ಜಯಾ ಬಚ್ಚನ್, ಶ್ವೇತಾ ನಂದಾ ಮತ್ತು ನವ್ಯಾ ನವೇಲಿ ನಂದಾ ಅವರು 'ವಾಟ್ ದಿ ಹೆಲ್ ನವ್ಯಾ' ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದು, ತಮ್ಮ ಸಂಭಾಷಣೆಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಾಗಿದ್ದಾರೆ.
ಮೊದಲು ಅವರು ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದರೆ, ಈ ಬಾರಿ ಅವರ ಸಂಭಾಷಣೆಯು ಋತುಬಂಧ, ಋತು ಅವಧಿಯ ಕಥೆಗಳು ಮತ್ತು ಲೈಂಗಿಕ ಶಿಕ್ಷಣದಂತಹ ವಿಷಯಗಳು ಸೇರಿದಂತೆ ಸ್ತ್ರೀ ಆರೋಗ್ಯ ಮತ್ತು ಸ್ವಾಸ್ಥ್ಯದ ಮೇಲೆ ಕೇಂದ್ರೀಕೃತವಾಗಿತ್ತು.
ಇತ್ತೀಚಿನ ಸಂಚಿಕೆ 'ಬಯಾಲಜಿ: ಬ್ಲೆಸ್ಡ್ ಬಟ್ ಬಯಾಸ್ಡ್' ಎಂಬ ಶೀರ್ಷಿಕೆ ಹೊಂದಿತ್ತು. ಮಹಿಳೆಯರ ಸರ್ವಾಂಗೀಣ ಆರೋಗ್ಯ ಮತ್ತು ಕ್ಷೇಮ ಕುರಿತು ಪ್ರತಿಕ್ರಿಯಿಸಿದ ಶ್ವೇತಾ ನಂದಾ, "ಅದೆಷ್ಟೋ ಮಹಿಳೆಯರು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ ಮತ್ತು ಇದು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಭಾರತೀಯ ಮಹಿಳೆಯರಿಗೆ ಮೂಳೆಯ ಆರೋಗ್ಯದ ಬಗ್ಗೆ ಏನೂ ತಿಳಿದಿಲ್ಲ. ಒಂದು ನಿರ್ದಿಷ್ಟ ಹಂತದ ನಂತರ ಕ್ಯಾಲ್ಸಿಯಂ ಮಹಿಳೆಯರಿಗೆ ತುಂಬಾ ಮುಖ್ಯವಾಗಿದೆ ಎಂದರು.