ಪಾ ಶೆಟ್ಟಿ ಮೆಚ್ಚುಗೆ - Bollywood actress Shilpa Shetty

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಕಾಂತಾರ ಚಿತ್ರವನ್ನು ವೀಕ್ಷಿಸಿ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Bollywood actress Shilpa Shetty compliments on Kantara movie
ಕಾಂತಾರಗೆ ನಟಿ ಶಿಲ್ಪಾ ಶೆಟ್ಟಿ ಮೆಚ್ಚುಗೆ

By

Published : Oct 18, 2022, 5:19 PM IST

ಕಾಂತಾರ...ಕಾಂತಾರ...ಕಾಂತಾರ. ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೇರಿಸಿದ ಚಿತ್ರವಿದು. ಪರಭಾಷಿಗರನ್ನು ಚಂದನವನದತ್ತ ಸೆಳೆದ ಸಿನಿಮಾವಿದು. ಸಿನಿ ಪ್ರಿಯರು ಮಾತ್ರವಲ್ಲದೇ ಚಿತ್ರರಂಗದ ಸೂಪರ್​ ಸ್ಟಾರ್​ಗಳ ಮೆಚ್ಚುಗೆಗೂ ಪಾತ್ರವಾದ ಚಿತ್ರವಿದು. ಸಿನಿಮಾ ಬಿಡುಗಡೆ ಅಗಿ ಮೂರು ವಾರಗಳು ಆಗುತ್ತ ಬಂದಿದ್ದು ಕ್ರೇಜ್​ ಮಾತ್ರ ಕಡಿಮೆ ಆಗಿಲ್ಲ. ದಿನ ಕಳೆದಂತೆ ಪ್ರೇಕ್ಷಕರ, ಮೆಚ್ಚುಗೆ ವ್ಯಕ್ತಪಡಿಸುವವರ ಸಂಖ್ಯೆ ಹೆಚ್ಚುತ್ತಲಿದೆ. ಈ ಸಾಲಿಗೆ ಈಗ ತುಳುನಾಡಿನ ಶಿಲ್ಪಾ ಶೆಟ್ಟಿ ಹೊಸ ಸೇರ್ಪಡೆ.

ವಿಭಿನ್ನ ಕಥಾಹಂದರವುಳ್ಳ ಕಾಂತಾರ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶಿಸುವುದರ ಜೊತೆಗೆ ಅತ್ಯದ್ಭುತ ಅಭಿನಯ ಮಾಡಿದ್ದಾರೆ. ಕರಾವಳಿ ಮೂಲದ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಕಾಂತಾರ ಚಿತ್ರವನ್ನು ವೀಕ್ಷಿಸಿ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಂತಾರಗೆ ನಟಿ ಶಿಲ್ಪಾ ಶೆಟ್ಟಿ ಮೆಚ್ಚುಗೆ

ಚಿತ್ರಮಂದಿರದಲ್ಲಿ ಕಾಂತಾರ ಸಿನಿಮಾವನ್ನು ವೀಕ್ಷಿಸಿದೆ. ಓ ಮೈ ಗಾಡ್! ಎಂಥಹ ನಿರೂಪಣೆ, ಭಾವನೆ, ವೈಬ್. ಕ್ಲೈಮ್ಯಾಕ್ಸ್ ಅಂತೂ ಅತ್ಯದ್ಭುತ. ವೀಕ್ಷಕನನ್ನು ಹೊಸ ಜಗತ್ತಿಗೆ ಕರೆದೊಯ್ಯುತ್ತದೆ. ನಾನು ಸೇರಿದ ಜಗತ್ತಿಗೆ, ನಿಜವಾಗಿಯೂ ನನ್ನನ್ನು ನನ್ನ ಮೂಲಕ್ಕೆ ಕರೆದೊಯ್ತು ಈ ಸಿನಿಮಾ. ಕಥೆ ಹೇಳುವಿಕೆ, ಹೃದಯ, ನಂಬಿಕೆ ಮತ್ತು ನಿರ್ದೇಶನದ ಸಂಪೂರ್ಣ ಪ್ರಕಾಶಕ್ಕಾಗಿ ಈ ಸಿನಿಮಾವನ್ನು ನೋಡಲೇಬೇಕು. ರಿಷಬ್ ಶೆಟ್ಟಿ ನಿಮ್ಮ ಬಹುಮುಖ ಪ್ರತಿಭೆಗೆ ಹ್ಯಾಟ್ಸ್ ಆಫ್, ಈ ಯೋಜನೆಯಲ್ಲಿ ನೀವು ಅನೇಕ ಕ್ಯಾಪ್ ಗಳನ್ನು ಧರಿಸಿದ್ದೀರಿ ಮತ್ತು ಅದಕ್ಕೆ ಗರಿಗಳನ್ನು ಕೂಡ ಸೇರಿಸಿದ್ದೀರಿ. ಯಶಸ್ಸನ್ನು ಆನಂದಿಸಿ ಎಂದು ಶುಭ ಕೋರಿದ್ದಾರೆ.

ಇದನ್ನೂ ಓದಿ:'ಕಾಂತಾರವೆಂಬ ಅದ್ಭುತ ಪಾಠ ಮಾಡಿದ ರಿಷಬ್ ಶೆಟ್ಟಿಗೆ ಫೀಸ್​ ಪಾವತಿಸಬೇಕಾಗುತ್ತದೆ' - ಆರ್​ಜಿವಿ ಟ್ವೀಟ್

ಮೊದಲು ಕನ್ನಡಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಪಡೆಯಿತು. ಬಳಿಕ ಹಿಂದಿ ಮತ್ತು ತೆಲುಗಿನಲ್ಲಿ ಡಬ್ ಆಗಿ ಹೊರ ರಾಜ್ಯಗಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಇನ್ನೆರಡು ದಿನಗಳಲ್ಲಿ ಮಲಯಾಳಂ ಭಾಷೆಯಲ್ಲೂ ಈ ಸಿನಿಮಾ ತೆರೆ ಕಾಣಲಿದೆ.

ABOUT THE AUTHOR

...view details